Search


ವೈರಲ್ ಆಯ್ತು ನಟ ದರ್ಶನ್ ಲೇಟೆಸ್ಟ್ ಫೋಟೋ: ಹೆಂಗಿದ್ದವರು ಹಿಂಗಾದ್ರಲ್ಲಾ ಎಂದು ಬೇಸರಿಸಿದ ಫ್ಯಾನ್ಸ್

ನಟ ದರ್ಶನ್ ರ ಇತ್ತೀಚೆಗಿನದ್ದು ಎನ್ನಲಾದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ದರ್ಶನ್ ಮುಖ ಕಳೆಗುಂದಿದ್ದು ತೀರಾ ಸುಸ್ತಾದವರಂತೆ ಕಾಣುತ್ತಿದ್ದಾರೆ. ಮೊದಲಿನಂತೆ ಅವರ ಮುಖ ಗುಂಡು ಗುಂಡಗೆ ಕಾಣುತ್ತಿಲ್ಲ.
ತೀರಾ ಇಳಿದುಹೋದವರಂತೆ ಕಾಣುತ್ತಿರುವ ಈ ಫೋಟೋ ನೋಡಿ ಫ್ಯಾನ್ಸ್ ಬೇಸರಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಹೇಗಿದ್ದವರು? ಆಜಾನುಬಾಹು ಶರೀರ, ಸುತ್ತಲೂ ಜನ, ಹಣ, ಖ್ಯಾತಿ ಎಲ್ಲವೂ ಇತ್ತು. ಆದರೆ ಈಗ ಯಾವುದೋ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡು ಈ ರೀತಿ ಬದುಕುವಂತಾಯ್ತಲ್ಲಾ ಎಂದು ಫ್ಯಾನ್ಸ್ ಬೇಸರಿಸಿಕೊಂಡಿದ್ದಾರೆ.
ಅಷ್ಟಕ್ಕೂ ಇದು ಲೇಟೆಸ್ಟ್ ಫೋಟೋವೇ ಎಂದು ಕನ್ ಫರ್ಮ್ ಆಗಿಲ್ಲ. ಆದರೆ ಇದು ರೇಣುಕಾಸ್ವಾಮಿ ಮರ್ಡರ್ ಕೇಸ್ ನಂತರದ ಫೋಟೋ ಎನ್ನುವಂತಿದೆ. ಅದೇನೇ ಆಗಲಿ ಈ ಫೋಟೋವಂತೂ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

By News Desk - 03-06-2026


Ads in Post