Search


ಅದ್ದೂರಿ ಸಂಕ್ರಾಂತಿ ಆಚರಣೆ :ಗ್ರಾಮೀಣ ಸೊಬಗಿನ ಹಬ್ಬ

ಅದ್ದೂರಿ ಸಂಕ್ರಾಂತಿ ಆಚರಣೆ :ಗ್ರಾಮೀಣ ಸೊಬಗಿನ ಹಬ್ಬ 

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕೆ. ಹೊಸೂರು ಗ್ರಾಮದಲ್ಲಿ ಅದ್ದೋರಿಯಾಗಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಯಿತಿ. 
ಗ್ರಾಮದ ವೈಗಳಮ್ಮ ದೇವಾಲಯದ ಸನ್ನಿಧಿಯಲ್ಲಿ ಪೂಜೆ ಬಳಿಕ ರಾಶಿ ಪೂಜೆ, ರಾಸು ಪೂಜೆ, ರಂಗೋಲಿ ಸ್ಪರ್ಧೆ, ಹಾಡು ಹಾಡುವ ಸ್ಪರ್ಧೆ, ಸೇರಿದಂತೆ ಹತ್ತು ಹಲವು ಸಂಸ್ಕೃತಿ ಕಾರ್ಯಕ್ರಮ ಕಣ್ಮನ ಸೆಳೆದವು. ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ಸಂಭ್ರಮದ ಸಂಕ್ರಾಂತಿ ಆಚರಿಸಿದರು. 
ಮಕ್ಕಳ ಕೋಲಾಟ ಎಲ್ಲರ ಗಮನ ಸೆಳೆದವು. ಗ್ರಾಮದ ಮುಖಂಡರು, ಹಿರಿಯರು, ಕಿರಿಯರು ಒಟ್ಟು ಸೇರಿ ಸಂಭ್ರಮ ಪಟ್ಟರು. 
ಹೆಚ್. ಎಂ. ಶ್ರೀನಿವಾಸ್, ನಂಜೇಗೌಡ, ರವಿ ಕುಮಾರ್, ಅಪ್ಪಯ್ಯಣ್ಣ ಸೇರಿ ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ಆಚರಣೆಗಳು ಹಬ್ಬಕ್ಕೆ ಮೆರುಗು ತಂಡವು.

By thebigbulletin.com - 15-01-2026


Ads in Post