Search


ಆಪರೇಷನ್‌ ಟೈಗರ್‌ : ಶಿವಸೇನೆಗೆ ಮತ್ತೇ ಆಪರೇಷನ್‌ ಮಾಡಿದ ಬಿಜೆಪಿ..!

ಮುಂಬೈ: ಆಪರೇಷನ್‌ ಟೈಗರ್‌ ಹೆಸರಿನಲ್ಲಿ ಮಹರಾಷ್ಟ್ರದ ಉದ್ದವ್‌  ಬಣದ ಶಿವಸೇನೆಗೆ ಆಪರೇಶನ್‌ ಮಾಡಿರುವ ಎನ್‌ಡಿಯ ಮೈತ್ರಿಕೂಟ ಕಡೆಗೂ ಸಕ್ಸಸ್‌ ಆಗಿದೆ, ಶಿವಸೇನೆಯ 6 ಸಂಸದರು, ಶಿಂಧೆ ಬಣದ ಶಿವಸೇನೆಗೆ ಸೇರಲು ಒಲವು ತೋರಿಸಿದ್ದು, ಅಧಿಕೃತವಾಗಿ ಸ್ಪೀಕರ್‌ ಓಂ ಬಿರ್ಲಾರನ್ನ ಭೇಟಿಯಾಗಿ ತಮಗಾಗಿ ಸಂಸತ್ತಿನಲ್ಲಿ ಪ್ರತ್ಯೇಕ ಸೀಟ್‌ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಸಂಸತ್‌ನಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದ್ದು,  ಡಿಲಿಮಿಟೇಷನ್‌ ಕಾಯ್ದೆ ಪಾಸ್‌ ಮಾಡಿಕೊಳ್ಳಲು ಬೇಕಾಗುವ ಬಹುಮತದ ಹತ್ತಿರಕ್ಕೆ ಬಿಜೆಪಿ ಹತ್ತಿರವಾಗಿದೆ.

ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ನಿನ್ನೆ ಬೆಳಗ್ಗೆ ದೆಹಲಿಯಲ್ಲಿ ಕರೆದಿದ್ದ ಅತ್ಯಂತ ನಿರ್ಣಾಯಕ ಸಂಸದರ ಸಭೆಗೆ ಆರು ಲೋಕಸಭಾ ಸಂಸದರು ಗೈರಾಗುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಇರೊಂದಿಗೆ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿನ ಒಡಕು ಈಗ ಸ್ಪಷ್ಟವಾದಂತಾಗಿದೆ. ದೇಶದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಸಂಸದರು ಪಕ್ಷಾಂತರ ಮಾಡಿದ್ದ ಬೆನ್ನಲ್ಲೇ, ಈಗ ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದಲ್ಲೂ ಭಾರಿ ವಿಭಜನೆ ದೃಢಪಟ್ಟಿದೆ.

ಮೂಲಗಳ ಪ್ರಕಾರ, ಉದ್ಧವ್ ಸೇನೆಯು ಮೊದಲು ಈ ಬಂಡಾಯ ಸಂಸದರಿಗೆ ‘ಶೋಕಾಸ್ ನೋಟಿಸ್’ (ಕಾರಣ ಕೇಳಿ ನೋಟಿಸ್) ಜಾರಿ ಮಾಡಲಿದೆ. ಅದಾದ ಬಳಿಕ ಇವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಲೋಕಸಭಾ ಸ್ಪೀಕರ್ ಅವರಿಗೆ ಅಧಿಕೃತವಾಗಿ ದೂರು ನೀಡುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಈ ರಾಜಕೀಯ ಹೈಡ್ರಾಮಾ ಈಗ ದೆಹಲಿಯ ಸಂಸತ್ತಿನ ಅಂಗಳ ತಲುಪಿದೆ.

ಉದ್ಧವ್ ಬಣದಲ್ಲಿ ಒಟ್ಟು 9 ಲೋಕಸಭಾ ಸಂಸದರಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಬೇಕಾದರೆ 3ನೇ 2ರಷ್ಟು ಅಂದರೆ ಕನಿಷ್ಠ 6 ಸಂಸದರು ಒಟ್ಟಿಗೆ ಹೊರಬರಬೇಕಿತ್ತು. ಬಂಡಾಯಗಾರರು ನಿಖರವಾಗಿ ಇದೇ ಸಂಖ್ಯೆಯನ್ನು ತಲುಪಿದ್ದಾರೆ.

ಇನ್ನು ಬಂಡಾಯ ಸಂಸದರು ಯಾರು ಎಂದು ಗಮನಿಸುವುದಾದರೆ..!

ಸಂಜಯ್ ದಿನಾ ಪಾಟೀಲ್

ಸಂಜಯ್ ದೇಶಮುಖ್

ಸಂಜಯ್ (ಬಂದು) ಜಾಧವ್

ಓಂರಾಜೆ ನಿಂಬಾಳ್ಕರ್

ಸಂಜಯ್ ವಕ್ಚೌರೆ

ನಾಗೇಶ್ ಪಾಟೀಲ್ ಅಶ್ಟಿಕರ್
 

By Ravikumar - 19-06-2026


Ads in Post