Search


ಬಿಗ್ ಬಾಸ್‌ನಲ್ಲಿ ಬಿಗ್ ಟ್ವಿಸ್ಟ್; ಮಂಜು-ಕಿರಣ್ ಶಾಸ್ತ್ರಿ ಎಲಿಮಿನೇಷನ್ ಇಲ್ಲ, ಸೀಕ್ರೆಟ್ ರೂಮ್‌ಗೆ ಎಂಟ್ರಿನಾ?

ಬಿಗ್ ಬಾಸ್ ಕನ್ನಡದ ವಾರಾಂತ್ಯದ ಪಂಚಾಯಿತಿಯಲ್ಲಿ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಮತ್ತೊಂದು ಅನಿರೀಕ್ಷಿತ ಶಾಕ್ ಎದುರಾಗಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಡೆದ ‘ಕನ್ನಡಿ ಪರೀಕ್ಷೆ’ ಸಾಕಷ್ಟು ಕುತೂಹಲ ಮೂಡಿಸಿತು. ಅವಿನಾಶ್ ಹಾಗೂ ವೈಷ್ಣವಿ ಅವರ ಕನ್ನಡಿ ಗಾಜು ಒಡೆಯದೇ ಉಳಿದಿದ್ದರಿಂದ ಅವರು ಸೇಫ್ ಆಗಿ ಮನೆಗೆ ಮರಳಿದರು. ಆದರೆ ಮಂಜು ಹಾಗೂ ಕಿರಣ್ ಶಾಸ್ತ್ರಿ ಅವರ ಕನ್ನಡಿ ಗಾಜು ಒಡೆದು ಪುಡಿಯಾದಾಗ ಮನೆಯಲ್ಲಿದ್ದ ಸ್ಪರ್ಧಿಗಳು ಶಾಕ್‌ಗೆ ಒಳಗಾದರು.

ಮಂಜು ಹಾಗೂ ಕಿರಣ್ ಶಾಸ್ತ್ರಿ ಎಲಿಮಿನೇಟ್ ಆಗಿದ್ದಾರೆ ಎಂಬ ಭಾವನೆ ಮೂಡುತ್ತಿದ್ದಂತೆಯೇ ಕಿಚ್ಚ ಸುದೀಪ್ ಪರದೆ ಮೇಲೆ ಕಾಣಿಸಿಕೊಂಡು ದೊಡ್ಡ ಸರ್ಪ್ರೈಸ್ ನೀಡಿದರು. ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎಂದು ಘೋಷಿಸುವ ಮೂಲಕ ಎಲ್ಲ ಸ್ಪರ್ಧಿಗಳನ್ನೂ ಸೇಫ್ ಮಾಡಿದರು. ಇದರಿಂದ ಕೆಲವೇ ಕ್ಷಣಗಳಲ್ಲಿ ಮನೆಯ ವಾತಾವರಣವೇ ಬದಲಾಗಿತ್ತು.

ಇದೇ ವೇಳೆ ಮನೆಯಲ್ಲಿ ನಡೆದ ಕೆಲ ಬೆಳವಣಿಗೆಗಳ ಬಗ್ಗೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದರು. ಸ್ಪರ್ಧಿಗಳು ತಮ್ಮ ಮನಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿತ್ತು ಎಂದು ಹೇಳಿದ ಅವರು, ಮನೆಯಲ್ಲಿ ನಡೆದ ಕೆಲವು ವಿಚಾರಗಳು ತಮಗೆ ತೀವ್ರ ಬೇಸರ ತಂದಿವೆ ಎಂದರು. “ನಿಮ್ಮ ಮೇಲಿನ ಪ್ರೀತಿಯಿಂದಲೇ ಹೇಳುತ್ತಿದ್ದೇನೆ; ತಿದ್ದಿ ಬುದ್ಧಿ ಹೇಳುವುದು ನಮ್ಮ ಕೆಲಸ, ಅದನ್ನು ಅರಿತು ತಿದ್ದಿಕೊಳ್ಳುವುದು ನಿಮ್ಮ ಕೆಲಸ” ಎಂದು ಸುದೀಪ್ ಹೇಳಿದರು.

ಇದೀಗ ಎಲಿಮಿನೇಷನ್ ಇಲ್ಲದಿರುವುದರಿಂದ ಮಂಜು ಹಾಗೂ ಕಿರಣ್ ಶಾಸ್ತ್ರಿ ಸೀಕ್ರೆಟ್ ರೂಮ್‌ಗೆ ಹೋಗಿದ್ದಾರಾ? ಎಂಬ ಕುತೂಹಲ ಹೆಚ್ಚಾಗಿದೆ. ಈ ಹಿಂದೆ ಧ್ರುವಂತ್ ಹಾಗೂ ರಕ್ಷಿತಾ ಅವರನ್ನು ಸೀಕ್ರೆಟ್ ರೂಮ್‌ನಲ್ಲಿ ಇರಿಸಲಾಗಿತ್ತು. ಅದೇ ರೀತಿ ಮಂಜು ಮತ್ತು ಕಿರಣ್ ಶಾಸ್ತ್ರಿಗೂ ಬಿಗ್ ಬಾಸ್ ಸೀಕ್ರೆಟ್ ರೂಮ್ ಟ್ವಿಸ್ಟ್ ನೀಡಿರಬಹುದು ಎಂಬ ಚರ್ಚೆ ಅಭಿಮಾನಿಗಳಲ್ಲಿ ಶುರುವಾಗಿದೆ.

By Ravikumar - 21-09-2026


Ads in Post