Search


ರಾಜ ಶ್ರೀರಂಗದೇವರಾಯಲು ಅವರ ನಾಲ್ಕನೆಯ ಪುಣ್ಯ ಸ್ಮರಣೆ ಒಳಗೆ ಕಂಚಿನ ಪುತ್ತಳಿ ನಿರ್ಮಾಣ.

ಮಾಜಿ ಶಾಸಕ ಶ್ರೀರಂಗದೇವರಾಯಲು ಅವರ ನಾಲ್ಕನೆಯ  ಪುಣ್ಯ ಸ್ಮರಣೆ ಒಳಗೆ ಕಂಚಿನ ಪುತ್ತಳಿ ನಿರ್ಮಾಣ... ಮಾಜಿ ಶಾಸಕ ಪರಣ್ಣ ಮುನವಳ್ಳಿ.
 ಗಂಗಾವತಿ... ಪ್ರಸ್ತುತ ರಾಜಕಾರಣಿಗಳಿಗೆ ಮಾಜಿ ಸಚಿವ ಶಾಸಕ ಶ್ರೀರಂಗ ದೇವಾಯಲು ಅವರ ರಾಜಕೀಯ ಜೀವನ ಮಾದರಿಯಾಗಿದ್ದು ಮುಂದಿನ ನಾಲ್ಕನೆಯ ವರ್ಷದ ಪುಣ್ಯ ಸ್ಮರಣೆ ಒಳಗೆ ರಾಯಲು ಅವರ ಕಂಚನ ಪುತ್ತಳಿ ನಿರ್ಮಿಸುವುದರ ಮೂಲಕ ಅಲ್ಲಿಂದ ಪೂಜೆ ನೆರವೇರಿಸಿ ಬಳಿಕ ಅವರ ಪುಣ್ಯ ಕರ್ಮ ಭೂಮಿ ಸಮಾಧಿಗೆ ಪೂಜಿ ಸಲ್ಲಿಸುವುದು ಶತಸಿದ್ಧ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ನಾಲ್ಕನೇ ವರ್ಷದ ಪುಣ್ಯ ಸ್ಮರಣೆ  ಅಂಗವಾಗಿ  ಶ್ರೀರಂಗ ದೇವರಾಯಲು ಪ್ರತಿಷ್ಠಾನ ಸಮಿತಿ ಆಯೋಜಿಸಿದ ವೇದಿಕೆ ಹಾಗೂ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಸತತ 25 ವರ್ಷಗಳ ಕಾಲ ಜನಸೇವಕ ಶಾಸಕರಾಗಿ ಕಾರ್ಯ ನಿರ್ವಹಿಸುವ ರಾಜ ಶ್ರೀರಂಗ ದೇವರಾಯಲು ಅವರ ಕಂಚಿನ ಪುತ್ತಳಿ ನಿರ್ಮಾಣಕ್ಕೆ ಯಾವುದೇ ಕಾನೂನು ಅಡೆತಡೆ  ಆಗದಂತೆ  ಕಾನೂನು ಬದ್ಧವಾಗಿ ಸರ್ಕಾರದ ಅನುಮತಿಯನ್ನು ಪಡೆದುಕೊಂಡು ಪಕ್ಷಾತೀತವಾಗಿ ನಿರ್ಮಾಣಕ್ಕೆ ತಾವುಬದ್ದ ರಾಗಿರುವುದಾಗಿ ಘೋಷಿಸಿದರು. ರಾಜ ಮಾತೆ ಶ್ರೀಮತಿ ಲಲಿತಾ ರಾಣಿ ರಾಯಲು. ಮಾತನಾಡಿ ಕನಕಗಿರಿ ಗಂಗಾವತಿ ಸೇರಿದಂತೆ ಪ್ರತಿಯೊಬ್ಬ ಪ್ರಜೆಗಳಬಿಡಿ ಕಾಸು ನೆರವಿನೊಂದಿಗೆ ಕಂಚಿನ ಪುತ್ತಳಿ ನಿರ್ಮಾಣಕ್ಕೆ ಮುಂದಾಗಿದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹೆಚ್ಎಂ ಸಿದ್ದರಾಮಯ್ಯ ಸ್ವಾಮಿ ಎಸ್ ಪ್ರಸಾದ್ ಕಲ್ಯಾಣ ನಾಗೇಶ್ವರ ಡಿಜಿ ಬಾಬು ವಿಶ್ವನಾಥ್ರಾಜ ಯುವರಾಜ ಯಾದವರಾವ್ ವಕೀಲರು ಬಾಬಿ ರೆಡ್ಡಿ ಸಪ್ನಾ ಕೃಷ್ಣ ಗ್ಯಾರೆಂಟಿ ಯೋಜನಾ ಸಮಿತಿ ಅಧ್ಯಕ್ಷ ವೆಂಕಟೇಶ್ ಹೊನ್ನಪ್ಪ ನಾಯಕ್ ಕೆ. ನಿಂಗಜ್ಜ  ಅಂಜಿನಪ್ಪ ರಾಜು ನರಸಿಂಹಲು ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

By thebigbulletin.com - 25-08-2026


Ads in Post