ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ (Actor Darshan) ಅರೆಸ್ಟ್ ಆಗಿ ಇಂದಿಗೆ(ಜೂ.11) 2 ವರ್ಷ ಪೂರೈಸಲಿದೆ. ಇದರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕಿಡಿಗೇಡಿಗಳ ಕಾಟ ಮುಂದುವರಿದಿದ್ದು. ಅಶ್ಲೀಲವಾಗಿ ಕಮೆಂಟ್ ಮಾಡಿ ನಿಂದಿಸಿದ್ದಾರೆ, ಈ ಕುರಿತು ಪೊಲೀಸರು ತನಿಕೆ ಕೈಗೊಂಡಿದ್ದಾರೆ.
ಕರ್ನಾಟಕದ ಜನಪ್ರಿಯ ನಟ ದರ್ಶನ್ ಕೊಲೆ ಕೇಸಲ್ಲಿ 2024 ಜೂನ್ 11ರಂದು ಮೈಸೂರಿನಲ್ಲಿ (Mysuru) ಹೋಟೆಲ್ನಲ್ಲಿದ್ದಾಗಲೇ ಅರೆಸ್ಟ್ ಮಾಡಲಾಗಿತ್ತು. ಬಂಧನದ ನಂತರ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಗಾಗಿ ನ್ಯಾಯಾಲಯ ಒಮ್ಮೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು, ಇದಾದ ನಂತರ ಹೊರ ಬಂದ ದರ್ಶನ್ ಡೆವಿಲ್ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಆದರೆ ಇದಾದ ಬಳಿಕ ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್ನಲ್ಲಿ ಬೇಲ್ ಕ್ಯಾನ್ಸಲ್ ಮಾಡಿದ ಹಿನ್ನಲೆ ದಾಸ ಮತ್ತೊಮ್ಮೆ ಜೈಲು ಪಾಲಗಿದ್ದರು.
ಪತ್ನಿ ವಿಜಯಲಕ್ಷ್ಮಿಗೆ ತಪ್ಪದ ಕಿಡಿಗೇಡಿಗಳ ಕಾಣ.!
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ (Vijayalakshmi Darshan) ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕಿಡಿಗೇಡಿಗಳ ಕಾಟ ಮುಂದುವರಿದಿದೆ. ಕೆಲ ಕಾಮುಕರು ‘ಜಲಗಾರ ಯೂನಿವರ್ಸಿಟಿ’ ಎಂಬ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಅಶ್ಲೀಲ ಪದಗಳು ಹಾಗೂ ಅತ್ಯಂತ ಕೆಟ್ಟದಾಗಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ನಕಲಿ ಅಕೌಂಟ್ ತೆರೆದು ಅಶ್ಲೀಲ ಪದಗಳಿಂದ ನಿಂದನೆ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಸೈಬರ್ ಕಿರುಕುಳಕ್ಕೆ ಬ್ರೇಕ್ ಹಾಕುವಂತೆ ಪೊಲೀಸರ ಬಳಿ ವಿಜಯಲಕ್ಷ್ಮಿ ಮನವಿ ಮಾಡಿದ್ದು, ನಕಲಿ ಖಾತೆಗಳನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.