ಆನೇಕಲ್: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದೊಂದು ವರ್ಷದಿಂದ ಜೈಲುಪಾಲಾಗಿರುವ ನಟ ದರ್ಶನ್ರನ್ನ ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದು, ಅವರ ಜೊತೆ ದರ್ಶನ್ ಅವರ ಆಪ್ತ ನಟ ಝೈದ್ ಖಾನ್ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾಗಿದ್ದಾರೆ.
ನಿನ್ನೆ (ಸೆ.1) ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ಅವರೊಂದಿಗೆ ನಟ ಝೈದ್ ಖಾನ್ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಆಗಮಿಸಿದ್ದರು. ಹಣ್ಣು ಹಂಪಲು ತೆಗೆದುಕೊಂಡು ದರ್ಶನ್ ಭೇಟಿಗೆ ಬಂದಿದ್ದ, ಇಬ್ಬರು ದಚ್ಚುಗೆ ಆತ್ಮಸ್ಥೈರ್ಯ ತುಂಬಿದು, ಒಳ್ಳೆ ಸಮಯ ಬರುತ್ತೆ ಎಂಬ ಭರವಸೆ ನೀಡಿದ್ದಾರೆ. ಈ ವೇಳೆ ನಟ ದರ್ಶನ್ ಝೈದ್ ಖಾನ್ ಅಭಿನಯಿಸುವತ್ತಿರುವ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಕೆಲ ಕಾಲ ಈ ಕುರಿತು ಚರ್ಚಿಸಿ ಎಲ್ಲರೂ ವಾಪಸ್ ತೆರಳಿಸಿದ್ದಾರೆ. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ನಟಿ ರಕ್ಷಿತಾ ಪ್ರೇಮ್ ಕೂಡ ಜೈಲಿಗೆ ಭೇಟಿ ನೀಡಿದ್ದರು.