Search


ದೀರ್ಘಾವಧಿ ಪ್ರಧಾನಿಯಾಗಿ ಸಾಧನೆಗೈದ ಮೋದಿಗೆ ಶುಭಕೋರಿದ ನಟ ಸುದೀಪ್‌, ರಿಷಬ್‌

ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರ ದಾಖಲೆಯನ್ನ ಸರಿಸಿ, ಅತಿ ದೀರ್ಘಾವದಿಗೆ ಆಯ್ಕೆಯಾದ ಪ್ರಧಾನಿ ಎಂಬ ದಾಖಲೆ ಬರೆದಿರುವ ಮೋದಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಡೋನಾಲ್ಡ್‌ ಟ್ರಂಪ್‌ ಸೇರಿದಂತೆ ಹಲವು ರಾಷ್ಟ್ರಗಳ ಪ್ರಧಾನಿಗಳು, ಗಣ್ಯರು ಮೋದಿಗೆ ಶುಭಕೋರಿದ್ದು, ಸ್ಯಾಂಡಲ್‌ವುಡ್‌ ತಾರೆಯರು ಕೂಡ ಮೋದಿಗೆ ಎಕ್ಷ್‌ನಲ್ಲಿ ಶುಭಕೋರಿದ್ದಾರೆ.

ನರೇಂದ್ರ ಮೋದಿಯವರು (Narendra Modi) ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ದಾಖಲೆ ಬರೆದಿದ್ದಾರೆ. ಈ ಹಿಂದೆ ಅತಿಹೆಚ್ಚು ಕಾಲ ಪ್ರಧಾನಿಯಾಗಿ ದಾಖಲೆ ಸೃಷ್ಟಿಸಿದ್ದ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನ ಮುರಿದು ಮುನ್ನುಗ್ಗುತ್ತಿರುವ ನರೇಂದ್ರ ಮೋದಿಯವರಿಗೆ ಸ್ಯಾಂಡಲ್‌ವುಡ್ ತಾರೆಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ. ನಟ ಕಿಚ್ಚ ಸುದೀಪ್‌ ಹಾಗೂ ರಿಷಬ್ ಶೆಟ್ಟಿ ಶುಭಾಶಯ ಕೋರಿದ್ದಾರೆ.

ನರೇಂದ್ರ ಮೋದಿಯವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಕಿಚ್ಚ ಸುದೀಪ್ (Kichcha Sudeep) ʻನಾವು ಈ ಸಾಧನೆಯನ್ನ ಹೆಮ್ಮೆಯಿಂದ ಒಪ್ಪಿಕೊಳ್ಳಬೇಕು. 12 ವರ್ಷಗಳು ಅದೇ ವೇಗ, ಅದೇ ಶಕ್ರಿ, ನಿಧಾನಗತಿಯೇ ಇಲ್ಲ. ನರೇಂದ್ರ ಮೋದಿಯವರೇ ನಿಮ್ಮ ಸಮರ್ಪಣೆ ಮತ್ತು ಸಾಧನೆಗೆ ಹೃದಯಪೂರ್ವಕ ನಮನಗಳು. ಇದು ನಮಗೆ ಹೆಮ್ಮೆಯ ಕ್ಷಣ, ನೀವು ನಿರಂತರವಾಗಿ ಯಶಸ್ಸು ಸಾಧಿಸಿ ಮತ್ತು ಮುಂದೆ ಬರುವ ಎಲ್ಲದರಲ್ಲೂ ನಿಮಗೆ ಶುಭವಾಗಲಿ ಎಂದು ಹಾರೈಸಿದ್ದಾರೆ..

ಇನ್ನೂ ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ (Rishab Shetty) ಕೂಡ ಮೋದಿಯವರ ಸಾಧನೆಯನ್ನ ಕೊಂಡಾಡಿದ್ದಾರೆ. ಎಕ್ಸ್‌ನಲ್ಲಿ ಮೋದಿಯವರಿಗೆ ಅಭಿನಂದನೆ ತಿಳಿಸಿರುವ ರಿಷಬ್, ʻಐತಿಹಾಸಿಕ ನಾಯಕನಿಗೆ ಇದೊಂದು ಮೈಲಿಗಲ್ಲು, ಭಾರತದಲ್ಲಿ ಅತಿ ಹೆಚ್ಚು ಕಾಲ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ವಿಕಸಿತ ಭಾರತಕ್ಕಾಗಿ ಅವಿಶ್ರಾಂತ ಸೇವೆ, ದೂರದೃಷ್ಟಿ ಮತ್ತು ಸಮರ್ಪಣೆ ಶ್ಲಾಘನೀಯ, ರಾಷ್ಟ್ರವನ್ನ ನೀವು ಇನ್ನೂ ಎತ್ತರಕ್ಕೆ ಕೊಂಡೊಯ್ಯಿರಿʼ ಎಂದು ಶುಭ ಕೋರಿದ್ದಾರೆ.

By Ravikumar - 11-06-2026


Ads in Post