Search


ಅದಾನಿ ಒಬ್ಬ ಕಂಟ್ರ್ಯಾಕ್ಟರ್‌ ಆಗಿ ಸಿಎಂ ಭೇಟಿಯಾಗಿದ್ದಾರೆ-ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್‌ ಅವರನ್ನ ಖ್ಯಾತ ಉದ್ಯಮಿ ಗೌತಮ್‌ ಭೇಟಿ ಮಾಡಿರುವ ವಿಷಯ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯೆ ನೀಡಿದ್ದು. ʻಅದಾನಿ ಬಗ್ಗೆ ನಮ್ಮ ಅಭಿಪ್ರಾಯ ಏನೇ ಇರಬಹುದು, ಆದರೆ ಅದಾನಿ ಒಬ್ಬ ಸರ್ಕಾರಿ ಗುತ್ತಿಗೆದಾರನ ರೀತಿ ಸಿಎಂ ಭೇಟಿಯಾಗಿದ್ದಾರೆʼ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಅದಾನಿ ಚಿತ್ತಾಪುರದಲ್ಲಿ ಎಸಿಸಿ ಸಿಮೆಂಟ್‌ ಫ್ಯಾಕ್ಟರಿ ಖರೀದಿ ಮಾಡಿದ್ದಾರೆ, ಇದಕ್ಕೆ ನಾನೇನಾದರು ಮಾಡಲು ಆಗುತ್ತಾ ? ನಾವು ಕೇವಲ ಕಾನೂನು ಪಾಲನೆ ಮಾಡಬೇಕು,ಅವರು ಕಂಟ್ರಾಕ್ಟರ್, ಸರ್ಕಾರಿ ಕಂಟ್ರಾಕ್ಟರ್. ಎರಡು ಪ್ರಾಜೆಕ್ಟ್‌ಗಳಲ್ಲಿ ಎಲ್-1 ಆಗಿದ್ದಾರೆ. ನಮ್ಮ ರಾಜ್ಯಕ್ಕೆ ಆ ಪ್ರಾಜೆಕ್ಟ್‌ಗಳು ಮುಖ್ಯವಾಗಿವೆ. ನಾವು ಟೆಂಡರ್ ಮೇಲೆ ಪರಿಣಾಮ ಬೀರಲು ಆಗುವುದಿಲ್ಲ. ಎಲ್-1 ಆಗಿರುವುದರಿಂದ ಸೌಜನ್ಯಕ್ಕಾಗಿ ಭೇಟಿಯಾಗಿರಬಹುದು. ನಮಗೆ ಅವರು ಕಂಟ್ರಾಕ್ಟರ್ ಅಷ್ಟೇ,” ಎಂದು ಹೇಳಿದರು.

ಇನ್ನು ಈ ವಿಷಯದ ಕುರಿತು ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿದ ಖರ್ಗೆ ʻಕೇಂದ್ರ ಸರ್ಕಾರ ಅಂಬಾನಿ, ಅದಾನಿ ಗುಲಾಮರು ಎಂಬುದು ನಮ್ಮ ಅಭಿಪ್ರಾಯ. ಆದರೆ ಲೀಗಲ್ ಪ್ರೋಸೆಸ್ ಅನ್ನು ನಾವು ತಡೆಯಲು ಅಥವಾ ಬದಲಾಯಿಸಲು ಆಗುವುದಿಲ್ಲ. ನ್ಯಾಯಯುತವಾಗಿ ಟೆಂಡರ್ ಸಿಕ್ಕಿದ್ದರೆ ಏನು ಮಾಡಲಾಗದು, ನಮಗೆ ಕೆಲಸವಾಗುವುದು ಅಷ್ಟೇ ಮುಖ್ಯ, ಅದು ಅಂಬಾನಿ, ಅದಾನಿ ಅಥವಾ ಅಂಬರೀಷ್‌ ಯಾರು ಬೇಕಾದರು ಮಾಡಬಹುದು.

ಅದಾನಿಗೆ ಈಗ ಟೆಂಡರ್ ಸಿಕ್ಕಿದೆ. ಬಿಜೆಪಿ ನಾಯಕರು ಟನಲ್ ಮಾಡಬೇಕು ಅಂತಾರಾ, ಬೇಡ ಅಂತಾರಾ? ಎಂಪಿಗಳು ಈ ಹಿಂದೆ ಬಾಯಿ ಬಡಿದುಕೊಳ್ಳುತ್ತಿದ್ದರು. ಈಗ ಅವರ ನೆಂಟರಿಗೆ ಸಿಕ್ಕಿದೆ. ನೆಂಟರು, ಬೀಗರು ಟೆಂಡರ್ ಹಾಕಬಹುದು. ನಾವು ಬೇಡ ಎನ್ನಲು ಆಗುತ್ತಾ? ನಮ್ಮ ಪಾರದರ್ಶಕ ಪ್ರಕ್ರಿಯೆಯಲ್ಲಿ ಅವರಿಗೆ ಟೆಂಡರ್ ಸಿಕ್ಕಿದೆ. ಅದು ಅವರ ನೆಂಟರು, ಬೀಗರು ಯಾರಿಗಾದರೂ ಸಿಕ್ಕಿರಬಹುದು. ನಾವೇನು ಮಾಡಲು ಆಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

By Ravikumar - 25-08-2026


Ads in Post