ಮುಂಬೈ: ಪಶ್ವಿಮ ಬಂಗಾಳದ ನಂತರ ಇದೀಗ ಮಹರಾಷ್ಟ್ರದಲ್ಲೂ(Maharashtra) ಭಾರೀ ರಾಜಕೀಯ ಹೈಡ್ರಾಮ ನಡೆಯುತ್ತಿದ್ದು , ಠಾಕ್ರೆ ಶಿವಸೇನೆ ಬಣದ 7 ಸಂಸದರು ಎನ್ಡಿಎ ಮೈತ್ರಿಕೂಟಕ್ಕೆ ಪಕ್ಷಾಂತರ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಠಾಕ್ರೆ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ ಬರೋಬ್ಬರಿ ಏಳು ಮಂದಿ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ಶಿವಸೇನೆ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬೆಳವಣಿಗೆಯು ರಾಜ್ಯದಲ್ಲಿ ಮತ್ತೊಂದು ದೊಡ್ಡ ರಾಜಕೀಯ ಹೈಡ್ರಾಮಕ್ಕೆ ಮುನ್ನುಡಿ ಬರೆದಿದೆ.
ಮಾಹಿತಿಗಳ ಪ್ರಕಾರ ಜೂನ್ 7 ರಂದು ನವದೆಹಲಿಯಲ್ಲಿ ಏಕನಾಥ್ ಶಿಂಧೆ ಹಾಗೂ ಉದ್ಧವ್ ಬಣದ ಸಂಸದರ ನಡುವೆ ಅತ್ಯಂತ ಗೌಪ್ಯ ಸಭೆಯೊಂದು ನಡೆದಿದೆ ಎನ್ನಲಾಗಿದೆ. ಈ ಸಭೆಯ ಬೆನ್ನಲ್ಲೇ ಏಳು ಸಂಸದರು ಶಿಂದೆ ಬಣಕ್ಕೆ ಬೆಂಬಲ ಸೂಚಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ. ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಇದರ ನೇತೃತ್ವ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸ್ಥಾನದ ಆಫರ್ ಕೊಟ್ರಾ ಅಮಿತ್ ಶಾ..!
ಇದೇ ಜೂನ್.20ರ ಒಳಗೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು. ಹೊಸ ಸಚಿವರನ್ನ ಕ್ಯಾಬಿನೆಟ್ಗೆ ಸೇರಿಸಿಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಇದೀಗ ಠಾಕ್ರೆ ಬಣದಿಂದ ಬರುವ ಸಂಸದರಿಗೆ ಕೇಂದ್ರ ಸಚಿವ ಸ್ಥಾನದ ಆಫರ್ ನೀಡಲಾಗಿದ್ದು. ಅಮಿತ್ ಶಾ ಅವರ ಜೊತೆ ಏಕನಾಥ್ ಶಿಂಧೆ ಸಭೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಶಿಂದೆ ಬಣಕ್ಕೆ ಸೇರಲಿರುವ ಹೊಸ ಸಂಸದರಲ್ಲಿ ಒಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಆಫರ್ ಉದ್ಧವ್ ಬಣದ ಸಂಸದರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ.
ಒಂದು ವೇಳೆ ಉದ್ದವ್ ಬಣದ 9 ಸಂಸದರ ಪೈಕಿ 7 ಸಂಸದರು ಬಿಜೆಪಿ ಮೈತ್ರಿ ಕೂಟಕ್ಕೆ ಬೆಂಬಲ ಸೂಚಿಸಿದರೆ, ಠಾಕ್ರೆ ಬಣಕ್ಕೆ ಮತ್ತೊಂದು ದೊಡ್ಡ ಹೊಡೆತ ಬೀಳಲಿದ್ದು. ಸಂಸತ್ತಿನಲ್ಲಿ ಬಿಜೆಪಿ ಇದರ ನೇರ ಲಾಭವನ್ನ ಪಡೆಯುತ್ತದೆ