Search


ಹಿಜಾಬ್‌ಗೆ ಮತ್ತೇ ಅವಕಾಶ; ಬಿಜೆಪಿ ಸರ್ಕಾರದ ಆದೇಶವನ್ನ ಕಸದಬುಟ್ಟಿಗೆ ಎಸೆದ ಸಿದ್ದು ಸರ್ಕಾರ

ಬೆಂಗಳೂರು: ಶಾಲ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು. ಇನ್ಮುಂದೆ ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸುವುದನ್ನ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ 2022ರಲ್ಲಿ ಬಿಜೆಪಿ ಸರ್ಕಾರ ನಿಷೇದಿಸಿದ್ದ ಹಿಜಾಬ್‌ ಧರಿಸಲು ಅವಕಾಶ ಕಲ್ಪಿಸಿ ಹೊಸ ಆದೇಶ ಜಾರಿ ಮಾಡಿದೆ.

ಸರ್ವಶಿಕ್ಷಣ ಕಚೇರಿಯಲ್ಲಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಆದೇಶ ಜಾರಿಗೊಳಿಸಿರುವುದಾಗಿ ಹೇಳಿದರು. ಈ ವೇಳೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ʼಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅನುಮತಿ ನೀಡಲಾಗಿದೆ, ಜೊತೆಗೆ ಹಿಂದು ಧರ್ಮದ ಪವಿತ್ರ ದಾರ, ಪೇಟ, ರುದ್ರಾಕ್ಷಿ, ಜನಿವಾರ ಧರಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಷರತ್ತುಗಳೇನು….!

ಹಿಜಾಬ್‌ ಅವಕಾಶ ನೀಡುವುದರ ಜೊತೆಜೊತೆಗೆ ರಾಜ್ಯ ಸರ್ಕಾರ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಅವುಗಳಲ್ಲಿ ಪ್ರಮುಖವಾದವು ಯಾವುದು ಎಂದು ನೋಡುವುದಾದರೆ.
•    ವಿದ್ಯಾರ್ಥಿಗಳು ಧರಿಸುವ ಸಾಂಪ್ರದಾಯಿಕ ಸಂಕೇತಗಳು ಶಾಲಾ ಸಮವಸ್ರ್ತಕ್ಕೆ ಪೂರಕವಾಗಿರಬೇಕು
•    ನಿಗಧಿಪಡಿಸಿರುವ ಸಮವಸ್ತ್ರವನ್ನ ಮಾರ್ಪಡಿಸುವ ರೀತಿಯಲ್ಲಿ ಇರಬಾರದು,
•    ಶಾಲೆಯ ಶಿಸ್ತು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಗುರುತಿಸುವಿಕೆಗೆ ಯಾವುದೇ ಅಡ್ಡಿಯಾಗಬಾರದು
•    ಯಾರನ್ನೂ ಇಂತಹ ಧಿರಿಸು ಧರಿಸುವಂತೆ ಒತ್ತಾಯಿಸುವಂತಿಲ್ಲ ಮತ್ತು ಬಲವಂತವಾಗಿ ತೆಗೆಸುವಂತಿಲ್ಲ
•    ಪರೀಕ್ಷಾ ಸಂಧರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಾಧಿಕಾರಗಳು ನಿಗಧಿಪಡಿಸಿದ ವಸ್ತ್ರ ಸಂಹಿತೆ ಕಡ್ಡಾಯ
ಈ ರೀತಿಯ ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ರಾಜ್ಯ ಸರ್ಕಾರ ಹಿಜಾಬ್‌ಗೆ ಅವಕಾಶ ಕಲ್ಪಿಸಿದ್ದು. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಹಿಜಾಬ್‌ ಕಾದಟ ನಡೆಯುವುದು ನಿಶ್ಚಯವಾದಂತಾಗಿದೆ.

ರವಿಕುಮಾರ್ ನ್ಯೂಸ್ ಡೆಸ್ಕ್ 

By thebigbulletin.com - 14-05-2026


Ads in Post