ಅಯೋಧ್ಯೆ: ಇತ್ತೀಚೆಗಷ್ಟೇ ರಾಮ ಮಂದಿರಕ್ಕೆ ಭಕ್ತರು ಅರ್ಪಿಸಿದ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ನೌಕರರೇ ವ್ಯವಸ್ಥಿತವಾಗಿ ಲೂಟಿ ಮಾಡಿದ ಘಟನೆ ಬಯಲಿಗೆ ಬಂದದೆ. ಈ ಘಟನೆ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಇಚ್ಚೆತ್ತುಕೊಂಡಿದ್ದು, ಮಂದಿರದ ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಮುಂದಾಗಿದೆ. ಸಧ್ಯ ಇದೀಗ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಟ್ರಸ್ಟ್ನ CEO ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ್ದು. ಅರ್ಹತೆ ಉಳ್ಳ ಮತ್ತು ಪ್ರಭು ಶ್ರೀರಾಮನ ಮೇಲೆ ಭಕ್ತಿ ಉಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ರಾಮಮಂದಿರದಲ್ಲಿ ಕಳ್ಳತನ ಮಾಡಿರುವ ಖದೀಮರನ್ನ ಈಗಾಗಲೇ SIT ಬಂಧಿಸಿ ಜೈಲಿಗೆ ಅಟ್ಟಿದ್ದು.ಇದರ ಬೆನ್ನಲ್ಲೇ ಟ್ರಸ್ಟ್ನಿಂದ ಈ ನಿರ್ಧಾರ ಹೊರಬಿದ್ದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಆಯ್ಕೆಯಾಗುವ ಸಿಇಒ ಆರಂಭದಲ್ಲಿ 3 ವರ್ಷಗಳ ಒಪ್ಪಂದದ ಅವಧಿಗೆ ನೇಮಕಗೊಳ್ಳಲಿದ್ದು, ಇಡೀ ಮಂದಿರದ ಆಡಳಿತವನ್ನು ನೋಡಿಕೊಳ್ಳುತ್ತಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಗೆ ವರದಿ ಒಪ್ಪಿಸಬೇಕಾಗುತ್ತದೆ.
ರಾಮನ ಭಕ್ತರಿಗೆ ಮಾತ್ರ ಅವಕಾಶ..
ರಾಮನ ಭಕ್ತರಿಗಷ್ಟೇ ಚಾನ್ಸ್, ಇಲ್ಲಿದೆ ವಯಸ್ಸು, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಮಂದಿರದ ಪವಿತ್ರತೆ ಮತ್ತು ಭದ್ರತೆಯನ್ನು ಕಾಯಬಲ್ಲ ಅತ್ಯಂತ ದಕ್ಷ ಅಧಿಕಾರಿಯನ್ನು ಹುಡುಕಲು ಟ್ರಸ್ಟ್ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 50 ರಿಂದ 70 ವರ್ಷದೊಳಗಿರಬೇಕು. ದೊಡ್ಡ ಸಾರ್ವಜನಿಕ ಸಂಸ್ಥೆ, ಬ್ಯಾಂಕ್ ಅಥವಾ ಕಂಪನಿಗಳಲ್ಲಿ ಕನಿಷ್ಠ 20 ವರ್ಷಗಳ ವ್ಯವಸ್ಥಾಪಕ ಅನುಭವ ಕಡ್ಡಾಯ. ಸಾಮಾನ್ಯ ಆಡಳಿತ, ಹಣಕಾಸು, ಕಾನೂನು, ಭದ್ರತೆ ಮತ್ತು ಐಟಿ (IT) ಕ್ಷೇತ್ರಗಳ ಜ್ಞಾನವಿರಬೇಕು. ಜೊತೆಗೆ ಅರ್ಜಿದಾರರು ಕಡ್ಡಾಯವಾಗಿ ಹಿಂದೂ ಧರ್ಮದ ಸಕ್ರಿಯ ಅನುಯಾಯಿ ಹಾಗೂ ಶ್ರೀರಾಮನ ಭಕ್ತರಾಗಿರಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಇರಬೇಕು.
ಅರ್ಜಿ ಸಲ್ಲಿಸುವ ವಿಧಾನ..!
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಸಕ್ತರು ತಮ್ಮ ಪ್ರೊಫೈಲ್ ಅನ್ನು ಜುಲೈ 18, 2026 ರ ಶನಿವಾರ ಸಂಜೆ 4 ಗಂಟೆಯೊಳಗೆ searchcommittee.srjbt@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಸಂಬಳ ಮತ್ತು ಇತರೆ ಸವಲತ್ತುಗಳನ್ನು ಮುಖಾಮುಖಿ ಚರ್ಚೆಯ ಮೂಲಕ ನಿರ್ಧಾರಿಸಲಾಗುತ್ತದೆ