ಇನ್ನೂ 15 ವರ್ಷದ ಬಾಲಕನಾಗಿರುವುದರಿಂದ ಆತನ ಪೋಷಕರನ್ನು ಐರ್ಲೆಂಡ್ ಮತ್ತು ಇಂಗ್ಲೆಂಡ್ಗೆ ಕಳುಹಿಸಲು ನಿರ್ಧರಿಸಿದ್ದೇವೆ. ಇದರಿಂದ ಆತ ಹೊಸ ವಾತಾವರಣಕ್ಕೆ ಹೊಂದುಕೊಳ್ಳಲು ನೆರವಾಗಬಹುದು. ಅವರ ಎಲ್ಲಾ ವೆಚ್ಚಗಳನ್ನು ಮಂಡಳಿಯೇ ಭರಿಸುತ್ತದೆ" ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪೋರ್ಟ್ಸ್ಟಾರ್ಗೆ ತಿಳಿಸಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ವೈಭವ್ ಸೂರ್ಯವಂಶಿ ಅವರ ಪೋಷಕರು 15 ವರ್ಷದ ಬಾಲಕನೊಂದಿಗೆ ಪ್ರಯಾಣಿಸಲು ಬಿಸಿಸಿಐ ಅನುಮತಿ ನೀಡಿದೆ ಎಂದು ಸ್ಪೋರ್ಟ್ಸ್ಟಾರ್ ವರದಿ ಮಾಡಿದೆ.
ಐಪಿಎಲ್ 2026 ರಲ್ಲಿ 776 ರನ್ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ ನಂತರ ಸೂರ್ಯವಂಶಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕುಟುಂಬದವರು ಜೊತೆಯಲ್ಲಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಹೊಂದಿಕೊಳ್ಳಲು ವೈಭವ್ ಸೂರ್ಯವಂಶಿಗೆ ನೆರವಾಗುತ್ತದೆ ಎಂದು ಬಿಸಿಸಿಐ ಭಾವಿಸಿದೆ ಎಂದು ವರದಿ ಹೇಳಿದೆ.
ಮುಂಬರುವ ತ್ರಿಕೋನ ಸರಣಿಗಾಗಿ ವೈಭವ್ ಸೂರ್ಯ ವಂಶಿ ಪ್ರಸ್ತುತ ಭಾರತ ಎ ತಂಡದೊಂದಿಗೆ ಶ್ರೀಲಂಕಾದಲ್ಲಿದ್ದಾರೆ.
ಇದಕ್ಕೂ ಮುನ್ನಾ ಮಾತನಾಡಿದ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ವೈಭವ್ ಸೂರ್ಯವಂಶಿ ಮೇಲೆ ಹೆಚ್ಚಿನ ಭರವಸೆ ಇದೆ. ಐಪಿಎಲ್ 2026 ರ ಸ್ಫೋಟಕ ಪ್ರದರ್ಶನದೊಂದಿಗೆ ತಂಡಕ್ಕೆ 'ತನ್ನನ್ನು ತಾನು ಆಯ್ಕೆ ಮಾಡಿಕೊಂಡಿದ್ದೇನೆ' ಎಂದು ಹೇಳಿದರು.