Search


ಮಾದಪ್ಪನ ಭಕ್ತರಿಗೆ ಬಿಗ್‌ ಶಾಕ್‌: ಪಾದಯಾತ್ರೆ ನಿ಼ಷೇಧಕ್ಕೆ ಅರಣ್ಯ ಇಲಾಖೆ ಆದೇಶ…!

ಚಾಮರಾಜನಗರ : ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟವು ಒಂದು. ಪ್ರತಿ ವರ್ಷವೂ  ಲಕ್ಷಾಂತರ ಭಕ್ತರ ಮಾದಪ್ಪನ ದರ್ಶನಕ್ಕಾಗಿ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುತ್ತಾರೆ, ಆದರೆ ಇದೀಗ ರಾಜ್ಯ ಅರಣ್ಯ ಇಲಾಖೆ ಮಾದೇಶ್ವರ ಬೆಟ್ಟಕ್ಕೆ ಕಾಲ್ನಡಿಯಲ್ಲಿ ಬರುವುದನ್ನ ನಿಷೇಧಿಸಿ ಆದೇಶ ಹೊರಡಿಸಿದ್ದು. ಯುಗಾದಿ ಮತ್ತು ಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಭಕ್ತರ ಪಾದಯಾತ್ರೆಗೆ ಅವಕಾಶ ನೀಡಲಾಗಿದೆ.

ಚಿರತೆ ದಾಳಿಗೆ ಬಾಲಕ ಬಲಿ; ಎಚ್ಚೆತ್ತುಕೊಂಡ ಅರಣ್ಯ ಇಲಾಖೆ…!

ಎರಡು ದಿನಗಳ ಹಿಂದಷ್ಟೆ ಮಾದಪ್ಪನ ಬೆಟ್ಟದಲ್ಲಿ ದುರಂತವೊಂದು ನಡೆದಿತ್ತು. ಪೋಷಕರ ಜೊತೆ ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು, ಇದರ ಪರಿಣಾಮ ಬಾಲಕ ಸಾವಿಗೀಡಾಗಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಮರಾಜನಗರದ ಅರಣ್ಯಾಧಿಕಾರಿಗಳ ಜೊತೆ ವರ್ಚುವಲ್‌ ಸಭೆ ನಡೆಸಿದರು.

ಈ ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ, ಭಕ್ತರಲ್ಲಿ ವನ್ಯಮೃಗಗಳ ಅಪಾಯದ ಬಗ್ಗೆ ಜಾಗೃತಿ ಮೂಡಿಸಬೇಕು, ಬೆಟ್ಟಕ್ಕೆ ಬಸ್ ಮೂಲಕವೇ ತೆರಳುವಂತೆ ಸೂಚನಾಫಲಕ ಅಳವಡಿಸಬೇಕು. ಬೆಟ್ಟದಿಂದ ನಾಗಮಲೆಗೆ 14 ಕಿ.ಮೀ ಬದಲು ಕೇವಲ 3 ಕಿ.ಮೀ ಪಾದಯಾತ್ರೆಗೆ ಅವಕಾಶ ನೀಡಿ, ವಾಕಿಟಾಕಿ ಮತ್ತು ಅಗತ್ಯ ಸುರಕ್ಷತಾ ಸಲಕರಣಗಳೊಂದಿಗೆ ಭದ್ರತಾ ಸಿಬ್ಬಂದಿಯಿಂದ  ಪಾದಯಾತ್ರಿಗಳಿಗೆ ರಕ್ಷಣೆ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು

ರವಿಕುಮಾರ್ ನ್ಯೂಸ್ ಡೆಸ್ಕ್ 

By News Desk - 13-05-2026


Ads in Post