Search


ಬೇಗನೆ ಶುರುವಾಗ್ತಿದೆ ಬಿಗ್‌ಬಾಸ್‌ ಸೀಸನ್‌ 13 : ಪ್ರೋಮೋ ಬಿಡುಗಡೆ ಮಾಡಿದ ಕಲರ್ಸ್‌ ವಾಹಿನಿ

ಇತ್ತೀಚೆಗಷ್ಟೆ ʻಬಿಗ್‌ಬಾಸ್‌ ಸೀಸನ್‌ 12ʼ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಜನ ಅದರ ಗುಂಗಿನಲ್ಲಿರುವ ನಡುವೆಯೇ ಕಲರ್ಸ್‌ ಕನ್ನಡ ವಾಹಿಸಿ ಬಿಗ್‌ಬಾಸ್‌ ಸೀಸನ್‌ 13ರ ((Bigg Boss Kannada Season 13) ನೂತನ ಪ್ರೋಮೋ ಬಿಡುಗಡೆ ಮಾಡಿದೆ. ಈ ಮೂಲಕ ಈ ಬಾರಿಯ ಬಿಗ್ ಬಾಸ್ ಹೊಸ ಸೀಸನ್ ಬೇಗ ಶುರುವಾಗಲಿದೆ ಎಂಬುದನ್ನು ವಾಹಿನಿ ಖಚಿತಪಡಿಸಿದೆ. 

ಬಿಗ್‌ಬಾಸ್‌ ಸೀಸನ್‌ 12 ಕಲರ್ಸ್‌ ವಾಹಿನಿಗೆ ದೊಡ್ಡ ಮಟ್ಟದ ಯಶಸ್ಸನ್ನ ತಂದು ಕೊಟ್ಟಿತ್ತು. ಬಿಗ್‌ಬಾಸ್‌ ಕಾರ್ಯಕ್ರಮ  ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಕಾರ್ಯಕ್ರಮವಾಗಿ ಹೊರ ಹೊಮ್ಮಿತ್ತು. ಈ ಸೀಸನ್‌ ಮುಗಿದು ಈಗಷ್ಟೆ 4 ತಿಂಗಳು ಕಳೆದಿದ್ದು, ಇದರ ನಡುವೆಯೇ ವಾಹಿನಿ ಹೊಸ ಸೀಸನ್‌ನ ಪ್ರೋಮೋ ಹಂಚಿ ಕೊಂಡಿದೆ.  ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋ ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಅಧಿಕೃತವಾಗಿ ತಿಳಿಸಲಾಗಿದೆ. ‘ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ… With something special’ ಎಂಬ ಕ್ಯಾಪ್ಷನ್​ನೊಂದಿಗೆ ಹೊಸ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.


ಈವರೆಗೂ ಯಶಸ್ವಿಯಾಗಿ 12 ಸೀಸನ್​ಗಳಲ್ಲಿ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಡೆದುಕೊಂಡು ಬಂದಿದೆ. ಕಿಚ್ಚ ಸುದೀಪ್ ಅವರು ಎಲ್ಲ ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. ಬಿಗ್‌ಬಾಸ್‌ನ ಪ್ರತಿ ಸೀಸನ್‌ ಹೊಸ ಕಾನ್ಸೆಪ್ಟ್‌ನೊಂದಿಗೆ ಬರಲಿದ್ದು, ಈ ಬಾರಿ ಯಾವ ಕಾನ್ಸೆಪ್ಟ್‌  ಮೂಲಕ ಕಾರ್ಯಕ್ರಮ ಲಾಂಚ್‌ ಆಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

ಜೊತೆಗೆ ಶೋಗೆ ದೊಡ್ಡ ಪ್ರೇಕ್ಷಕರ ವರ್ಗ ಇದೆ. ಬಿಗ್ ಬಾಸ್ ಕಾರ್ಯಕ್ರಮ ಶುರುವಾದಾಗ ಪ್ರತಿ ಬಾರಿಯೂ ಸೆನ್ಸೇಷನ್ ಸೃಷ್ಟಿ ಆಗುತ್ತದೆ. ಹಾಗಾಗಿ ವೀಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಿದೆ. ಇದನ್ನ ಗಮನದಲ್ಲಿಟ್ಟುಕೊಂಡು ವಾಹಿನಿ ಈ ಬಾರಿ ಬೇಗನೆ ಶೋ ಆರಂಭಿಸಲು ತಯಾರಿ ನಡೆಸಿದೆ.
 

By Ravikumar - 03-06-2026


Ads in Post