ಬೆಂಗಳೂರು: ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿರುವ ರಾಮ ಮಂದಿರ ದೇಣಿಗೆ ಹಗರಣವನ್ನ ಮುಚ್ಚಿ ಹಾಕಲು ಬಿಜೆಪಿ ಪ್ಲಾನ್ ಮಾಡಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಆರೋಪಿಸಿದ್ದಾರೆ. ಆರ್ಎಸ್ಎಸ್ ಮತ್ತು ಬಿಜೆಪಿಯವರಿಗೆ ದೇಶ ಮುಖ್ಯ ಅಲ್ಲ ಅವರಿಗೆ ಡೊನೇಷನ್ ಮಾತ್ರ ಮುಖ್ಯ ಎಂದು ಕಿಡಿಕಾರಿದ್ದಾರೆ.
ರಾಮ ಮಂದಿರ ದೇಣಿಗೆ ಹಗರಣದಲ್ಲಿ ಕರ್ನಾಟಕದ (Karnataka) ನಂಟಿದೆ ಎಂಬ ಅಖಿಲೇಶ್ ಯಾದವ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಖಿಲೇಶ್ ಯಾದವ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದ್ರೆ ಬಿಜೆಪಿಗೆ (BJP) RSSಗೆ ನೇಷನ್ ಫಸ್ಟ್ ಅಲ್ಲ. ಬಿಜೆಪಿ-RSSಗೆ ಡೊನೇಷನ್ ಫಸ್ಟ್ ಎಂದು ಆಕ್ರೋಶ ಹೊರಹಾಕಿದರು. ಮುಂದುವರಿದು ಮಾತನಾಡಿದ ಜ್ಯೂ. ಖರ್ಗೆ ʻರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಯಾರು? ಉದ್ಘಾಟನೆ ಮಾಡಿದ್ದು ಯಾರು? ಸಮಿತಿ ಮಾಡಿದ್ದು ಯಾರು? ಎಲ್ಲಾ ಮಾಡಿದ್ದು ಪ್ರಧಾನಿ ಮೋದಿ ಅವರು. ಈಗ ದೇಣಿಗೆ ಹಗರಣ ಆಗಿದೆ. ಚಿನ್ನ, ಬೆಳ್ಳಿ, ಹಣ ಏನು ಇಲ್ಲ. ಈಗ ಪ್ರಧಾನಿ ಮೋದಿ ಮೌನವಾಗಿ ಇದ್ದಾರೆ ಎಂದಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಭಾಷಣ ಮಾಡ್ತಾರೆ. ಈಗ ಲೂಟಿ ಹೊಡೆದಿದ್ದು ನೀವು. ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲ ಅಂತ ಏನು ಗ್ಯಾರಂಟಿ ಇದೆ?. SIT ಮಾಡಿ ಯಾರಿಗೆ ರಿಪೋರ್ಟ್ ಕೊಟ್ಟರು? IAS ಆಫೀಸರ್ಗೆ ರಿಪೋರ್ಟ್ ಕೊಟ್ಟರು. ಆ ಅಧಿಕಾರಿ ಕೂಡ ಟ್ರಸ್ಟ್ನಲ್ಲಿ ಇರೋನು. ಮೋದಿ ನಾನು ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ ಅಂದ್ರು. ಈಗ ಏನ್ ಆಯ್ತು? ಬಿಜೆಪಿ ಅವರು ಈ ಹಗರಣವನ್ನು ಮುಚ್ಚಿ ಹಾಕೋಕೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ರಾಮ ಮಂದಿರದಲ್ಲಿ ಹುಂಡಿ ಕಳ್ಳತನ...!
ರಾಮ ಮಂದಿರದಲ್ಲಿ ಹುಂಡಿ ಹಣ ಕಳವು ಮಾಡಿದ್ದ 8 ಜನರನ್ನ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ರಾಮ ಜನ್ಮಭೂಮಿ ಟ್ರಸ್ಟ್ನ ಕಾರ್ಯದರ್ಶಿ ಚಂಪಕ್ ರೈ ಸೇರಿದಂತೆ ಟ್ರಸ್ಟ್ನ ಮೂವರು ರಾಜೀನಾಮೆ ನೀಡಿದ್ದು, ಎಸ್ಐಟಿ ತನ್ನ ತನಿಖೆಯನ್ನ ತೀವ್ರಗೊಳಿಸಿದೆ. ಅತ್ತ ಉತ್ತರ ಪ್ರದೇಶದ ವಕೀಲರ ಸಂಘ ಆರೋಪಿಗಳ ಪರ ವಕಾಲತ್ತು ಹಾಕದಂತೆ ಸೂಚಿಸಿದ್ದು, ನಿಯಮ ಮೀರುವ ವಕೀಲರಿಗೆ 5 ಲಕ್ಷ ದಂಡ ವಿಧಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದೆ.