Search


ಬಿಗ್ ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್ ಟಾರ್ಗೆಟ್ ಮಾಡಿದ್ರಾ ಸೆಲೆಬ್ರಿಟಿಸ್ ?

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ದಿನದಿಂದ ದಿನಕ್ಕೆ ಟಾಸ್ಕ್‌ಗಳ ಮೂಲಕ ಮನರಂಜನೆ ಹೆಚ್ಚುತ್ತಿದೆ. ಶೋ ಆರಂಭವಾಗಿ ಮೂರು ದಿನ ಕಳೆದರೂ ಇನ್ನೂ ಎಲ್ಲಾ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮನೆ ಪ್ರವೇಶ ಸಿಕ್ಕಿಲ್ಲ. ಸದ್ಯ 8 ಮಂದಿ ಮಾತ್ರ ಮನೆಯೊಳಗೆ ಎಂಟ್ರಿ ಪಡೆದಿದ್ದು, ಉಳಿದವರು ಫೈಟ್‌ವಾಸದಲ್ಲಿದ್ದಾರೆ.

ಹೊಸ ಪ್ರೋಮೋದಲ್ಲಿ ಟ್ರೆಜರ್ ಟಾಸ್ಕ್‌ನಲ್ಲಿ ಗೆದ್ದ ಗಗನ್‌ಗೆ ಬಿಗ್‌ಬಾಸ್, ಫೈಟ್‌ವಾಸದಲ್ಲಿರುವ ಯಾರೊಬ್ಬರು ಮನೆಯೊಳಗೆ ಬರಬಾರದು ಎಂದು ನೀವು ಭಾವಿಸುತ್ತೀರಿ? ಅವರ ಹೆಸರನ್ನು ಹೇಳಿ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಗಗನ್ ಧನುಷ್ ಹೆಸರನ್ನು ಹೇಳಿದ್ದು, ಮಾತಿನಲ್ಲಿ ಮರ್ಯಾದೆ ಇರಬೇಕು ಹಾಗೂ ಅವರು ಮನೆಯೊಳಗೆ ಬರಲು ಇನ್ನೂ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ.

ಗಗನ್ ಮಾತಿನಿಂದ ಕೆರಳಿದ ಧನುಷ್, “ನಿಮ್ಮ ಮಾತನ್ನೆಲ್ಲ ಸುಮ್ಮನೆ ಕೈಕಟ್ಟಿ ಕೇಳಬೇಕಾ? ಕಾಮನ್‌ಮ್ಯಾನ್ ಅಂತ ಪರ್ಸನಲ್ ಟಾರ್ಗೆಟ್ ಮಾಡುತ್ತಿದ್ದೀರಾ? ಇಡೀ ಕರ್ನಾಟಕ ಶೋ ನೋಡುತ್ತಿದೆ. ಬೇಕಂತಲೇ ನನ್ನ ಹೆಸರನ್ನು ತೆಗೆದುಕೊಂಡಿದ್ದೀರಾ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಗಗನ್ ಮತ್ತು ಧನುಷ್ ನಡುವೆ ಮಾತಿನ ಚಕಮಕಿ ನಡೆದಿದೆ.

ಇವರಿಬ್ಬರ ಜಗಳದ ನಡುವೆ ಮಂಜುನಾಥ್, ‘ಬಿಗ್‌ಬಾಸ್ ಸೆಲೆಬ್ರಿಟಿ ವರ್ಸಸ್ ಕಾಮನ್‌ಮ್ಯಾನ್’ ನಡೆಯುತ್ತಿದೆ ಎಂದು ಹೇಳಿದ್ದಾರೆ. ಶೋ ಆರಂಭಕ್ಕೂ ಮುನ್ನವೇ ಸೆಲೆಬ್ರಿಟಿ ಮತ್ತು ಕಾಮನ್‌ಮ್ಯಾನ್ ನಡುವೆ ಸಂಘರ್ಷದ ನಿರೀಕ್ಷೆ ಇತ್ತು. ಇದೀಗ ಮೊದಲ ವಾರದಲ್ಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳ ನಡುವೆ ವಾರ್ ಶುರುವಾಗಿರುವುದು ಬಿಗ್‌ಬಾಸ್ ಮನೆಯ ಆಟಕ್ಕೆ ಮತ್ತಷ್ಟು ಕುತೂಹಲ ತಂದಿದೆ.

By Ravikumar - 09-09-2026


Ads in Post