ಚಾಮರಾಜನಗರ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಡೆದ ಎನ್ ಕೌಂಟರ್ನಲ್ಲಿ ಮೂವರು ವ್ಯಕ್ತಿಗಳು ಬಲಿಯಾದ ಘಟನೆಗೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ, ಶೂಟೌಟ್ ನಡೆದ ಸ್ಥಳದಿಂದ ಪೊಲೀಸರು ಅನೇಕ ವಸ್ತುಗಳನ್ನ ವಶಪಡಿಸಿಕೊಂಡಿದ್ದು, ಈ ಪೈಕಿ ಘಟನಾ ಸ್ಥಳದಲ್ಲಿ ಸ್ಟಿಕರ್ ಕೂಟ ಕೀಳದ ಹೊಸ ಚಪ್ಪಲಿ ಕೂಡ ಸಿಕ್ಕಿದೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಈ ಗೊಂದಲಕ್ಕೆ ಅರಣ್ಯಾಧಿಕಾರಿಗಳು ಸ್ಪಷ್ಟನೆಯನ್ನ ನೀಡಿದ್ದಾರೆ.
ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು (Hanur) ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್ (Encounter) ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ನಾಂದಿ ಹಾಡಿದೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಅರಣ್ಯ ಇಲಾಖೆ ಮಾಡಿದ್ದು ತಪ್ಪು ಎಂದರೆ, ಅರಣ್ಯಾಧಿಕಾರಿಗಳು ಆತ್ಮರಕ್ಷಣೆಗಾಗಿ ಶೂಟೌಟ್ ಮಾಡಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ಜಪ್ತಿ ಮಾಡಿದ ವಸ್ತುಗಳು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳದಲ್ಲಿ ಸಿಕ್ಕ 2 ಚೀಲಗಳಲ್ಲಿ ಮಾಂಸ, ಬಂದೂಕು, ಚಪ್ಪಲಿಗಳು ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಾಡಿಗೆ ಹೋದವರು ಹೊಸ ಚಪ್ಪಲಿ ತಗೊಂಡು ಹೋಗಿದ್ರಾ? ಸ್ಟಿಕ್ಕರ್ ಕೂಡ ಕಳಚದ, ಕಾಲಿಗೆ ಧರಿಸದ ಹೊಸ ಚಪ್ಪಲಿ ಸಿಕ್ಕಿದೆ. ಸ್ವಲ್ಪವೂ ಕೊಳೆಯಾಗದ ಚಪ್ಪಲಿಗಳು ಹಾಕಿಕೊಂಡು ಹೋಗಿದ್ರಾ ಎಂಬ ಅನುಮಾನ ಶುರುವಾಗಿದೆ. ಅಥವಾ ಅರಣ್ಯಾಧಿಕಾರಿಗಳ ಒಂದು ತಪ್ಪು ಮುಚ್ಚಲು ಹೋಗಿ ಮತ್ತೊಂದು ತಪ್ಪು ಎಸಗಿದ್ರಾ? ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ.

ಇನ್ನು ಈ ಕುರಿತು ಅರಣ್ಯಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ, ʻನಮ್ಮ ಸಿಬ್ಬಂದಿ ಹೊಸ ಚಪ್ಪಲಿ ತಗೊಂಡು ಹೋಗಿಲ್ಲ, ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಜೊತೆ ಚಪ್ಪಲಿ ಸಿಕ್ಕಿದೆ, ಬಹುಶಃ ಕಿತ್ತೋದ್ರೆ ಇರಲಿ ಎಂದು ತೆಗೆದುಕೊಂಡು ಹೋಗಿರಬಹುದು, ಜೊತೆಗೆ ಚಪ್ಪಲಿ ಜೊತೆ ಬ್ಯಾಗ್ನಲ್ಲಿ ದಿನಿಸಿ ಪದಾರ್ಥ, ಟಾರ್ಚ್ ಸೇರಿದಂತೆ ಬೇಟೆಯಾಡಲು ಬೇಕಾದ ಸಲಕರಣೆಗಳಿದ್ದವು ಎಂದು ಹೇಳಿದ್ದಾರೆ,
ಒಟ್ಟಿನಲ್ಲಿ ಈ ಪ್ರಕರಣದ ತನಿಖೆ ಕೂಡ ಚುರುಕಾಗಿದೆ. ಪ್ರಾಥಮಿಕವಾಗಿ ಇಂದು ಅಥವಾ ನಾಳೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಶೂಟೌಟ್ ಮಾಡಿದ್ದ ಅರಣ್ಯ ಸಿಬ್ಬಂದಿ ಕೂಡ ಅರಣ್ಯಾಧಿಕಾರಿಗಳ ಕಣ್ಗಾವಲಿನಲ್ಲಿದ್ದು, ತನಿಖಾಧಿಕಾರಿ ಮುಂದೆ ಕೂಡ ಹಾಜರುಪಡಿಸಿ ಅಂದಿನ ಘಟನಾವಳಿಗಳ ಬಗ್ಗೆ ವಿವರಣೆ ಕೂಡ ಕೊಟ್ಟಿದ್ದಾರೆ. ತನಿಖೆ ವರದಿಯಲ್ಲಿ ಯಾರದ್ದು ತಪ್ಪು ಅನ್ನೋದು ತಿಳಿಯಲಿದೆ.