Search


ದಸರಾ ವೇಳೆ ಅವಾಂತರ, ಅಡ್ಡಾದಿಡ್ಡಿಯಾಗಿ ಓಡಿದ ಆನೆ; ನೋಡ್ತಿದ್ದ ಜನ ದಿಕ್ಕಾಪಾಲು

ಶಿವಮೊಗ್ಗ: ನಗರದಲ್ಲಿ ನಡೆಯುತ್ತಿದ್ದ ದಸರಾ ಜಂಬೂಸವಾರಿ ವೇಳೆ 450 ಕೆಜಿ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಡಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ನಗರದ ಶಿವಪ್ಪನಾಯಕ ಅರಮನೆಯಿಂದ ಜಂಬೂಸವಾರಿ ಆರಂಭವಾಗಿತ್ತು. ಮೆರವಣಿಗೆ ಸ್ವಲ್ಪ ದೂರ ಸಾಗುತ್ತಿದ್ದಂತೆ ಆನೆ ಏಕಾಏಕಿ ಅಡ್ಡಾದಿಡ್ಡಿಯಾಗಿ ಓಡಲು ಆರಂಭಿಸಿದೆ. ಇದರಿಂದ ಸ್ಥಳದಲ್ಲಿದ್ದ ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ.

ಕೋಟೆ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಆನೆ ಓಡಾಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆನೆಯ ಆರ್ಭಟಕ್ಕೆ ರಸ್ತೆಯಲ್ಲಿದ್ದ ಕಾರುಗಳು ಜಖಂಗೊಂಡಿವೆ ಎಂದು ತಿಳಿದುಬಂದಿದೆ. ಜಂಬೂಸವಾರಿ ವೀಕ್ಷಿಸಲು ಆಗಮಿಸಿದ್ದ ಜನರು ಘಟನೆಯಿಂದ ಆತಂಕಕ್ಕೊಳಗಾಗಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

By Reporter Desk - 21-10-2026


Ads in Post