ನವದೆಹಲಿ: ಭಾರತದ ವಾಯುಪಡೆಗೆ ಹೋಲಿಸಿದರೆ ಪಾಕಿಸ್ತಾನ ಮತ್ತು ಚೀನಾದ ಏರ್‌ಪೋರ್ಸ್ ಮುಂದಿವೆ ಎಂದು ನಿವೃತ್ತ ಏರ್ ಮಾರ್ಷನ್ ನಾಗೇಶ್ ಕಪೂರ್ ಹೇಳಿಕೆ ನೀಡಿದ್ದಾರೆ, ಜೊತೆಗೆ ಸ್ವದೇಶಿ ಯುದ್ದ ವಿಮಾನ ತೇಜಸ್ ಕುರಿತು ಕಠಿಣ ವಿಮರ್ಶೆ ಮಾಡಿರುವ ನಾಗೇಶ್ ಕಪೂರ್ ʻ2030ರಲ್ಲಿ ತೇಜಸ್ ಭಾರತೀಯ ವಾಯುಪಡೆಗೆ ಸೇರ್ಪಡೆಯಾದರೂ ಕೂಡ ಕಾರ್ಯಚರಣೆಯಲ್ಲಿ ಅಪ್ರಸ್ತುತವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸುತ್ತ ಮುತ್ತ ಶತೃಗಳನ್ನೇ ಹೊಂದಿರುವ ಭಾರತ, ರಕ್ಷಣೆ ವಿಚಾರದಲ್ಲಿ ಸದಾ ಕಾಲ ಎಚ್ಚರದಿಂದಿರಬೇಕಾದ ಅವಶ್ಯಕತೆ ಇದೆ, ಅದರೆ ಇದರ ನಡುವೆ ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾದ ಏರ್ ಮಾರ್ಷಲ್ ನಾಗೇಶ್ ಕಪೂರ್ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚೀನಾ ಈಗಾಗಲೇ 6ನೇ ತಲೆಮಾರಿನ ಯುದ್ದವಿಮಾನ ಮತ್ತು ಪಾಕಿಸ್ತಾನ 5ನೇ ತಲೆಮಾರಿನ ಯುದ್ದ ವಿಮಾನ ಹೊಂದುವ ಹೊಸ್ತಿಲಿನಲ್ಲಿದ್ದು, ಭಾರತ 2035ರ ವೇಳೆಗೆ 5ನೇ ತಲೆಮಾರಿನ ಯುದ್ದ ವಿಮಾನ ಮಾಡಿಕೊಳ್ಳುವುದು ಅರ್ಥಪೂರ್ಣವೇ ಎಂದು ಕೇಳಿದ ಪ್ರಶ್ನೆಗೆ ಒತ್ತರಿಸಿದ ಏರ್ ಮಾರ್ಷಲ್ ʻಭಾರತೀಯ ವಾಯುಪಡೆಯ ಕಾರ್ಯಚರಣೆ ದೃಷ್ಟಿಯಲ್ಲಿ ಇದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಅಮೆರಿಕಾ ಎಫ್ -22 ಅಥವಾ ಚೀನೀ ಜೆ -20 ನಂತಹ ಐದನೇ ತಲೆಮಾರಿನ ವಿಮಾನಗಳು ಸ್ಟೆಲ್ತ್ ಯುದ್ಧವಿಮಾನಗಳಾಗಿದ್ದು, ಇವುಗಳನ್ನು ರಾಡರ್ ಮೂಲಕ ಟ್ರ್ಯಾಕ್ ಮಾಡುವುದು ಕಷ್ಟ ಸಾಧ್ಯವಾಗಿದೆ, ಇದರ ನಡುವೆ ಚೀನಾದ J-36 ಮತ್ತು J-50 ನಂತಹ ಆರನೇ ತಲೆಮಾರಿನ ಯುದ್ಧವಿಮಾನಗಳನ್ನ ನಿರ್ಮಿಸುತ್ತಿದ್ದು, ಡ್ರೋನ್ ವಿಂಗ್‌ಮೆನ್‌ಗಳೊಂದಿಗೆ AI-ಚಾಲಿತ ಸ್ವಾಯತ್ತತೆಯನ್ನು ಮತ್ತು ಜೆಟ್ ಸ್ವತಂತ್ರ ವೇದಿಕೆಗಿಂತ ನೆಟ್‌ವರ್ಕ್ ಮಾಡಲಾದ ನೋಡ್‌ನಂತೆ ಕಾರ್ಯನಿರ್ವಹಿಸುವ "ವ್ಯವಸ್ಥೆಗಳ ವ್ಯವಸ್ಥೆ" ವಿಧಾನವನ್ನು ಸೇರಿಸುವ ಮೂಲಕ ಆ ಸ್ಟೆಲ್ತ್ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿದರು.
ಇನ್ನು ಭಾರತದ ವಾಯುಪಡೆಗೆ ನಾಲ್ಕನೇ ತಲೆಮಾರಿನ ಯುದ್ದ ವಿಮಾನಗಳಾದ ತೇಜಸ್ ಎಂಕೆ2 ಲಘು ಯುದ್ದ ವಿಮಾನಗಳು 2030ರ ವೇಳೆಗೆ ಸೇರ್ಪಡೆಯಾಗಲಿದ್ದು. ಇವುಗಳನ್ನ ದೇಶದೆಲ್ಲಡೆ ನಿಯೋಜಿಸಲು ಸಾಧ್ಯವಿಲ್ಲ. ಆದ್ದರಿಂದ ವಾಯುಪಡೆಯ ಬೇಡಿಕೆಯನ್ನ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಅನೇಕ ವರ್ಷಗಳ ಹಿಂದೆಯ ಪೂರ್ಣಗೊಳ್ಳಬೇಕಾದ ಯುದ್ದ ವಿಮಾನಗಳ ಡೆಲವೆರಿಯನ್ನ ಒಂದಲ್ಲ ಒಂದು ನೆಪ ಹೇಳಿ ಮುಂದೂಡಲಾಗುತ್ತಿದೆ ಎಂದು ಏರ್ ಮಾರ್ಷಲ್ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.