Search


ಕಾಕ್ರೋಚ್‌ ಪಾರ್ಟಿಗೆ ಪಾಕ್‌ ಸಪೋರ್ಟ್‌; ಕಾಂಗ್ರೆಸ್‌, AAP ವಿರುದ್ದ ಗಂಭೀರ ಆರೋಪ..?

ನವದೆಹಲಿ : ದೇಶದಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಭಾರೀ ಸದ್ದು ಮಾಡುತ್ತಿದೆ, ಈ ಪೇಜ್ ಸದ್ಯ ವಿಶ್ವಾದ್ಯಂತ ಬರೋಬ್ಬರಿ 17 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಹೊಸ ದಾಖಲೆ ಬರೆದಿದ್ದು. ಇದರ ನಡುವೆಯೇ ಆಘಾತಕಾರಿ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೇಜ್‌ ಫಾಲೋ ಮಾಡ್ತಿರುವವರ ಪೈಕಿ ಕೋಟಿ ಕೋಟಿ ಅಭಿಮಾನಿಗಳು ಯಾವ ದೇಶದಿಂದ ಬಂದಿದ್ದಾರೆ ಎಂಬ ಆಸಕ್ತಿದಾಯಕ ಅಂಕಿ-ಅಂಶಗಳ ಗ್ರಾಫಿಕಲ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. 

ಜಸ್ಟಿಸ್‌ ಸೂರ್ಯಕಾಂತ್‌ ಅವರು ನೀಡಿದ್ದ ಒಂದು ಹೇಳಿಕೆಯಿಂದ ದೇಶದಲ್ಲಿ ಯುವಕರು ಹೊಸ ಆಂದೋಲನ ಶುರು ಮಾಡಿದ್ದರು. ಕಾಕ್ರೋಚ್‌ ಜನತಾ ಪಾರ್ಟಿ ಎಂಬ ಪಕ್ಷವನ್ನ ಕಟ್ಟಿಕೊಂಡು. ದೇಶದಲ್ಲಿ ರಾಜಕಾರಣಿಗಳ ವಿರುದ್ದ ಡಿಜಿಟಲ್‌ ಸಮರ ಸಾರಿದ್ದರು. ಆದರೆ ಇದೀಗ ಈ ಎಲ್ಲಾ ಬೆಳವಣಿಗೆಗಳ ಹಿಂದೆ ದೊಡ್ಡ ಷಡ್ಯಂತ್ರವಿರುವ ಬಗ್ಗೆ ಅನುಮಾನಗಳು ಶುರುವಾಗಿದೆ. ವೈರಲ್ ಆಗಿರುವ ವರದಿಯ ಪ್ರಕಾರ, ಈ ಪೇಜ್ ಹೊಂದಿರುವ ಒಟ್ಟು ಫಾಲೋವರ್ಸ್‌ಗಳ ಪೈಕಿ ಸಿಂಹಪಾಲು ಅಂದರೆ ಬರೋಬ್ಬರಿ ಶೇಕಡಾ 49 ರಷ್ಟು (ಶೇ. 49) ಜನರು ಪಾಕಿಸ್ತಾನ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದ್ದು. ಇದು ಇಂಟರ್ನೆಟ್ ವಲಯದಲ್ಲಿ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಉಳಿದಂತೆ ಅಮೆರಿಕದ (USA) ಶೇ.14ರಷ್ಟು,, ಬಾಂಗ್ಲಾದೇಶದಿಂದ ಶೇ. 14, ಭಾರತದಿಂದ ಶೇ. 9, ಬ್ರಿಟನ್‌, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾದ ಶೇಕಡಾ 3ರಷ್ಟು ಜನ ಈ ಷಡ್ಯಂತ್ರದ ಹಿಂದೆ ಇದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಜೊತೆಗೆ ಮತ್ತೊಂದು ಇಸ್ಲಾಮಿಕ್ ರಾಷ್ಟ್ರವಾದ ಟರ್ಕಿ ಮೂಲದ ಲಕ್ಷಾಂತರ ಫಾಲೋವರ್ಸ್‌ಗಳು ಕೂಡ ಹಠಾತ್ತನೆ ಸೇರ್ಪಡೆಯಾಗುತ್ತಿರುವುದನ್ನು ನೆಟ್ಟಿಗರು ಪತ್ತೆಹಚ್ಚಿದ್ದಾರೆ. ಭಾರತೀಯ ಯುವಕರ ನಿರುದ್ಯೋಗ ಮತ್ತು ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ಆಕ್ರೋಶವನ್ನು ಮುಂದಿಟ್ಟುಕೊಂಡು ಆರಂಭವಾದ ಈ ಡಿಜಿಟಲ್ ಮೂವ್‌ಮೆಂಟ್‌ನ ಹಿಂದೆ, ಭಾರತದ ಆಂತರಿಕ ರಾಜಕೀಯ ವ್ಯವಸ್ಥೆಯನ್ನು ಅಲುಗಾಡಿಸಲು ವಿದೇಶಿ ‘ಬಾಟ್ಸ್’  ಮತ್ತು ಪೇಡ್ ಅಕೌಂಟ್‌ಗಳನ್ನು ಬಳಸಲಾಗುತ್ತಿದೆಯೇ ಎಂಬ ಸಂಶಯ ಈಗ ದಟ್ಟವಾಗಿದೆ.

ಇದು ಪೂರ್ವನಿಯೋಜಿತ ಸ್ಕೆಚ್.. ಕಾಂಗ್ರೆಸ್‌, ಆಪ್‌ ಮೇಲೆ ನೆಟ್ಟಿಗರ ಆರೋಪ....!

ಅಭಿಜೀತ್ ದಿಪ್ಕೆ ನೇತೃತ್ವದ ಈ ವ್ಯಂಗ್ಯಭರಿತ ಚಳವಳಿಯು ಭಾರತದ ಡಿಜಿಟಲ್ ಸ್ಪೇಸ್‌ನಲ್ಲಿ ಭಾರಿ ದೊಡ್ಡ ಮಟ್ಟದ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಐಟಿ ತಜ್ಞರು ಆಪಾದಿಸುತ್ತಿದ್ದಾರೆ. ಯೂತ್ ಇಂಡಿಯಾ ಮತ್ತು ಭಾರತ್ ಎಂಬ ದೇಶಪ್ರೇಮಿ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ ಮೂಲಕ ಯುವಕರನ್ನು ಸೆಳೆಯಲಾಗುತ್ತಿದೆ. ಆದರೆ ಇದಕ್ಕೆ ಸಿಗುತ್ತಿರುವ ಬಹುಪಾಲು ಲೈಕ್ಸ್ ಮತ್ತು ಫಾಲೋವರ್ಸ್ ಪಾಕಿಸ್ತಾನ ಹಾಗೂ ಟರ್ಕಿಯಿಂದ ಬರುತ್ತಿದೆ ಎಂಬುದನ್ನ ನೆಟ್ಟಿಗರು ಎತ್ತಿ ತೋರಿಸಿದ್ದಾರೆ. 

ಇದರ ಜೊತೆಗೆ ಈ ಷಡ್ಯಂತ್ರದ ಹಿಂದೆ ಭಾರತದ ಕೆಲವು ಪ್ರಮುಖ ರಾಜಕೀಯ ಪಕ್ಷಗಳ ಕೈವಾಡವಿದೆ ಎಂದು ನೆಟ್ಟಿಗರು ದೂರಿದ್ದು.  “ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಟರ್ಕಿಯಂತಹ ವಿದೇಶಿ ಖಾತೆಗಳ ಜೊತೆಗೆ ಭಾರತದ ಕಾಂಗ್ರೆಸ್ , ಆಮ್ ಆದ್ಮಿ ಪಾರ್ಟಿಹಾಗೂ ಎಸ್‌ಡಿಪಿಐ ಪಕ್ಷದ ಬೆಂಬಲಿಗರೆಲ್ಲರೂ ಒಟ್ಟಾಗಿ ಕಾಕ್ರೋಚ್ ಜನತಾ ಪಕ್ಷವನ್ನು ಪ್ರಚಾರ ಮಾಡಲು ಮತ್ತು ದೇಶದ ಇಮೇಜ್ ಹಾಳು ಮಾಡಲು ಮುಂದಾಗಿದ್ದಾರೆ” ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ದೇಶದಲ್ಲಾಗಿರುವ ಈ ದಿಢೀರ ಬೆಳವಣಿಗೆಗೆ ಕಾರಣವೇನು..?. ಕೇವಲ ಸಿಜೆಐ ಸೂರ್ಯಕಾಂತ್‌ ಅವರು ನೀಡಿದ ಹೇಳಿಕೆಯನ್ನ ಇಟ್ಟುಕೊಂಡು ಇದನೆಲ್ಲಾ ಮಾಡಲಾಗ್ತಿದೆಯ..? ಈ ಡಿಜಿಟಲ್‌ ಆಂದೋಲನದ ಹಿಂದೆ ಬೇರೆ ದೇಶಗಳ ಕೈವಾಡವಿದೆಯಾ..? ಇದರ ಜೊತೆಗೆ ಈ ಆಂಧೋಲನ ಆರಂಭಿಸಿದ ಅಭೀಜಿತ್‌ ದೀಪ್ಕೆ ಎಂಬಾತ ಎಲ್ಲಿದ್ದಾನೆ..? ಎಂಬ ಅನೇಕ ಪ್ರಶ್ನೆಗಳು ನೆಟ್ಟಿಗರನ್ನ ಕಾಡುತ್ತಿದ್ದು. ಈ ಪ್ರಶ್ನೆಗಳಿಗೆಲ್ಲ ಕಾಲವೇ ಉತ್ತರ ಕೊಡಬೇಕಿದೆ.

By News Desk - 22-05-2026


Ads in Post