Search


ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ; ಹೋಟೆಲ್‌ ಉದ್ಯಮಿಗಳಿಗೆ ಗುಡ್‌ನ್ಯೂಸ್‌

ಬೆಂಗಳೂರು: ಕಳೆದರಡು ತಿಂಗಳಿಂದ ಏರುಮುಖವಾಗಿದ್ದ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.  ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ಬಳಿಕ ಪೆಟ್ರೋಲ್ (Petrol), ಡೀಸೆಲ್ ಸೇರಿದಂತೆ ವಾಣಿಜ್ಯ ಮತ್ತು ಗೃಹಬಳಕೆ ಸಿಲಿಂಡರ್ ಬೆಲೆಗಳಲ್ಲಿ ಸತತವಾಗಿ ಏರಿಕೆ ಕಂಡುಬಂದಿತ್ತು. ಆದರೆ ಇಂದಿನಿಂದ ವಾಣಿಜ್ಯ ಬಳಕೆಯ (19 ಕೆಜಿ) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 183.50 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದ್ದು, ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಇರಾನ್‌ ಮೇಲೆ ಅಮೇರಿಕಾ ಮತ್ತು ಇಸ್ರೇಲ್‌ ದಾಳಿಯ ನಂತರ ಜಾಗತಿಕ ಇಂಧನ ಪೂರೈಕೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈ ದಾಳಿಯ ನಂತರ, ಇರಾನ್ ತನ್ನ ನಿಯಂತ್ರಣದಲ್ಲಿರುವ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಯ ಮೂಲಕ ಕಚ್ಚಾ ತೈಲ ಮತ್ತು ಅನಿಲವನ್ನು ಸಾಗಿಸುವ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಇದರ ಪರಿಣಾಮವಾಗಿ 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ದರ 3,198 ರೂಪಾಯಿ ತಲುಪಿತ್ತು, ಆದರೆ ಇದೀಗ ಕದನ ವಿರಾಮ ಜಾರಿಯಾದ ಹಿನ್ನಲೆ ಇಂಧನ ಪೂರೈಕೆ ಯಥಾಸ್ಥಿತಿಗೆ ಬಂದಿದ್ದು, ಕೇಂದ್ರ ಸರ್ಕಾರ ಸಿಲಿಂಡರ್‌ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿದೆ.

ಸದ್ಯ 19 ಕೆಜಿ ಕಮರ್ಷಿಯಲ್‌ ಸಿಲಿಂಡರ್‌ ಬೆಲೆ 3021ರೂಪಾಯಿಗೆ ಇಳಿಕೆಯಾಗಿದೆ. ಅತ್ತ ಗೃಹ ಬಳಕೆ ಸಿಲಿಂಡರ್‌ ಬೆಲೆಯಲ್ಲೂ ಕಳೆದ ತಿಂಗಳು ಏರಿಕೆ ಕಂಡು ಬಂದಿತ್ತು, ಆದರೆ ಈ ತಿಂಗಳು ಗೃಹ ಬಳಕೆ ಸಿಲಿಂಡರ್‌ ಬೆಲೆಯನ್ನ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

By Ravikumar - 01-07-2026


Ads in Post