Search


ನಾಳೆ ಅಖಂಡ ಕರ್ನಾಟಕ ಬಂದ್; KSRTC ಮತ್ತು BMTC ಸ್ಥಗಿತಗೊಳ್ಳುತ್ತಾ..!

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನೀಡಿರುವ ಆದೇಶ ವಿರೋಧಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಬಂದ್‌ಗೆ ಆರಂಭದಲ್ಲಿ ಹಲವು ಸಂಘಟನೆಗಳು ಬೆಂಬಲ ಘೋಷಿಸಿದ್ದರೂ, ಇದೀಗ ಕೆಲ ಸಂಘಟನೆಗಳು ತಮ್ಮ ಬೆಂಬಲವನ್ನು ಹಿಂಪಡೆದುಕೊಂಡಿವೆ. ಬಂದ್‌ಗೆ ಕನ್ನಡ ಸಂಘಟನೆಗಳ ಒಕ್ಕೂಟ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಸೇರಿದಂತೆ ಕೆಲವು ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಪ್ರಮುಖ ಕೆಲವು ಸಂಘಟನೆಗಳು ಬಂದ್‌ನಿಂದ ಹಿಂದೆ ಸರಿದಿವೆ.

ಯಾವ ಸೇವೆಗಳು ಎಂದಿನಂತೆ ಇರಲಿವೆ?

KSRTC ಮತ್ತು BMTC ಬಸ್‌ಗಳು ಸಂಚರಿಸಲಿವೆ

ನಮ್ಮ ಮೆಟ್ರೋ ಸೇವೆ ಇರಲಿದೆ

 ರೈಲು ಸೇವೆಗಳು ಮುಂದುವರಿಯಲಿವೆ

ಆಟೋ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರಲಿವೆ

ಶಾಲಾ-ಕಾಲೇಜುಗಳು ತೆರೆಯಲಿವೆ

ಆಸ್ಪತ್ರೆ, ನರ್ಸಿಂಗ್ ಹೋಂ, ಮೆಡಿಕಲ್ ಶಾಪ್ ಮತ್ತು ಆಂಬ್ಯುಲೆನ್ಸ್ ಸೇವೆಗಳು ಎಂದಿನಂತೆ ಇರಲಿವೆ

ದಿನಸಿ, ಹಾಲು, ತರಕಾರಿ, ಮಾರುಕಟ್ಟೆ, ಬೇಕರಿ ಹಾಗೂ ಬೀದಿ ಬದಿ ವ್ಯಾಪಾರ ನಡೆಯಲಿದೆ

ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸಲಿವೆ

ಸರ್ಕಾರಿ ಕಚೇರಿಗಳು ಮತ್ತು ಕೈಗಾರಿಕಾ ಚಟುವಟಿಕೆಗಳು ಕೂಡ ಎಂದಿನಂತೆ ನಡೆಯುವ ನಿರೀಕ್ಷೆಯಿದೆ 

ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ, ಕೆಲವು ಸಣ್ಣಪುಟ್ಟ ಕನ್ನಡಪರ ಸಂಘಟನೆಗಳು ಖಾಸಗಿ ಬಸ್ ಒಕ್ಕೂಟಗಳು, CAMS ಮತ್ತು RUPSA ಸೇರಿದಂತೆ ಖಾಸಗಿ ಶಾಲಾ ಸಂಘಟನೆಗಳು, ಹೋಟೆಲ್ ಮಾಲೀಕರ ಸಂಘ ಹಾಗೂ ಖಾಸಗಿ ಆಸ್ಪತ್ರೆಗಳು ನೈತಿಕ ಬೆಂಬಲ ಘೋಷಿಸಿವೆ.

ಬಂದ್‌ಗೆ ಯಾರ ಬೆಂಬಲವಿಲ್ಲ?

ಕರವೇ ಪ್ರವೀಣ್ ಶೆಟ್ಟಿ ಬಣ, ಶಿವರಾಮೇಗೌಡ ಬಣ ಹಾಗೂ ನಾರಾಯಣಗೌಡ ಬಣಗಳು ಬಂದ್‌ಗೆ ಬೆಂಬಲ ನೀಡಿಲ್ಲ. BMTC, KSRTC, ಆಟೋ ಮತ್ತು ಕ್ಯಾಬ್ ಸಂಘಟನೆಗಳೂ ಬಂದ್‌ಗೆ ಬೆಂಬಲ ನೀಡಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಆಗಸ್ಟ್ 13ರಂದು ಕರ್ನಾಟಕದಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದರೂ, ಹಲವು ಪ್ರಮುಖ ಸೇವೆಗಳು ಎಂದಿನಂತೆ ಮುಂದುವರಿಯುವ ಸಾಧ್ಯತೆಯಿದೆ. ಸಾರ್ವಜನಿಕರು ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಹಾಗೂ ಇತರ ಚಟುವಟಿಕೆಗಳನ್ನು ಯೋಜಿಸುವುದು ಸೂಕ್ತ.

By Ravikumar - 12-08-2026


Ads in Post