Search


ಮೋಸ ಮಾಡಿದ್ರಾ ಮೂರನೇ ಅಂಪೈರ್‌ : ಫೈನಲ್‌ ಪಂದ್ಯದಲ್ಲಿ ವಿವಾದ

ಅಹಮದಾಬಾದ್: ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಥರ್ಡ್‌ ಅಂಪೈರ್‌ (Third Umpire) ನೀಡಿದ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ, ಇನ್ನಿಂಗ್ಸ್‌ನ 10ನೇ ಓವರಿನ ಕೊನೆಯ ಎಸೆತ ವಾಷಿಂಗ್ಟನ್‌ ಸುಂದರ್‌ (Washington Sundar) ಅವರು ಸಿಕ್ಸ್‌ ಸಿಡಿಸಲು ಹೋಗಿ ಬಾಲ್‌ ಡೀಪ್‌ ಫೈನ್‌ ಕಡೆ ಹೋಯಿತು. ಈ ವೇಳೆ ಅಲ್ಲಿದ್ದ ಜೋರ್ಡಾನ್‌ ಕಾಕ್ಸ್‌ ಡೈವ್‌ ಮಾಡಿ ಬಾಲ್‌ ಹಿಡಿದು ಔಟ್‌ ಆಗಿದ್ದಾರೆ ಎಂದು ಸಂಭ್ರಮಿಸಿದರು.

ಈ ವೇಳೆ ಫಿಲ್ಡ್‌ನಲ್ಲಿದ್ದ ಅಂಪೈರ್‌ ಔಟ್‌ ಕೊಟ್ಟ ಕಾರಣ ವಾಷಿಂಗ್ಟನ್‌ ಸುಂದರ್‌ ಡಗ್‌ಔಟ್‌ ಕಡೆಗೆ ತೆರಳುತ್ತಿದ್ದರು, ಆದರೆ ಈ ವೇಳೆ ಮೂರನೇ ಅಂಪೈರ್‌ಗೆ ತೀರ್ಪು ವರ್ಗಾವಣೆಯಾದ ಕಾರಣ ಬೌಂಡರಿ ಗೆರೆಯ ಬಳಿ ನಿಂತರು. ಟಿವಿ ರಿಪ್ಲೈಯಲ್ಲಿ ಕಾಕ್ಸ್‌ ಹಾರಿ ಬಾಲ್‌ ಹಿಡಿದರೂ ಚೆಂಡು ನೆಲಕ್ಕೆ ಸರಿಯಾಗಿ ತಾಗಿದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಆದರೆ ಅಂಪೈರ್‌ ಬೆರಳುಗಳ ಮಧ್ಯ ಗ್ಯಾಪ್‌ ಇರುವ ಕಾರಣ ಚೆಂಡು ನೆಲಕ್ಕೆ ತಾಗಿದೆ ಎಂದು ಹೇಳಿ ನಾಟೌಟ್‌ ತೀರ್ಪು ನೀಡಿದರು.

ರಜತ್‌ ಪಟಿದಾರ್‌ಗೆ ಔಟ್‌ ಕೊಟ್ಟಿದ್ದ ಅಂಪೈರ್‌...!

ಈ ಪಂದ್ಯದಲ್ಲೇ ನಾಟೌಟ್‌ ತೀರ್ಪು ಬಂದರೂ ಆರ್‌ಸಿಬಿ ಮತ್ತು ಗುಜರಾತ್‌ ಮಧ್ಯೆ ಏಪ್ರಿಲ್‌ 30 ರಂದು ಇದೇ ಮೋದಿ ಮೈದಾನದಲ್ಲಿ ರಜತ್‌ ಪಾಟಿದರ್‌  ಔಟಾದ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ. ಅರ್ಶನ್‌ ಖಾನ್‌ ಎಸೆದ 8ನೇ ಓವರಿನ 4ನೇ ಎಸೆತ ಪಾಟಿದರ್‌ ಅವರ ಬ್ಯಾಟಿನ ಎಡ್ಜ್‌ಗೆ ತಾಗಿ ಡೀಪ್‌ ಸ್ಕ್ಯಾರ್‌ ಕಡೆ ಹೋಗಿತ್ತು. ಈ ವೇಳೆ ಜೇಸನ್‌ ಹೋಲ್ಡರ್‌ ಅವರು ಡೈವ್‌ ಮಾಡಿ ಹಿಡಿದರು. ಈ ವೇಳೆ ಬಾಲ್‌ ನೆಲಕ್ಕೆ ತಾಗಿದಂತೆ ಕಂಡಿದ್ದರೂ ಮೂರನೇ ಅಂಪೈರ್‌ ಔಟ್‌ ತೀರ್ಪು ನೀಡಿದ್ದರು.

ಈಗ ಅಭಿಮಾನಿಗಲು ಹೋಲ್ಡರ್‌ ಹಿಡಿದ ಕ್ಯಾಚ್‌ಗೆ ಔಟ್‌ ನೀಡಿದ್ದರೆ ಕಾಕ್ಸ್‌ ಹಿಡಿದ ಕ್ಯಾಚ್‌ ಯಾಕೆ ಔಟ್‌ ನೀಡಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

By Ravikumar - 31-05-2026


Ads in Post