Search


ಸಿಎಂ ಸಿದ್ದರಾಮಯ್ಯರ ಕಾಲಿಗೆ ಬಿದ್ದು ನಮಸ್ಕರಿಸಿದ ಡಿ.ಕೆ ಶಿವಕುಮಾರ್‌ ..!

ಬೆಂಗಳೂರು : ಸಿಎಂ ಸಿದ್ದರಾಮಯ್ಯರ ನಿವಾಸದಲ್ಲಿ ಆಯೋಜಿಸಿರುವ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಡಿಕೆ ಶಿವಕುಮಾರ್‌ ಆಗಮಿಸಿದ್ದು. ಸಿದ್ದರಾಮಯ್ಯರ ಕಾಲಿಗೆ ಬಿದ್ದು ಆರ್ಶೀವಾದ ಪಡೆದಿದ್ದಾರೆ. ಈ ವೇಳೆ ಸಿಎಂ ಅವರನ್ನ ಅಪ್ಪಿಕೊಂಡು, ತಮ್ಮ ಶುಭಾಶಯ ತಿಳಿಸಿದ್ದಾರೆ. ಈ ಮೂಲಕ ಅಧಿಕಾರ ಹಂಚಿಕೆಯಾದರು ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನ ರಾಜ್ಯ ನಾಯಕರು ತಮ್ಮ ಕಾರ್ಯಕರ್ತರಿಗೆ ರವಾನಿಸಿದ್ದಾರೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ಇಂದು ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗುತ್ತಿದ್ದು. ಇದಕ್ಕೂ ಮುನ್ನ ತಮ್ಮ ಆಪ್ತ ಶಾಸಕರು ಮತ್ತು ಸಚಿವರಿಗೆ ಔತಣ ಕೂಟ ಆಯೋಜಿಸಿದ್ದಾರೆ. ಈ ಸಭೆಯಲ್ಲಿ ಸಿಎಂ ತಮ್ಮ ನಿರ್ಧಾರವನ್ನ ತಿಳಿಸಿ, ನಂತರ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಈ ಸಭೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಕೂಡ ಹಾಜರಾಗಿದ್ದಾರೆ.

ಅಧಿಕಾರ ಹಂಚಿಕೆಯಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಒಳ ಜಗಳಗಳು ಆರಂಭವಾಗಿದೆ ಎಂಬ ವದಂತಿಯ ನಡುವೆ, ಡಿಕೆ ಶಿವಕುಮಾರ್‌ ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯರ ಕಾಲಿಗೆ ಬಿದ್ದು ಡಿಕೆ ಶಿವಕುಮಾರ್‌ ಆರ್ಶೀವಾದ ಪಡೆದಿದ್ದು, ನಾಯಕರಿಬ್ಬರು ಪರಸ್ಪರ ಅಪ್ಪಿಕೊಂಡಿದ್ದಾರೆ. ಈ ವೇಳೆ ಇಬ್ಬರು ನಾಯಕರು ಭಾವುಕರಾಗಿದ್ದು, ತಮ್ಮ ನಡುವೆ  ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶವನ್ನ ರವಾನಿಸಿದ್ದಾರೆ. 
 

By thebigbulletin.com - 28-05-2026


Ads in Post