ಗಂಗಾವತಿ : ನಗರದ ಅಂಬೇಡ್ಕರ್ ಸಕ೯ಲ ಸಮೀಪದ ಎಸ್ಸಿ ಕಾಲೋನಿಯಲ್ಲಿ ವಸತಿ ಉದ್ದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಸುಮಾರು 22 ವಷ೯ಗಳ ಕಾಲ ಸಿಎಲ್ 07 ಪರವಾನಿಗೆಯನ್ನು ಪಡೆದುಕೊಂಡು ಅಜಯ್ ಟೂರಿಸ್ಟ್ ಹೋಮ್ ಮಾಲೀಕರು ಕೋಟ್ಯಾಂತರ ರೂಪಾಯಿ ಅಕ್ರಮ ಮಾಡಿದ್ದಾರೆ ಅದಕ್ಕೆ ಸೂಕ್ತ ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಮಾದಿಗ ಕ್ಷೇಮಾಭಿವೃದ್ಧಿ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಪ್ಪ ಮಾದಿಗ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಾದಿಗ ಕ್ಷೇಮಾಭಿವೃದ್ಧಿ ಸಂಘಟನೆಯ ವತಿಯಿಂದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು " ವಸತಿಗೊಸ್ಕರ ಮೀಸಲಿಟ್ಟ ಜಾಗದಲ್ಲಿ ಬಾರ್ ಆರಂಭ ಮಾಡಿ, ತೆರಿಗೆ ಭರಿಸದೆ ಸರಕಾರಕ್ಕೆ ವಂಚನೆಯನ್ನು ಬಾರ್ ಮಾಲೀಕ ಮಾಡಿದ್ದಾರೆ. ಅಷ್ಟೇ ಅಲ್ಲದೆ 22 ವಷ೯ಗಳ ಕಾಲ ಅಕ್ರಮದಿಂದ ಮದ್ಯ ಮಾರಾಟ ಮಾಡಿದ್ದಾರೆ. ಅದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಸಹ ಸಾಥ್ ನೀಡಿದ್ದಾರೆ ಎನ್ನುವುದು ಅನುಮಾನ ಹುಟ್ಟಿಕೊಳ್ಳುತ್ತಿದೆ.
ಏಕೆಂದರೆ ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ ಪರವಾನಿಗೆಯನ್ನು ಪ್ರತಿ ವಷ೯ ಜೂನ್ ತಿಂಗಳಿನಲ್ಲಿ ನವೀಕರಣ ಮಾಡಿಕೊಳ್ಳಬೇಕು. ಆ ಸಮಯದಲ್ಲಿ ಕೂಡ ಪರವಾನಿಗೆಯ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು. ಆದರೆ ಅಜಯ್ ಟೂರಿಸ್ಟ್ ಹೋಮನ ಬಾರ್ ಆ್ಯಂಡ ರೆಸ್ಟೋರೆಂಟ್ ಮಾಲೀಕರು ವಸತಿ ಉದ್ದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಬಾರ್ ನಡೆಸುತ್ತಿದ್ದರು. ಅಬಕಾರಿ ಇಲಾಖೆಯವರು ಪ್ರತಿ ವಷ೯ ಪರವಾನಿಗೆಯನ್ನು ನವೀಕರಣ ಮಾಡಿಕೊಟ್ಟಿದ್ದಾರೆ. ಅಂದರೆ ಇದರಲ್ಲಿಯೇ ತಿಳಿಯುತ್ತದೆ.
ಹಾಗಾಗಿ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಅಕ್ರಮವಾಗಿ ಶಾಮೀಲಾಗಿದ್ದಾರೆ. ಅಷ್ಟೆ ಅಲ್ಲದೆ ನಗರ ಯೋಜನಾ ಪ್ರಾಧಿಕಾರದಿಂದ ವಸತಿ ಉದ್ದೇಶಕ್ಕೆ ಪರವಾನಿಗೆ ಪಡೆದುಕೊಂಡು ಲಾಡ್ಜ್ ನಿಮಾ೯ಣ ಮಾಡಿ, ಸಿಎಲ್ 07 ಪರವಾನಿಗೆ ಪಡೆದುಕೊಂಡು ಬಾರ್ ಆ್ಯಂಡ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ನಗರಸಭೆ ಪೌರಯುಕ್ತರು ಸಹ ಸುಮ್ಮನಾಗಿದ್ದಾರೆ. ಅಜಯ್ ಟೂರಿಸ್ಟ್ ಹೋಮ ಮಾಲೀಕರು ಸುಮಾರು 22 ವಷ೯ಗಳ ಕಾಲ ಮದ್ಯ ಮಾರಾಟ ಮಾಡಿ, ಸರಕಾರಕ್ಕೆ ವಂಚನೆ ಮಾಡಿದ್ದಾರೆ. ಈಗ ದೂರಿನ ಮೇಲೆಗೆ ಜಿಲ್ಲಾಧಿಕಾರಿಗಳು ಕೇವರ ಲೈಸನ್ಸ್ ರದ್ದು ಮಾಡಿದ್ದಾರೆ. ಆದರೆ ಅಕ್ರಮ ಮಾಡಿದ ಬಾರ್ ಮಾಲೀಕನಿಗೆ, ಅಕ್ರಮದಲ್ಲಿ ಭಾಗಿಯಾಗಿದ್ದ ಅಬಕಾರಿ ಇಲಾಖೆಯ ಅಧಿಕಾರಗಳ ವಿರುದ್ದ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಅಕ್ರಮ ಮಾಡಿದ ಬಾರ್ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿ, 22 ವಷ೯ಗಳ ಮದ್ಯ ಮಾರಾಟದಿಂದ ಮಾಡಿರುವ ಕೋಟ್ಯಾಂತರ ರೂಪಾಯಿಗಳನ್ನು ದಂಡದ ರೂಪದಲ್ಲಿ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಾರ್ ಲೈಸೆನ್ಸ್ ರದ್ದಾಗಿದ್ದರು ಬಾರ್ ಮಾಲೀಕರು ಕೋಟ್೯ ಮೂಲಕ ತಡೆಯಾಜ್ಞೆ ತರಲು ಹೊರಟಿದ್ದಾರೆ. ಎಸ್ಸಿ ಕಾಲೋನಿಯಲ್ಲಿ ಬಾರ್ ಆರಂಭ ಮಾಡಬಾರದು ಎನ್ನುವ ಕಾನೂನು ಇದ್ದರೂ ಬಾರ್ ಆರಂಭ ಮಾಡಿದ್ದಾರೆ. ಸದ್ಯ ಈಗ ಬಾರ್ ಲೈಸೆನ್ಸ್ ರದ್ದಾಗಿದೆ. ಅದನ್ನು ಕೋಟ್೯ ಮೂಲಕ ತಡೆಯಾಜ್ಞೆ ತದ್ರೂ ಸಹ ಅಬಕಾರಿ ಇಲಾಖೆಯವರು ಎಸ್ಸಿ ಕಾಲೋನಿಯಲ್ಲಿ ಬಾರ್ ನಡೆಸಲು ಅವಕಾಶ ನೀಡಬಾರದು. ಒಂದು ವೇಳೆ ಕೋಟ್೯ ತಡೆಯಾಜ್ಞೆ ನೀಡಿದರೆ ನಾನು ಕೋಟ್೯ ಮೂಲಕ ಹೋರಾಟ ಮಾಡಿ, ಎಸ್ಸಿ ಕಾಲೋನಿಯ ಜನರಿಗೆ ನ್ಯಾಯ ಕೊಡಿಸುವೆ ಎಂದು ಶಿವಪ್ಪ ಮಾದಿಗ ಹೇಳಿದರು.
ಈ ವೇಳೆ ಎಸ್ಸಿ ಕಾಲೋನಿಯ ನಿವಾಸಿಗಳಾದ ಪರಶುರಾಮ , ಸುರೇಶ್ ಮುಕ್ಕುಂದಿ, ಬಸವರಾಜ ಕಲ್ಗುಡಿ, ಪರಶುರಾಮ, ಮುಂಜುನಾಥ್, ಪ್ರದೀಪ್ ಹಾಗೂ ಇತರರಿದ್ದರು.