Search


ಸಿದ್ದು ಜತೆಗಿನ ಜಗಳಕಿಂತಲೂ ಸ್ನೇಹದ ವ್ಯಾಲು ಅರಿತಿದ್ದ ಡಿಕೆಶಿ ..!

ಕೆಪಿಸಿಸಿ ಸಾರಥ್ಯ ನನ್ನದೇ ಇದ್ರೂ ನಾನು ಉತ್ತಮ ಸಂಘಟನಕಾರನಾದ್ರೂ..ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸಪೋರ್ಟ್  ಇಲ್ಲದೇ ರಾಜ್ಯದಲ್ಲಿ ಅಧಿಕಾರಕ್ಕೇರುವುದು ಅಷ್ಟು ಸುಲುಭವಿಲ್ಲಅನ್ನೋದು ಡಿಕೆಶಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಹೀಗಾಗಿ ಮೇಕೆದಾಟು ಪಾದಯಾತ್ರೆ ಹಾಗೂ ರಾಹುಲ್ ಭಾರತ್ ಜೋಡೋದಲ್ಲಿ ಸಿದ್ದರಾಮಯ್ಯ ಅವರನ್ನ ಜತೆಗೆ ಕರೆದುಕೊಂಡು ಹೆಜ್ಜೆ ಹಾಕಿದ್ರು.. ರಾಹುಲ್ ಗಾಂಧಿ ಸೂಚನೆ ಹಾಗೂ ವೇಣುಗೋಪಾಲ್ ಸಲಹಯಂತೆ ಇಬ್ಬರು ಜೋಡೆತ್ತುಗಳಾಗಿ ಕೆಲಸ ಮಾಡಿದ್ರು. ಅದ್ರಲ್ಲೂ ಸಿದ್ದರಾಮೋತ್ಸವದಲ್ಲಿ ಮಾಡಿದ ಶಕ್ತಿ ಪ್ರದರ್ಶನ  ಸಿದ್ದರಾಮಯ್ಯ ಜತೆ ಇನ್ನಷ್ಟು ಆಪ್ತವಾಗಿ ನಡೆದುಕೊಳ್ಳಲು ಕಾರಣವಾಯಿತು.ಇದು ಎಲ್ಲಿವರೆಗೂ ಅಂದ್ರೆ ಟಿಕೆಟ್ ಹಂಚಿಕೆಯಿಂದ ಹಿಡಿದು ಚುನಾವಣೆ ಇನ್ನೂ ಎರಡು ದಿನಗಳಿರುವಾಗ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಇಬ್ಬರು ಒಬ್ಬರನ್ನೊಬ್ಬರು ಸಂದರ್ಶನ ಮಾಡಿ ಇಬ್ಬರು ಒಂದಾಗಿದ್ದಾರೆ ನಾವು ಒಂದಾಗಿ ವೋಟ್ ಹಾಕಿಸಬೇಕು ಹಠಕ್ಕೆ ಬಿದ್ದು ವೋಟ್ ಹಾಕಿ 136 ಸ್ಥಾನ ಗೆಲ್ಲಿಸಿ ದೇಶಕ್ಕೆ ಕರ್ನಾಟದಲ್ಲಿ ಕಾಂಗ್ರೆಸ್ ಸುಭದ್ರ ಅನ್ನೋ ಸಂದೇಶ ರವಾನೆ ಮಾಡಿದ್ರು.

ದೆಹಲಿ ಹೈಕಮಾಂಡ್ ಲೆಕ್ಕಚಾರ ಉಲ್ಟಾ ಮಾಡಿದ ಸಿದ್ದರಾಮಯ್ಯ ಕಾಂಗ್ರೆಸ್ ಲ್ಲಿ ಇನ್ನೂ ಮುಂದೆ ಸಿದ್ದು ಫಾರ್ಮಾಲಾ

2023ರಲ್ಲಿ136 ಸ್ಥಾನ ಗೆದ್ದ ತಕ್ಷಣ ಸಿಎಂ ಅಭ್ಯರ್ಥಿ ನೇಮಕ ಮಾಡುವುದು ಅಷ್ಟು ಸುಲುಭವಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ನಾನು ಸಿಎಂ ಆಗಬೇಕು ಅಂತ ಡಿಕೆ ಶಿವಕುಮಾರ್ ಹಠ ಹಿಡಿದ್ರು. ಇತ್ತ ಸಿದ್ದರಾಮಯ್ಯ ನಾನು ಸಿನಿಯರ್ ಹೀಗಾಗಿ ನನಗೆ ಮೊದಲು ಅವಕಾಶ ಸಿಗಬೇಕು ಅಂತ ಪಟ್ಟು ಹಿಡಿದ್ರು.ಕೊನೆಗೆ ಹೈಕಮಾಂಡ್ ಅಂಗಳದಲ್ಲಿ ಒಪ್ಪಂದಕ್ಕೆ ಬಂದು ಡಿಕೆ ಶಿವಕುಮಾರ್ ಡಿಸಿಎಂ ಆಗಿ.. ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾನವಚನ ಬೋದಿಸಿದ್ರು..ಇನ್ನೂ ಈ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ವಿಪಕ್ಷಗಳು ಟೀಕೆ ಮಾಡಿದಾಗಲೂ ಹೈಕಮಾಂಡ್ ಕಡೆ ಬೇರಳು ತೋರಿಸಿ ನಾಯಕತ್ವ ಗೊಂದಲಕ್ಕೆ ತೆರೆ ಎಳೆದರು..

ರಾಹುಲ್ ಕೊಟ್ಟ ಮಾತು ಮರೆತು ದೆಹಲಿಗೆ ಕರೆಸಿ ರಾಜೀನಾಮೆ ಕೊಡಿ ಅಂದಗಲೂ ಸಿದ್ದರಾಮಯ್ಯ ಯೋಚನೆ ಮಾಡಲಿಲ್ಲ. ನಾನು ರಾಜೀನಾಮೆಗೆ ಸಿದ್ಧ-ನಿಮ್ಮ ಆದೇಶಕ್ಕೆ ಬದ್ಧ ಅಂತ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಅವರನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ನೇಮಕ ಮಾಡಿ ಹೈಕಮಾಂಡ್ ಗೆ ಅಚ್ಚರಿ ಮೂಡಿಸಿದ್ರು.ಸಿದ್ದರಾಮಯ್ಯನ ಈ ನಡೆ ದೇಶದ ರಾಜಕೀಯದಲ್ಲಿ ಒಂದು ಚರಿತ್ರೆ ಸೃಷ್ಟಿ ಮಾಡಿದೆ.ಮಧ್ಯಪ್ರದೇಶ್,ರಾಜಸ್ತಾನದಲ್ಲಿ ನಾಯಕತ್ವ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿ ಹೈಕಮಾಂಡ್ ವೀಕ್ ಅಂತ ಹೇಳ್ತಿದ್ದವರಿಗೆ ಸಿದ್ದರಾಮಯ್ಯ ನಡೆ ಹೈಕಮಾಂಡ್ ಗೌರವ ಹೆಚ್ಚಿಸುವಂತೆ ಮಾಡಿದೆ. ಸಿದ್ದರಾಮಯ್ಯ ಅವರ ಈ ನಡೆ ಮುಂದೆ ಹಲವು ರಾಜ್ಯಗಳ ಕಾಂಗ್ರೆಸ್ ಪವರ್ ಷೇರಿಂಗ್ ವಿಚಾರದಲ್ಲಿ ಸಿದ್ದರಾಮಯ್ಯ ಫಾರ್ಮಾಲಾ ಅಂತ ಹೈಕಮಾಂಡ್ ಹೇಳಿದ್ರು ಅಚ್ಚರಿ ಇಲ್ಲ.

By News Desk - 01-06-2026


Ads in Post