ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಸುವೇಂಧು ಅಧಿಕಾರಿ (Suvendhu adikari) ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 3 ವಾರಗಳ ಬಳಿಕ ಸಚಿವ ಸಂಪುಟವನ್ನ ವಿಸ್ತರಿಸಿದ್ದು, ಪಕ್ಷದ 35 ಶಾಸಕರು ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ ಈ ಹಿಂದೆ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ ಜೀವನ ನಡೆಸುತ್ತಿದ್ದ ಶಾಸಕಿ ಕಲಿತಾ ಮಾಝಿ ಅವರು ಕೂಡ ನೂತನ ಸಚಿವರಾಗಿ ಪ್ರಮಾಣ ವಚಣ ಸ್ವೀಕರ ಮಾಡಿದ್ದಾರೆ.
ಕೊಲ್ಕತ್ತಾದ ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್ ರವಿ ಅವರು ಕಲಿತಾ ಮಾಝಿ ಸೇರಿದಂತೆ 35 ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು, ಕೆಲವರು ಸಚಿವ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಇನ್ನು ಕೆಲವರು ರಾಜ್ಯ ಸಚಿವರಾಗಿ ಪದಗ್ರಹಣ ಮಾಡಿದರು. ಈ ಮೂಲಕ ಬಂಗಾಳ ಮಂತ್ರಿ ಮಂಡಲದ ಸಾಮಾರ್ಥ್ಯ 41ಕ್ಕೇ ಏರಿಕೆಯಾಗಿದೆ.
ಕಲಿತಾ ಮಾಝಿ ಜೊತೆಗೆ, ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಹಾಗೂ ಪತ್ರಕರ್ತ ಸ್ವಪನ್ ದಾಸ್ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಾ ಮಾಡಿದ್ದಾರೆ. ಇನ್ನು ಆಡಳಿತಕ್ಕೆ ಬಂದ ದಿನದಿಂದಲೂ ಸುವೇಂದು ಅಧಿಕಾರಿ ಕೆಲವು ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ದು. ಇನ್ನು ಮುಂದೆ ಅವರ ಸಚಿವ ಸಂಪುಟ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನ ನೋಡಬೇಕಿದೆ.
2021ರಲ್ಲಿ ಸೋಲು ಕಂಡಿದ್ದ ಕಲಿತಾ ಮಾಝಿ...!
ರಾಜಕೀಯ ಪ್ರವೇಶಕ್ಕೂ ಮೊದಲು ಬೇರೆಯವರ ಮನೆಗಳಲ್ಲಿ ಮುಸುರೆ ತಿಕ್ಕಿ ಜೀವನ ಸಾಗಿಸುತ್ತಿದ್ದ ಕಲಿತಾ ಅವರು 2021ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು, ಆದರೆ ಮೊದಲ ಯತ್ನದಲ್ಲಿ ಸೋಲನುಭವಿಸಬೇಕಾಯಿತು. ಆದರೆ ಈ ಬಾರಿ ಮಮತಾ ವಿರುದ್ದ ಇದ್ದ ಆಡಳಿತ ವಿರೋಧಿ ಅಲೆಯಲ್ಲಿ ಬರ್ದಮಾನ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇದೀಗ ಮೊದಲ ಯತ್ನದಲ್ಲೇ ಸಚಿವೆಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.