ಬೆಂಗಳೂರು: ನ್ಯಾಯಾಲಯಗಳು, ಸರ್ಕಾರಿ ಕಛೇರಿಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಬರುತ್ತಿರುವ ಹುಸಿ ಬಾಂಬ್ ಕರೆಗಳು (Fake Bomb Call) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿರುವ ಇಸ್ರೋ ಕಛೇರಿಕೆ ಬಂದಿದ್ದ ಹುಸಿ ಬಾಂಬ್ ಕರೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಪ್ರತಿಕ್ರಿಯೆ ನೀಡಿದ್ದು. ʻಹುಸಿ ಬಾಂಬ್ ಕರೆಗಳನ್ನ ಪತ್ತೆ ಮಾಡೋದು ಕಷ್ಟ, ಆದರೆ ಇವುಗಳನ್ನ ಪತ್ತೆ ಹಚ್ಚಲು ಕೇಂದ್ರ ಸರ್ಕಾರದ ಸಹಾಯ ಪಡೆಯುತ್ತೇವೆ ಎಂದು ಹೇಳಿದರು.
ಇಸ್ರೋಗೆ ಹುಸಿ ಬಾಂಬ್ ಬೆದರಿಕೆ ಬಂದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಗಾಗ ಇಂತಹ ಹುಸಿ ಬೆದರಿಕೆಗಳು ಬರುತ್ತದೆ. ವಿಮಾನ ನಿಲ್ದಾಣ (Air Port) ಇರಬಹುದು, ಥರ್ಮಲ್ ಪವರ್ ಪ್ಲ್ಯಾಂಟ್ ಇರಬಹುದು. ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ ಎಂದರು. ನಿರಂತರವಾಗಿ ಸೈಬರ್ ದಾಳಿ (Cyber Attack), ಹುಸಿ ಕರೆಗಳು ಇದಕ್ಕೆ ಅಗತ್ಯ ಸಿಬ್ಬಂದಿ ಮತ್ತು ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡಿದ್ದೇವೆ. ಮತ್ತಷ್ಟು ನಿಗಾ ಇಡುವ ಕೆಲಸ ಮುಂದುವರೆಸುತ್ತೇವೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಚಿವರು ʻಹುಸಿ ಕರೆ, ಇಮೇಲ್ ಗಳನ್ನ ಪತ್ತೆ ಹಚ್ಚೋದು ಕಷ್ಟ. ಐಪಿ ಅಡ್ರೆಸ್ ಬೇರೆ ಬೇರೆ ದೇಶದಲ್ಲಿ ಇರುವುದರಿಂದ ಮ್ಯಾಪ್ ಮಾಡಲು ಕಷ್ಟ ಆಗುತ್ತದೆ. ಆದರೆ ಇದನ್ನು ತಡೆ ಹಿಡಿಯೋದು ನಮ್ಮ ಜವಾಬ್ದಾರಿ ಎಂದರು. ಮೂಲ ಕಂಡು ಹಿಡಿಯುವುದು ಕಷ್ಟ. ಆದರೂ ಪ್ರಯತ್ನ ಮಾಡ್ತೀವಿ. ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆಗೂ ನಮ್ಮ ಒಪ್ಪಂದ ಇದೆ. ಅಂತಹದ್ದು ಏನಾದರೂ ಇದ್ದರೆ ಕೇಂದ್ರದ ಸಹಾಯ ಪಡೆಯುತ್ತೇವೆ ಎಂದು ತಿಳಿಸಿದರು.