Search


ಕೊನೆಗೂ ಬಂತು ಹೈಕಮ್ಯಾಂಡ್ ಆದೇಶ ಕೇರಳಂದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ಆಯ್ಕೆ

ತಿರುವನಂತಪುರ : ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೇರಳದ ಸಿಎಂ ಆಯ್ಕೆ ಪ್ರಕ್ರಿಯೆ ಕೊನೆಗೂ ಮುಕ್ತಾಯವಾಗಿದ್ದು. ವಿ.ಡಿ ಸತೀಶನ್‌ ಕೇರಳದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಆದರೆ ಹೈಕಮಾಂಡ್‌ ಮೂಲಕ ಸಿಎಂ ಪಟ್ಟಕ್ಕಾಗಿ ಭಾರೀ ಲಾಭಿ ನಡೆಸಿದ್ದ ವೇಣುಗೋಪಾಲ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಕೈ ಕೊಟ್ಟಿದೆ. 

ಪಂಚರಾಜ್ಯ ಚುನಾವಣಾ ಫಲಿತಾಂಶ ಪ್ರಕಟಗೊಂಡು 10 ದಿನ ಕಳೆದರು ಕಗ್ಗಂಟಾಗಿದ್ದ ಕೇರಳ ಸಿಎಂ ಆಯ್ಕೆ ಪ್ರಕ್ರಿಯೆ ಕೊನೆಗು ಮುಕ್ತಾಯಗೊಂಡಿದೆ. ಸಿಎಂ ಸ್ಥಾನಕ್ಕಾಗಿ ರೇಸ್‌ನಲ್ಲಿದ್ದ ವಿ.ಡಿ ಸತೀಶನ್‌, ಕೆ.ಸಿ ವೇಣುಗೋಪಾಲ್‌, ರಮೇಶ್‌ ಚೆನ್ನತಲ್ಲ ಮತ್ತು ಶಶಿ ತರೂರ್‌ ಪೈಕಿ ವಿ.ಡಿ ಸತೀಶನ್‌ರನ್ನ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. 

ವಿ.ಡಿ ಸತೀಶನ್‌ ರಾಜಕೀಯ ಜೀವನ..?

ನಾಯರ್‌ ಸಮುದಾಯದ ವಿ.ಡಿ ಸತೀಶನ್‌ ಮೂಲತಃ ನೆಟ್ಟೂರಿನವರು. ವಿದ್ಯಾರ್ಥಿ ದಿನಗಳಿಂದಲೆ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡಿದ್ದ ಸತೀಶನ್‌, ವಿಶ್ವವಿದ್ಯಾಲಯದ ಒಕ್ಕೂಟದ ಅಧ್ಯಕ್ಷರಾಗಿ ಬಳಿಕ ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಹೀಗೆ ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯರಾದ ಇವರು ತಮ್ಮ ತೀಕ್ಷ್ಣ  ಭಾಷಣಗಳಿಂದ ಮತ್ತು ರಾಜಕೀಯ ಸಂಘಟಕರಾಗಿ ಖ್ಯಾತಿಯನ್ನು ಗಳಿಸಿದರು.

1996ರಲ್ಲಿ ಮೊಟ್ಟ ಮೊದಲ ಬಾರಿಗೆ ಪರವೂರು ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡಿದ ಸತೀಶನ್‌ ತಮ್ಮ ಮೊದಲ ಪ್ರಯತ್ನದಲ್ಲಿ ಸೋಲನುಭವಿಸಬೇಕಾಯ್ತು. ಆದರೆ 2001ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅಲ್ಲಿಂದ ಸೋಲಿಲ್ಲದ ಸರದಾರನಂತೆ ಸತತ 6 ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಸತೀಶನ್‌ ಇಲ್ಲಿಯವರೆಗೆ ಸೋಲನ್ನೆ ಕಾಣದೆ ಸಿಎಂ ಪಟ್ಟಕ್ಕೆಏರಿದ್ದಾರೆ.

By thebigbulletin.com - 14-05-2026


Ads in Post