Search


ರಾಹುಲ್ ಗಾಂಧಿ ರೋಲ್ ಮಾಡೆಲ್ ಅಂದಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಯುವತಿ

ದೆಹಲಿ: ಸುಸಂಸ್ಕೃತ ಕುಟುಂಬ, ಸುಂದರ ಹುಡುಗ, ಬರೋಬ್ಬರಿ 40 ಲಕ್ಷ ವರಮಾನ.. ಇಷ್ಟೆಲ್ಲಾ ಇದ್ದರು ಕೂಡ ಯುವತಿಯೊಬ್ಬಳು ಯುವಕ ರಾಹುಲ್ ಗಾಂಧಿಯನ್ನ ರೋಲ್ ಮಾಡೆಲ್ ಆಗಿ ಸ್ವೀಕರಿಸಿದ್ದಾನೆ ಎಂದು ಕಾರಣಕೊಟ್ಟು ಮದುವೆ ಕ್ಯಾನ್ಸಲ್ ಮಾಡಿರುವ ಘಟನೇ ನಡೆದಿದೆ. ಅರುಹಿ ರೆಡ್ಡಿ ಎಂಬಾಕೆ ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು. ಈ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಆಗಿದೆ.

ಮದುವೆ ನಿಶ್ಚಯವಾಗುವಾಗ ವರನ ಕೆಲಸ, ಸಂಬಳ ಹಾಗೂ ಕುಟುಂಬದ ಹಿನ್ನೆಲೆಯನ್ನು ನೋಡುವುದು ಸಾಮಾನ್ಯ. ಆದರೆ, ಯುವಕನೊಬ್ಬ ವಾರ್ಷಿಕ 40 ಲಕ್ಷ ರೂಪಾಯಿ ಪ್ಯಾಕೇಜ್ ಹೊಂದಿದ್ದು, ಸುಂದರ ಆಗಿದ್ದರೂ ಸಹ ವಿಚಿತ್ರ ಕಾರಣಕ್ಕಾಗಿಯೇ ಆತನ ಮದುವೆ ಪ್ರಸ್ತಾಪವನ್ನು ಯುವತಿಯೊಬ್ಬಳು ತಿರಸ್ಕರಿಸಿರುವ ಘಟನೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ತೀವ್ರ ಚರ್ಚೆಗೆ ಗ್ರಾಸವಾಗಿದೆ. 

‘ಆರುಹಿ ರೆಡ್ಡಿ’ (Aaruhi Reddy) ಎಂಬ ಹೆಸರಿನ ಎಕ್ಸ್ ಖಾತೆಯಿಂದ ಈ ಪೋಸ್ಟ್ ಹಂಚಿಕೊಳ್ಳಲಾಗಿದ್ದು, “ನನಗೆ ಇತ್ತೀಚೆಗೆ ಮದುವೆ ಪ್ರಸ್ತಾಪವೊಂದು ಬಂದಿತ್ತು. ಆ ಯುವಕ ನೋಡಲು ಸುಂದರವಾಗಿದ್ದ, ವಾರ್ಷಿಕ 40 ಲಕ್ಷ ರೂ. ಆಕರ್ಷಕ ಪ್ಯಾಕೇಜ್ ಮತ್ತು ಉತ್ತಮ ಕುಟುಂಬದ ಹಿನ್ನೆಲೆ ಹೊಂದಿದ್ದ. ಆದರೆ ನಾನು ಆತನನ್ನು ಒಂದೇ ಕಾರಣಕ್ಕೆ ತಿರಸ್ಕರಿಸಿದೆ. ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ತನ್ನ ‘ರೋಲ್ ಮಾಡೆಲ್’ ಎಂದು ಬರೆದುಕೊಂಡಿದ್ದ” ಎಂದು ಯುವತಿ ಬರೆದುಕೊಂಡಿದ್ದಾಳೆ.

ಮುಂದುವರಿದು ಬರೆದಿರುವ ಯುವತಿ “ನಾನೊಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ. ನಿರಂತರವಾಗಿ ಸೋಲುತ್ತಿರುವ ಒಬ್ಬ ವ್ಯಕ್ತಿಯನ್ನ ತನ್ನ ಆದರ್ಶ ಎಂದು ಭಾವಿಸುವ ವ್ಯಕ್ತಿಯನ್ನು ನನ್ನ ಜೀವನಸಂಗಾತಿಯಾಗಿ ಸ್ವೀಕರಿಸಲು ಸಾಧ್ಯವೇ ಇಲ್ಲ” ನನಗೆ ಹಣ, ಸಂಪತ್ತಿಗಿಂತ ನನ್ನ ದೇಶ ಮುಖ್ಯ ಎಂದು ಸ್ಪಷ್ಟಪಡಿಸಿದ್ದಾಳೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಯುವತಿಯ ವೈಯಕ್ತಿಕ ನಿಲುವು ಮತ್ತು ಸಿದ್ಧಾಂತವನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ರಾಜಕೀಯ ವಿಚಾರಗಳನ್ನು ಜೀವನಸಂಗಾತಿಯ ಆಯ್ಕೆಗೆ ತರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

By Ravikumar - 21-08-2026


Ads in Post