Search


ಚಾಮುಂಡಿ ಬೆಟ್ಟಕ್ಕೆಭೇಟಿ ಕೊಟ್ಟ ಸ್ಟಾಲಿನ್‌ ಪತ್ನಿ : ಸನಾತನ ನಾಶಕ್ಕೆ ಮಗ ಉದಯನಿಧಿ ಕರೆ..!

ಮೈಸೂರು : ತಮಿಳುನಾಡಿನ ಮಾಜಿ ಸಿಎಂ ಸ್ಟಾಲಿನ್‌  (M.K Stalin) ಅವರ ಪತ್ನಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಒ೦ದು ಕಡೆ ಪತಿ ಸ್ಟಾಲಿನ್‌ ಮತ್ತು ಮಗ ಉದಯನಿಧಿ ಸ್ಟಾಲಿನ್‌ (Udaya Nidhi Stalin) ಸನಾತನವನ್ನ ಡೆಂಗ್ಯೂ, ಮಲೇರಿಯಾಗೆ ಹೋಲಿಸುತ್ತಾ ಸನಾತನದ ( Sanatan Dharma) ನಾಶಕ್ಕೆ ಕರೆ ಕೊಡುತ್ತಿದ್ದರೆ, ಮತ್ತೊಂದಡೆ ಅದೇ ಮನೆಯ ನಂದಾದೀಪದಂತಿರುವ ಶ್ರೀಮತಿ ದುರ್ಗಾ ಅವರು ನಿರಂತರವಾಗಿ ಟೆಂಪಲ್‌ ಟೂರ್‌ ನಡೆಸುತ್ತಿದ್ದು ಒಂದೇ ಕುಟುಂಬದಲ್ಲಿ ಇರುವ ವೈರುದ್ಯಗಳನ್ನ ಇದು ಎತ್ತಿ ತೋರಿಸುತ್ತದೆ. 

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸನಾತನ ಧರ್ಮದ ಬಗ್ಗೆ ಪುತ್ರ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಮಗ ಸನಾತನ ಧರ್ಮ ನಾಶಕ್ಕೆ ಪಣ, ತಾಯಿ ದೈವಾರಾಧಕಳು!

ಮೊದಲಿನಿಂದಲೂ ಅಪಾರ ದೈವ ಭಕ್ತಿ ಹೊಂದಿರುವ ಸ್ಟಾಲಿನ್‌ ಅವರ ಪತ್ನಿ, ನಿರಂತರವಾಗಿ ಪೂಜೆ -ಕೈಂಕರ್ಯದಲ್ಲಿ ತೊಡಗಿರುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ,  ಸ್ಟಾಲಿನ್‌ ಅವರ ಪುತ್ರ, ಮಾಜಿ ಡಿಸಿಎಂ ಹಾಗೂ ಹಾಲಿ ತಮಿಳುನಾಡು ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮ ನಾಶ( Sanatan Dharma) ಮಾಡಬೇಕು ಎಂದು ಇತ್ತೀಚೆಗೆ ವಿಧಾನಸಭೆಯ ಕಲಾಪದಲ್ಲಿಯೇ ಹೇಳಿಕೆ ನೀಡಿದ್ದರು. ಆದರೆ ಅವರ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿರುವುದು ಮಹತ್ವ ಪಡೆದುಕೊಂಡಿದೆ.

ದೇವಾಲಯಕ್ಕೆ ತೆರಳಿದ ನಂತರ ದುರ್ಗಾ ಸ್ಟಾಲಿನ್‌ ಅವರು ನಗರದ ವಿ.ವಿ.ಮೊಹಲ್ಲಾದಲ್ಲಿರುವ ಶಾಸಕ ಜಿ.ಟಿ. ದೇವೇಗೌಡರ (GT Devegowd) ನಿವಾಸಕ್ಕೆ ಭೇಟಿ ನೀಡಿ, ಜಿಟಿಡಿ ಕುಟುಂಬ ಆತಿಥ್ಯ ಸ್ವೀಕರಿಸಿದರು. ನಂತರ ಕೊಡಗಿನ ಖಾಸಗಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಅವರು. ಸೋಮವಾರ ಕೊಡಗಿನಿಂದ ಮೈಸೂರಿಗೆ ರಸ್ತೆ ಮೂಲಕ ಪೊಲೀಸರ ಭದ್ರತೆಯಲ್ಲಿ ಆಗಮಿಸಿದರು. ನಂತರ ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೂ ಭೇಟೀ

ಈ ಹಿಂದೆ ಮಗನ ಹೇಳಿಕೆ ವಿವಾದ ನಡುವೆ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪತ್ನಿ ದುರ್ಗಾ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು, ಮಾತ್ರವಲ್ಲ ತಾಯಿ ಮೂಕಾಂಬಿಕೆಗೆ ಚಿನ್ನದ ಕಿರೀಟವನ್ನೂ ಒಪ್ಪಿಸಿದ್ದರು. ತಮಿಳುನಾಡಿನ ಸಾಕಷ್ಟು ಮಂದಿಯಂತೆ ದುರ್ಗಾ ಅವರು ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತೆಯಾಗಿದ್ದಾರೆ. ಅವರು ತನ್ನ ಕೆಲವು ಸ್ನೇಹಿತೆಯರೊಂದಿಗೆ ಕೊಲ್ಲೂರು ದೇವಾಲಯಕ್ಕೆ ಆಗಾಗ ಭೇಟಿ ನೀಡಿದ್ದಾರೆ. ಇದೀಗ ಇತ್ತೀಚೆಗೆ ನಡೆದ ತಮಿಳನಾಡು ಚುನಾವಣೆಯಲ್ಲಿ ಎಂಕೆ ಸ್ಟಾಲಿನ್, ಉದಯನಿಧಿ ಸ್ನಾಲಿನ್ ಹೀನಾಯ ಸೋಲಿನ ಬಳಿಕ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.
 

By Ravikumar - 02-06-2026


Ads in Post