ನವದೆಹಲಿ: ‘ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026’ ಬಿಡುಗಡೆಯಾಗಿದ್ದು, ಭಾರತದ ಅತಿಶ್ರೀಮಂತರ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಕುಟುಂಬ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದು, ಮುಕೇಶ್ ಅಂಬಾನಿ ಹಾಗೂ ಕುಟುಂಬ ಎರಡನೇ ಸ್ಥಾನಕ್ಕೆ ಇಳಿದಿದೆ.
ವರದಿ ಪ್ರಕಾರ, ಅದಾನಿ ಕುಟುಂಬದ ಒಟ್ಟು ಸಂಪತ್ತು ಶೇ.13ರಷ್ಟು ಹೆಚ್ಚಾಗಿ ₹9.23 ಲಕ್ಷ ಕೋಟಿಗೆ ತಲುಪಿದೆ. ಇದೇ ವೇಳೆ ಮುಕೇಶ್ ಅಂಬಾನಿ ಹಾಗೂ ಕುಟುಂಬದ ಸಂಪತ್ತು ಶೇ.10ರಷ್ಟು ಕುಸಿದು ₹8.63 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಹೀಗಾಗಿ ಉಭಯ ಕುಟುಂಬಗಳ ಸಂಪತ್ತಿನ ನಡುವೆ ಸುಮಾರು ₹59,400 ಕೋಟಿ ವ್ಯತ್ಯಾಸ ದಾಖಲಾಗಿದೆ.
ಲಕ್ಷ್ಮಿ ಮಿತ್ತಲ್ಗೆ ಮೂರನೇ ಸ್ಥಾನ
ಉಕ್ಕು ಉದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಹಾಗೂ ಅವರ ಕುಟುಂಬದ ಸಂಪತ್ತಿನಲ್ಲಿ ಗಣನೀಯ ಏರಿಕೆಯಾಗಿದೆ. ಅವರ ಕುಟುಂಬದ ಸಂಪತ್ತು ಸುಮಾರು ಎರಡು ಪಟ್ಟು ಹೆಚ್ಚಾಗಿ ₹3.39 ಲಕ್ಷ ಕೋಟಿಗೆ ತಲುಪಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಸೀರಂ ಇನ್ಸ್ಟಿಟ್ಯೂಟ್ನ ಸೈರಸ್ ಪೂನಾವಾಲಾ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಭಾರತದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆಯೂ ಹೊಸ ದಾಖಲೆ ನಿರ್ಮಿಸಿದೆ. 2026ರ ಪಟ್ಟಿಯ ಪ್ರಕಾರ ದೇಶದಲ್ಲಿ ಒಟ್ಟು 391 ಶತಕೋಟ್ಯಧಿಪತಿಗಳಿದ್ದಾರೆ. ಕನಿಷ್ಠ ₹1,000 ಕೋಟಿ ಸಂಪತ್ತು ಹೊಂದಿರುವ ಶ್ರೀಮಂತರ ಸಂಖ್ಯೆ 1,810ಕ್ಕೆ ಏರಿಕೆಯಾಗಿದೆ. ಇವರ ಒಟ್ಟು ಸಂಪತ್ತು ಸುಮಾರು ₹187.5 ಲಕ್ಷ ಕೋಟಿಯಷ್ಟಿದೆ ಎಂದು ವರದಿ ತಿಳಿಸಿದೆ