Search


IPL ಫೈನಲ್‌ನಲ್ಲಿ ಗುಜರಾತ್‌ಗೆ ಅನ್ಯಾಯ: ಬಿಸಿಸಿಐ ವಿರುದ್ದ ಗವಾಸ್ಕರ್‌ ಅಸಮಧಾನ

IPL 2026 ಫೈನಲ್‌ ಪಂದ್ಯದ ಬಗ್ಗೆ ಮಾಜಿ ದಿಗ್ಗಜ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಗುಜರಾತ್‌ ತಂಡಕ್ಕೆ ಅನ್ಯಾಯವಾಗಿದೆ, ಫೈನಲ್‌ ಪಂದ್ಯವನ್ನ ಒಂದು ದಿನ ಮುಂದೂಡಬೇಕಿತ್ತು ಎಂದು ಹೇಳಿದ್ದಾರೆ. ಸುನೀಲ್‌ ಗವಾಸ್ಕರ್‌ ಈ ರೀತಿ ಹೇಳಲು ಕಾರಣವಾದರು ಏನು, ಫೈನಲ್‌ ಪಂದ್ಯಕ್ಕೂ ಮುನ್ನ ಗುಜರಾತ್‌ ತಂಡಕ್ಕೆ ಆದ ಅನ್ಯಾಯವಾದರು ಏನು ಎಂಬುದನ್ನ ನೋಡೋಣ ಬನ್ನಿ.

ಗವಾಸ್ಕರ್ ಅಸಮಾಧಾನಕ್ಕೆ ಕಾರಣವೇನು?

ಕ್ವಾಲಿಫೈಯರ್‌ 1ರಲ್ಲಿ ಆರ್ಸಿಬಿ ವಿರುದ್ದ ಸೋತಿದ್ದ ಗುಜರಾತ್‌ ತಂಡ, ನ್ಯೂ ಚಂಡೀಗಢ್‌ನಲ್ಲಿ ರಾಜಸ್ಥಾನದ ವಿರುದ್ದ ಕ್ವಾಲಿಫೈಯರ್‌ 2 ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಜಯಗಳಿಸಿದ ಗುಜರಾತ್‌ ಟೈಟಾನ್ಸ್‌, ಫೈನಲ್‌ ಪಂದ್ಯಕ್ಕಾಗಿ ಅಹಮದ್‌ಬಾದ್‌ಗೆ ಹೊರಟು ನಿಂತಿತ್ತು. ಆದರೆ ಶನಿವಾರ ರಾಜಸ್ಥಾನ್ ಸುತ್ತ ಮುತ್ತ ಸುರಿದ ಭಾರೀ ಮಳೆಯಿಂದಾಗಿ ಹಾಗೂ ಚಂಡಮಾರುತದ ಕಾರಣ ಗುಜರಾತ್ ಟೈಟಾನ್ಸ್ ತಂಡದ ಚಾರ್ಟರ್ಡ್​ ವಿಮಾನ ಟೇಕ್ ಆಫ್​ ಆಗಲು ವಿಳಂಬವಾಗಿತ್ತು. ಇದರಿಂದ ಆಟಗಾರರು ಮಧ್ಯಾಹ್ನದಿಂದ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಗಿ ಬಂತು.

ಅಲ್ಲದೆ ಆಟಗಾರರು ಅಹಮದಾಬಾದ್​ನ ಬಂದು ತಲುಪಿದ್ದು ತಡರಾತ್ರಿ 10.45 ಕ್ಕೆ.  ಅಲ್ಲಿದೆ ಟೀಮ್ ಹೊಟೇಲ್​ಗೆ ತಲುವಷ್ಟರಲ್ಲಿ ಮಧ್ಯರಾತ್ರಿ 12 ಗಂಟೆಯಾಗಿತ್ತು. ಅಂದರೆ ಫೈನಲ್ ಪಂದ್ಯಕ್ಕೂ ಕೇವಲ 20 ಗಂಟೆಗಳ ಮುಂಚಿತವಾಗಿ ಗುಜರಾತ್ ಟೈಟಾನ್ಸ್ ಆಟಗಾರರು ಆಗಮಿಸಿದ್ದರು.
ಇಷ್ಟೊಂದು ಕಡಿಮೆ ಅವಧಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ವಿಶ್ರಾಂತಿ ಪಡೆದು, ಫೈನಲ್ ಪಂದ್ಯಕ್ಕೆ ಸಜ್ಜಾಗಬೇಕಿತ್ತು. ಈ ವೇಳೆ ಗುಜರಾತ್‌ ಆಟಗಾರರಿಗೆ ಪ್ರಾಕ್ಟಿಸ್‌ ಮಾಡಲು ಅವಕಾಶ ಸಿಕ್ಕಿರಲಿಲ್ಲ. 

ಈ ವಿಷಯದ ಕುರಿತು ಸುನೀಲ್‌ ಗವಾಸ್ಕರ್‌ ಮಾತನಾಡಿದ್ದು " ಅತ್ತ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇದ್ದರೂ ಅದನ್ನು ಬಳಸಿಯಾದರೂ ಗುಜರಾತ್ ಟೈಟಾನ್ಸ್ ತಂಡಕ್ಕೆ ವಿಶ್ರಾಂತಿಗೆ ಅನುವು ಮಾಡಿಕೊಡಬಹುದಿತ್ತು. ಸೋಮವಾರಕ್ಕೆ ಫೈನಲ್ ಪಂದ್ಯವನ್ನು ಮುಂದೂಡಿದ್ದರೆ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಸಂಪೂರ್ಣ ವಿಶ್ರಾಂತಿ ಪಡೆದು ಅಂತಿಮ ಮ್ಯಾಚ್​ಗೆ ಸಜ್ಜಾಗುತ್ತಿದ್ದರು. 

ಇದರಿಂದ ಅಭಿಮಾನಿಗಳಿಗೆ ಮತ್ತಷ್ಟು ರೋಚಕ ಹಾಗೂ ಸಮಬಲದ ಹೋರಾಟದ ಫೈನಲ್ ಪಂದ್ಯವನ್ನು ನೋಡುವ ಅವಕಾಶ ದೊರೆಯುತ್ತಿತ್ತು. ಆದರೆ ಬಿಸಿಸಿಐ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪ್ರಯಾಣದ ದಣಿವು ಹಾಗೂ ಮಾನಸಿಕ ಸ್ಥಿತಿಯನ್ನೇ ಪರಿಗಣಿಸಿಲ್ಲ. ಅಹಮದಾಬಾದ್​ಗೆ ಬಂದ 20 ಗಂಟೆಯೊಳಗೆ ಫೈನಲ್ ಮ್ಯಾಚ್ ಆಡಿಸಿದ್ದಾರೆ. ಇದು ನಿಜಕ್ಕೂ ಅನ್ಯಾಯ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

By Ravikumar - 02-06-2026


Ads in Post