Search


ಕೃಷ್ಣ ಮಠದಲ್ಲಿ ನೆಲದ ಮೇಲೆ ಊಟ ಮಾಡಿ ಹರಕೆ ತೀರಿಸಿದ "ಸಿಂಹಪ್ರಿಯ" ಜೋಡಿ

ಉಡುಪಿ : ಸಿಂಹಪ್ರಿಯ ದಂಪತಿಗಳು ತಮ್ಮ ಮುದ್ದಾದ ಮಗುವಿನೊಂದಿಗೆ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದು. ಮಠದಲ್ಲಿ ದೇವರ ದರ್ಶನದ ನಂತರ, ಭೋಜನ ಶಾಲೆಯಲ್ಲಿ ನೆಲದ ಮೇಲೆ ಊಟ ಬಡಿಸಿಕೊಂಡು, ನೆಲಭೋಜನ ಮಾಡಿದ್ದಾರೆ. ಹರಕೆ ಕಟ್ಟಿಕೊಂಡಿದ್ದ ಕಾರಣ ಹರಕೆ ತೀರಿಸಿದ್ದೇವೆ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ನ ಸೆಲಬ್ರೆಟಿ ದಂಪತಿಯಾಗಿರುವ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹಾರಿಗೆ ಕಳೆದ ವರ್ಷ ಜನವರಿ 26ರಂದು ಮುದ್ದಾದ ಗಂಡು ಮಗು ಜನಿಸಿತ್ತು.  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಈ ಜೋಡಿಗೆ ಈ ವಿಶಯ ಮತ್ತಷ್ಟು ಖುಷಿ ನೀಡಿತ್ತು. ಇದೀಗ ಮಗು ಜನಿಸಿದ 1 ವರ್ಷದ ನಂತರ ದಂಪತಿಗಳಿಬ್ಬರು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.

ವಸಿಷ್ಠ ಸಿಂಹ-ಹರಿಪ್ರಿಯಾ

ಹರಕೆ ಕಟ್ಟಿಕೊಂಡು ದಂಪತಿಗಳು..!

ಮಗು ಹುಟ್ಟಿದರೆ ನೆಲಭೋಜನ ಮಾಡುವುದಾಗಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ದಂಪತಿಗೆ ಗಂಡು ಮಗು ಜನಿಸಿತು. ಈಗ ಮಗನೊಂದಿಗೆ ಬಂದು ಶ್ರೀಕೃಷ್ಣನ ದರ್ಶನ ಪಡೆದ ಅವರು ಮುಖ್ಯಪ್ರಾಣನ ಸನ್ನಿಧಿಯಲ್ಲಿ ನೆಲಭೋಜ‌ನ ಪ್ರಸಾದ ಸ್ವೀಕರಿಸಿದ್ದಾರೆ. 

ಮಗನೊಂದಿಗೆ ದೇವರ ದರ್ಶನ ಮಾಡಿದ ಬಳಿಕ ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದವನ್ನು ಕೂಡ ಅವರು ಪಡೆದರು. ‘ಬಹಳ ಗ್ಯಾಪ್ ಬಳಿಕ ನಾವು ಉಡುಪಿ ಮಠಕ್ಕೆ ಬಂದು ಶ್ರೀಕೃಷ್ಣನ ದರ್ಶನ ಮಾಡಿದೆವು. ಒಂದೂವರೆ ವರ್ಷದ ಹಿಂದೆ ಬಂದು ನಾವು ನೆಲಭೋಜನದ ಹರಿಕೆ ಮಾಡಿಕೊಂಡಿದ್ದೆವು. ದೇವರ ಅನುಗ್ರಹ ನಮಗೆ ಧಕ್ಕಿದೆ ಎಂಬುದು ನಮ್ಮ ನಂಬಿಕೆ. ಎಲ್ಲ ಪದ್ಧತಿಯು ಗಟ್ಟಿ ಹಿನ್ನೆಲೆಯಲ್ಲಿ ಹುಟ್ಟಿರುತ್ತದೆ. ಅದನ್ನು ನಾವು ಪಾಲಿಸಿದ್ದೇವೆ’ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

By Ravikumar - 31-05-2026


Ads in Post