Search


ನನ್ನ ಮಾಜಿ ಪ್ರೇಯಸಿಯಿಂದಲೇ ಜೀವ ಭಯವಿದೆ ಗುರುಗಳೆ,ಬೇರೆ ಊರಿಗೆ ಹೋದಾಗ ಆಕೆಗೂ ನನಗೂ ಸಂಬಂಧವಿತ್ತು

ಹೆಸರು ಮಂಜುನಾಥ್ . ಊರು ಚಿಕ್ಕೋಡಿ ನನಗೆ ನನ್ನ ಮಾಜಿ ಪ್ರೇಯಸಿಯಿಂದಲೇ ಜೀವ ಭಯವಿದೆ ಗುರುಗಳೆ. ನಾನು ಬಿಎ ಓದುತ್ತಿದ್ದಾಗ ಲವ್ ಮಾಡುತ್ತಿದ್ದೆವು. ಆದ್ರೆ ಆ ಬಳಿಕ ನಾನು ಉನ್ನತ ವ್ಯಾಸಂಗ ಮಾಡಲು ಬೇರೆ ಊರಿಗೆ ಹೋದಾಗ ಆಕೆಗೂ ನನಗೂ ಸಂಬಂಧವಿತ್ತು. ಬಳಿಕ ಆಕೆ ನನ್ನಿಂದ ದೂರವಾದಳು ನಾನು ಸಹ ಆಕೆಯಿಂದ ದೂರವಾದೆ. ಬಳಿಕ ನಾನು ಮತ್ತೊಬ್ಬಳನ್ನ ಲವ್ ಮಾಡಿದೆ. ಆದ್ರೆ ಈಗ ನಾನು ಇನ್ನೊಬ್ಬಳನ್ನ ಲವ್ ಮಾಡುತ್ತಿರುವುದು ಆಕೆಗೆ ತಿಳಿದು ನನಗೆ ಆಕೆ ಸಾಕಷ್ಟು ತೊಂದರೆ ನೀಡುತ್ತಿದ್ದಾಳೆ. ಈಗ ಮತ್ತೆ ನನ್ನನ್ನೇ ಪ್ರೇಮಿಸು, ಇನ್ನೊಬ್ಬಳನ್ನ ಬಿಟ್ಟುಬಿಡು ಅಂತ ಬೆದರಿಕೆ ಹಾಕುತ್ತಿದ್ದಾಳೆ. ಇಷ್ಟು ದಿನ ಬೇಡವಾಗಿದ್ದ ನಾನು, ಈಗ ಮತ್ತೊಂದು ಹುಡುಗಿ ನನ್ನನ್ನ ಪ್ರೇಮಿಸುತ್ತಿದ್ದಾಳೆ ಅನ್ನೋದನ್ನ ತಿಳಿದು ನನಗೆ ಹಿಂದೆ ನೀಡೋದು, ನನ್ನ ಪೋಷಕರ ಬಳಿ ನಿನ್ನ ಬಗ್ಗೆ ಹೇಳುತ್ತೇನೆ. ನಿನ್ನ ತಪ್ಪುಗಳನ್ನ ಬಹಿರಂಗ ಮಾಡುತ್ತೇನೆ. ಸಮಾಜದಲ್ಲಿ ನೀನು ತಲೆ ಎತ್ತಿ ನಡೆಯಬಾರುದ ಹಾಗೆ ಮಾಡುತ್ತೇನೆ, ನೀನು ಈಗ ಯಾರನ್ನ ಪ್ರೀತಿಸುತ್ತಿದ್ದೀಯಾ ಆಕೆಯ ಮನೆಗೆ ಹೋಗಿ ನನ್ನ ನಿನ್ನ ಸಂಬಂಧದ ಬಗ್ಗೆ ತಿಳಿಸುತ್ತೇನೆ ಎನ್ನುತ್ತಿದ್ದಾಳೆ ನನ್ನ ಮಾಜಿ ಪ್ರೇಯಸಿ. ಈಗ ನನಗೆ ಏನು ಮಾಡಬೇಕು ಅನ್ನೋದು ತಿಳಿಯುತ್ತಿಲ್ಲ, ಎಲ್ಲಿ ನನ್ನ ಜೀವಕ್ಕೆ ತೊಂದರೆ ನೀಡುತ್ತಾಳೋ ಅನ್ನೋದು ನನಗೆ ಭಯವಾಗಿದೆ.

ಸೀಕ್ರೆಟ್ ಗುರು

ಮಂಜುನಾಥ್ ನೋಡಿ ಪ್ರೀತಿಯಲ್ಲಿ ಹುಡುಗಿಗೆ ಈ ಹುಡುಗ ನನಗೇ ಬೇಕು ಅನ್ನೋ ಪೊಸೆಸೀವ್ ನೆಸ್ ಇರುತ್ತೆ. ಎಲ್ಲಿ ನನ್ನ ಹುಡುಗ ನನ್ನನ್ನ ಬಿಟ್ಟು ಬೇರೆ ಹುಡುಗಿಯರ ಜೊತೆ ಹೋಗುತ್ತಾನೋ ಅನ್ನೋ ಭಯ ನಿರಂತರವಾಗಿ ಯುವತಿಗೆ ಕಾಡುತ್ತಲೇ ಇರುತ್ತೆ. ಹಾಗಾಗಿ ಯಾವಾಗಲು ಪ್ರೇಯಸಿಯೂ ಹುಡುಗನ ಮೇಲೆ ಸಾಕಷ್ಟು ಅನುಮಾನ ವ್ಯಕ್ತಪಡಿಸುತ್ತಿರುತ್ತಾಳೆ.ಅದೆರಲ್ಲೂ ಆಕೆ ಯಾವ ಮಟ್ಟಿಗೆ ಹಿಂಸೆ ನೀಡುತ್ತಿರುತ್ತಾಳೆ ಅಂದ್ರೆ, ಕಟ್ಟಿಕೊಂಡ ಹೆಂಡತಿಯೂ ಅಷ್ಟು ಅನುಮಾನ ವ್ಯಕ್ತಪಡಿಸಲ್ಲ ಅಷ್ಟೊಂದು ಅನುಮಾನ, ಕಾಳಜಿ ಎರಡನ್ನು ಮಾಡುತ್ತಿರುತ್ತಾಳೆ.ಹೀಗೆ ಯಾವಾಗ ನಿಮ್ಮ ಮೊದಲನೆ ಪ್ರೇಯಸಿಗೆ ನೀವು ಇನ್ನೊಬ್ಬಳ  ಜೊತೆಯಲ್ಲಿ ಲವ್ ಮಾಡುತ್ತಿದ್ದೀರಿ ಎಂದು ತಿಳಿಯಿತೋ ಆವಾಗ ಸಾಮಾನ್ಯವಾಗಿ ಆಕೆಗೆ ನಿಮ್ಮ ಬಗ್ಗೆ ಅದೇ ಪೊಸೆಸೀವ್ ಪ್ರಾರಂಭವಾಗಿದೆ. ನೀವು ಬೇಕು ಅನ್ನೋ ಒಂದು ಹಂಬಲ ಚಡಪಡಿಕೆ ಆರಂಭವಾಗಿದೆ. ನೀವು ಮೋಸ ಮಾಡಿ ಆಕೆಯನ್ನ ತೊರೆದು ಇನ್ನೊಬ್ಬಳ ಜೊತೆ ಪ್ರೇಮಿಸುತ್ತಿದ್ದೀರಿ ಎಬ ಅನುಮಾನ ಕಾಡಿ ಹೀಗೆ ನಿಮ್ಮ ಮಾಜಿ ಪ್ರಿಯತಮೆ ನಿಮಗೆ ತೊಂದರೆ ನೀಡುತ್ತಿರಬಹುದು. ಈಗ ನೀವು ಆಕೆಯನ್ನ ಭೇಟಿ ಮಾಡಿ ನಡೆದ ಎಲ್ಲ ಸಂಗತಿಗಳನ್ನ ತಿಳಿಸಿ ನನ್ನಿಂದ ಯಾವುದೇ ಸಮಸ್ಯೆ ಆಗಿಲ್ಲ, ನೀವು ದೂರವಾದ ಹಿನ್ನಲೆಯಲ್ಲಿ  ನಾನು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಯುವತಿ ಜೊತೆ ನನಗೆ ಲವ್ ಆಗಿದೆ. ಆದ್ರೆ ನಿಮ್ಮ  ಬೆದರಿಕೆಯಿಂದಾಗಿ  ನಾನು ಏನು ಮಾಡದ ಸ್ಥಿತಿಯಲ್ಲಿದ್ದೇನೆ. ನಾನು ಆಕೆ ಜೊತೆ ಈಗಾಗಲೇ ಸಾಕಷ್ಟು ದೂರ ಹೋಗಿದ್ದೇನೆ, ನೀವು ನನಗೆ ತೊಂದರೆಕೊಡಬೇಡಿ, ನಿಮಗೂ ಮೊದಲಿನಂತೆ ಪ್ರೀತಿ ನೀಡುತ್ತೇನೆ ಆದ್ರೆ ಪ್ರೇಮಿಯಾಗಲ್ಲ ಒಬ್ಬ ಒಳ್ಳೆ ಗೆಳೆಯನಾಗಿ ಅನ್ನೊದನ್ನ ಎಂಬುದನ್ನ ಮನವರಿಕೆ ಮಾಡಿ, ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾಋ ಸಿಕ್ಕೇ ಸಿಗುತ್ತೆ..

By News Desk - 29-04-2026


Ads in Post