Search


ನನಗೆ ನಿಜಕ್ಕೂ ಅವಳ ಪರಿಸ್ಥಿತಿ ನೋಡಿ ಸಂಕಟವಾಗುತ್ತಿದೆ, ಇಲ್ಲಿ ಆಕೆಯ ತಪ್ಪೇನು ಇಲ್ಲ: ನಾಗ ಚೈತನ್ಯ

ಸಮಂತಾ ವಿಚ್ಛೇದನದ ಬಳಿಕ ನಾಗ ಚೈತನ್ಯ ನಟಿ ಶೋಭಿತಾ ಅವರನ್ನು ವಿವಾಹವಾಗಿದ್ದಾರೆ. 2024ರ ಡಿಸೆಂಬರ್ 04 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಚ್ಯಾಟ್ ಮಾಡಿಕೊಂಡರು. ಆ ಬಳಿಕ ಎದುರು ಭೇಟಿ ಆಗಿ, ಗೆಳೆತನ ಮೂಡಿ, ಅದು ಪ್ರೀತಿಗೆ ತಿರುಗಿ ಈಗ ವಿವಾಹ ಆಗಿದ್ದಾರೆ. ಈಗ ನಾಗಚೈತನ್ಯ ಅವರು ಶೋಭಿತಾ ಬಗ್ಗೆ ಮಾತನಾಡಿದ್ದಾರೆ. ತನ್ನ ಎರಡನೇ ಮದುವೆಯ ಬಗ್ಗೆ ನಾಗಚೈತನ್ಯ ಹೃದಯ ತುಂಬಿ ಮಾತನಾಡಿದ್ದಾರೆ.

ನನಗೆ ನಿಜಕ್ಕೂ ಅವಳ ಬಗ್ಗೆ ಬೇಸರವಾಗುತ್ತಿದೆ. ಇಲ್ಲಿ ಶೋಭಿತಾ ಧುಲಿಪಾಲ ಅವರ ತಪ್ಪೇನೂ ಇಲ್ಲ. ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಸಹಜವಾಗಿ ಭೇಟಿಯಾದೆವು. ಗೆಳೆತನ ಬೆಳೆಯಿತು, ನಂತರ ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡೆವು ಕಾಲಾನಂತರದಲ್ಲಿ ನೈಜ ಪ್ರೀತಿ ಕಟ್ಟಿಕೊಂಡೆವು. ಆದರೆ ಅವಳ ಸುತ್ತ ನಡೆಯುತ್ತಿರುವ ದ್ವೇಷವು ನಿಜವಾಗಿಯೂ ಅನ್ಯಾಯವಾಗಿದೆ ಎಂದಿದ್ದಾರೆ.

ನನ್ನ ಹಿಂದಿನ ಜೀವನಕ್ಕೂ ಅವಳಿಗೂ ಯಾವುದೇ ಸಂಬಂಧ ಇಲ್ಲ. ಅವಳಿಗೆ ಸಾಕಷ್ಟು ಧನ್ಯವಾದ ಹೇಳಬೇಕು. ಆಕೆಯ ತಾಳ್ಮೆ ಹಾಗೂ ಪ್ರಬುದ್ಧತೆಗೆ ನಾನು ಮನಸೋತಿದ್ದೇನೆ. ಅವರು ನಿಜವಾದ ಹೀರೋ ಎಂದಿದ್ದಾರೆ ನಾಗ ಚೈತನ್ಯ. ಶೋಭಿತಾ ಅವರ ಪರಿಸ್ಥಿತಿ ನೋಡಿ ಸಂಕಟವಾಗುತ್ತಿದೆ. ಶೋಭಿತಾ ತಮ್ಮನ್ನು ಅರ್ಥೈಸಿಕೊಳ್ಳುತ್ತಿರುವ ರೀತಿ ನೋಡಿ ಖುಷಿ ಕೂಡ ಇದೆ ಎಂದಿದ್ದಾರೆ.

By News Desk - 03-05-2026


Ads in Post