Search


ರಾಹುಲ್‌ ಗಾಂಧಿಗೆ ಮಾತು ಕೊಟ್ಟಿದ್ದೆ, ಅದಕ್ಕೆ ರಾಜೀನಾಮೆ ಕೊಟ್ಟೆ; ಮಾಜಿ ಸಿಎಂ ಸಿದ್ದರಾಮಯ್ಯ

ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ರಾಜೀನಾಮೆ ಕುರಿತು ಮತ್ತೊಮ್ಮೆ ಮಾತನಾಡಿದ್ದು, ಅಧಿಕಾರ ಹಂಚಿಕೆ ಕುರಿತು ಮಾತು ಕೊಟ್ಟಿದ್ದೆ, ಅದನ್ನ ಉಳಿಸಿಕೊಂಡೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅನೇಕ ನಾಯಕರು ನನಗೆ ರಾಜೀನಾಮೆ ಕೊಡಬೇಡಿ ಎಂದು ಒತ್ತಡ ಏರಿದ್ದರು ಎಂಬ ಸತ್ಯವನ್ನು ಹೊರಹಾಕಿದ್ದಾರೆ.

ಚಿಕ್ಕಮಗಳೂರಿನ ಕಡೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ʻನಾನು ಯಾವುದೇ ದೇವಸ್ಥಾನಕ್ಕೆ ಹೋದಾಗ ಮೋದಿ…ಮೋದಿ… ಅಂತಿದ್ರು. ಮೋದಿ ಸ್ವಾತಂತ್ರ‍್ಯಕ್ಕೆ ಹೋರಾಡಿದ್ರಾ, ಸಂಗೊಳ್ಳಿ ರಾಯಣ್ಣ ರೀತಿ ಹೋರಾಡಿದ್ರಾ? ಜನ ಸುಮ್ನೆ ಮೋದಿ… ಮೋದಿ… ಅಂತಾರೆ. 2 ಕೋಟಿ ಕೆಲಸ ಎಲ್ಲಿ, ಅಚ್ಚೇ ದಿನ್ ಎಲ್ಲಿ, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು ಮಾಡಿದ್ರಾ? 12 ವರ್ಷ ಆಯ್ತು ಪ್ರಧಾನಿ ಆಗಿ, ಕಪ್ಪು ಹಣ ತಂದು 15 ಲಕ್ಷ ಹಾಕ್ತೀನಿ ಅಂದ್ರು ಹಾಕಿದ್ರಾ? ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು? ಪಾಪ… ಜನರಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆದಿದ್ದಾರೆ ಎಂದು ಟಾಂಗ್ ಕೊಟ್ಟರು. 

ಇನ್ನು ಪರಿಷತ್‌ ಸದಸ್ಯ ಸಿ.ಟಿ ರವಿಯವರ ಕುರಿತು ವಾಗ್ದಾಳಿ ನಡೆಸಿದ ಸಿಎಂ ʻಮೊನ್ನೆ ಸಿ.ಟಿ ರವಿ ನನ್ನ ಬಗ್ಗೆ ಹೇಳ್ತಿದ್ನಂತೆ, ಗೃಹಲಕ್ಷ್ಮಿ ಯೋಜನೆ ಕೊಡ್ಲಿಲ್ಲ ಅಂತ ನನ್ನ ಸಿಎಂ ಸ್ಥಾನ ಹೋಯ್ತು ಅಂತ ಹೇಳಿದ್ನಂತೆ, ಆದರೆ ನಾನು ರಾಜೀನಾಮೆ ಕೊಡ್ತೀನಿ ಅಂತ ರಾಹುಲ್‌ ಗಾಂಧಿಗೆ ಮಾತು ಕೊಟ್ಟಿದ್ದೆ, ಅವರು ರಾಜೀನಾಮೆ ಕೊಡು ಅಂತ ಕೇಳಿದ್ದಕ್ಕೆ ನಾನು ರಾಜೀನಾಮೆ ಕೊಟ್ಟೆ. ಆದರೆ ಬಹಳ ಜನ ನನಗೆ ರಾಜೀನಾಮೆ ಕೊಡ್ಬೇಡಿ ಸರ್‌ ಅತ ಹೇಳಿದ್ರು, ಆದರೆ ನಾನು ರಾಜಕೀಯದಲ್ಲಿ ಮಾತು ಉಳಿಸಿಕೊಳ್ಳಲು ಎಂದು ಕೊಟ್ಟೆ. ರಾಜಕೀಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದು ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.

By Ravikumar - 05-09-2026


Ads in Post