ಯಡಿಯೂರಪ್ಪ ಗುಡುಗಿದರೆ ವಿಧಾನಸೌಧವೇ ನಡುಗುವುದು.!
ಅಧಿವೇಶನ ನಡೀತಿದೆ...ಅದು ರಾಮಕೃಷ್ಣ ಹೆಗಡೆಯ ಸರ್ಕಾರ.ಮಂತ್ರಿ ರಾಚಯ್ಯನವ್ರಿಂದ ಒಂದು ವಿಧೇಯಕ ಮಂಡನೆ. ಅರಣ್ಯವಾಸಿಗಳನ್ನೆಲ್ಲಾ ಕಾಡಿನಿಂದ ಒಕ್ಕಲೆಬ್ಬಿಸೋ ವಿಧೇಯಕವದು.
ವಿರೋಧಪಕ್ಷದ ಸದಸ್ಯರಿಂದ ಅದ್ಯಾವ ರೇಂಜಿಗೆ ವಿರೋಧ ವ್ಯಕ್ತವಾಗಿಬಿಡುತ್ತದೆ ಅಂದರೆ, ಕೊನೆಗೂ ಸೋಲೊಪ್ಪಿಕೊಂಡು ಎದ್ದು ನಿಂತ ರಾಚಯ್ಯ, ಸದಸ್ಯರಿಂದ ತೀವೃ ವಿರೋಧ ವ್ಯಕ್ತವಾದ ಕಾರಣ, ಮಂಡಿಸಿದ ವಿಧೇಯಕವನ್ನು ವಾಪಸ್ ತಗೊಳ್ತಿದೀನಿ ಅಂದುಬಿಟ್ಟಿದ್ರು....ಆ ವಿರೋಧ ಪಕ್ಷ ಬಿಜೆಪಿ...ಹಾಗೂ ಆಗ ವಿಧಾನಸಭೆಯೊಳಗಿದ್ದ ಸದಸ್ಯರ ಸಂಖ್ಯೆ ಎಷ್ಟು ಗೊತ್ತಾ? ಕೇವಲ ಒಂದು.ಇಡೀ ಸದನದಲ್ಲಿ ಒಬ್ಬನೇ ಸದಸ್ಯನಾಗಿದ್ದೂ ಕೂಡಾ, ಅಂತಾ ಬಲಿಷ್ಟ ಸರ್ಕಾರವನ್ನೇ ನಡುಗಿಸಿದ ಆ ಸಿಂಗಲ್ ಶೇರ್ ಶಾಸಕನೇ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ...
ಅವತ್ತು ವಿಧಾನಸಭೆಯಲ್ಲಿ...ಏಕಾಂಗಿಯಾಗಿದ್ದೂ ಅದ್ಯಾವಪರಿ, ವಿಧೇಯಕದ ವಿರುದ್ಧ ವಿರೋಧ, ಹಾಗೂ ಸಿಂಹಘರ್ಜನೆ ಅಂದ್ರೆ, ಸರ್ಕಾರವೇ ಶರಣಾಗಿ ಮಂಡಿಯೂರಿಬಿಟ್ಟಿತ್ತು.ಆಗ ಹುಟ್ಟಿಕೊಂಡ ವಾಕ್ಯವೇ...ಯಡಿಯೂರಪ್ಪ ಗುಡುಗಿದರೆ ವಿಧಾನಸೌಧವೇ ನಡುಗುವುದು.
ಹೀಗೆ ಶುರುವಾದ ಜರ್ನೀ...ನಿರಂತರವಾಗಿ ರೈತರ, ನೊಂದವರ ಶೋಷಿತ ವರ್ಗಗಳ ಪರ ದಶಕಗಳ ಕಾಲ ಹೋರಾಟವನ್ನೇ ಬದುಕಾಗಿಸಿಕೊಂಡು, ಜೀವನವನ್ನೇ ಜನಸೇವೆಗಾಗಿ ಮುಡುಪಾಗಿಟ್ಟವರು ಯಡಿಯೂರಪ್ಪ...
ರಾಜ್ಯದ ರಾಜಕಾರಣ...ರಾಜಕೀಯ ನಡೆಗಳು, ನಿರ್ಧಾರಗಳು ಅಂತ ಬಂದಾಗ, ಎಂತೆಂತಾ ಹೈಕಮಾಂಡುಗಳಿದ್ದಾಗ್ಯೂ,.ದೇಶಕ್ಕೇ ಯಾರೇ ಏನೇ ಇರಲಿ,
ರಾಜ್ಯಕ್ಕೆ ತಾನೇ ಹೈಕಮಾಂಡ್ ಎಂಬುದನ್ನು ಸಾಧಿಸಿ ತೋರಿಸಿದ ಏಕೈಕ ರಾಜಕಾರಣಿ ಯಡಿಯೂರಪ್ಪ...ಅದು 2011ರ ಸಮಯ...ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಜೈಲಿಗೆ ಹೋಗಬೇಕಾದ ಸಂದರ್ಭ. ಯಾರನ್ನಾದರೂ ಕೂರಿಸಬೇಕಲ್ಲ. ಆಗ ಹೈಕಮಾಂಡ್ ಆಯ್ಕೆ ಜಗದೀಶ್ ಶೆಟ್ಟರ್.ಇದನ್ನೊಪ್ಪದ ಯಡಿಯೂರಪ್ಪ, ಸಡ್ಡು ಹೊಡೆದು ಸದಾನಂದ ಗೌಡರ ಬೆನ್ನಿಗೆ ನಿಂತು ಆತನನ್ನೇ ಮುಖ್ಯಮಂತ್ರಿ ಮಾಡಿಬಿಡುತ್ತಾರೆ.ವಿಷಯ ಇದಲ್ಲ....ಜೈಲಿನಿಂದ ವಾಪಸ್ ಬಂದ್ಮೇಲೆ, ಕುರ್ಚಿ ಬಿಡೋದಿರ್ಲಿ ಈಗ ನಾನೇ ಕಿಂಗು ನಿಮ್ ಆಟ ನಡೆಯೋಲ್ಲ ಪಕ್ಷದಲ್ಲೀಗ ಅಂತ ಯಡಿಯೂರಪ್ಪಂಗೇ ಸಡ್ಡುಹೊಡೆದು ನಿಂತುಬಿಡೋದಾ ಸದಾನಂದ ಗೌಡ್ರು.
ಆಗ....ಯಾವ ಜಗದೀಶ್ ಶೆಟ್ಟರಿಗೇ ಸಡ್ಡು ಹೊಡೆದು ಮುಖ್ಯಮಂತ್ರಿ ಮಾಡಿದ್ರೋ,ಅದೇ ಜಗದೀಶ್ ಶೆಟ್ಟರನ್ನೇ ಬೆಂಬಲಿಸೋದೂ ಅಲ್ಲದೆ, ಸದಾನಂದಗೌಡ್ರನ್ನ ಮುಖ್ಯಮಂತ್ರಿ ಕುರ್ಚಿಯಿಂದಾನೇ ಇಳಿಸಿ ಜಗದೀಶ್ ಶೆಟ್ರನ್ನ ಮುಖ್ಯಮಂತ್ರಿ ಮಾಡಿಬಿಡ್ತಾರೆ ಕಿಂಗ್ ಮೇಕರ್ ಯಡಿಯೂರಪ್ಪ...
ರಾಜ್ಯ ರಾಜಕಾರಣದಲ್ಲಿ...ಯಡಿಯೂರಪ್ಪನ ಗತ್ತು ಗೈರತ್ತು, ಖದರ್ರು ಪವರ್ರು ಅದ್ಯಾವ್ ರೇಂಜಿಂದು ಅನ್ನೋದಕ್ಕೊಂದು ಸಣ್ಣ ಉದಾಹರಣೆಯಿದು...ನೀವು ಈತನನ್ನು...ಪ್ರೀತಿಸಬಹುದು, ಧ್ವೇಷಿಸಬಹುದು. ಆದರೆ,ರಾಜ್ಯ ರಾಜಕಾರಣ ಅಂತ ಬಂದಾಗ, ಇನ್ನೂ ನೂರು ತಲೆಮಾರುಗಳ ನಂತರವೂ ಯಾರಾದ್ರೂ ರಾಜ್ಯ ರಾಜಕೀಯ ಇತಿಹಾಸದ ಬಗ್ಗೆ ಪುಸ್ತಕ ಬರೆಯಲು ಹೊರಟಲ್ಲಿ, ಯಾರನ್ನೇ ಕೈಬಿಟ್ಟರೂ, ಯಡಿಯೂರಪ್ಪನ ಅಧ್ಯಾಯವಿಲ್ಲದೆ ಪುಸ್ತಕ ಬರೆಯೋದು ಕಷ್ಟವಲ್ಲ...ಅಸಾಧ್ಯ.
ಹೆಸರಿಗೂ ಇಲ್ಲದ ಪಕ್ಷವೊಂದನ್ನು...ಒಂದು ಇಟ್ಟಿಗೆಯಿಂದ ಶುರುಮಾಡಿ ಬೃಹತ್ ಸೌಧವಾಗುವವರೆಗೂ ಕಟ್ಟಿದ್ದೂ ಅಲ್ಲದೆ, ಇಡೀ ನಾಡಿನಾದ್ಯಂತ ಕೇಸರೀ ಅಲೆಯೆಬ್ಬಿಸಿಬಿಟ್ಟ ಯಡಿಯೂರಪ್ಪನೆಂಬ ಆಲದಮರಕ್ಕಿಂದು...
ರಾಜಕೀಯದಲ್ಲಿ ಬರೋಬ್ಬರಿ ಐವತ್ತು ವರ್ಷ ಪೂರ್ಣಗೊಂಡ ಸುವರ್ಣ ಮಹೋತ್ಸವ.
ಅಭಿನಂದನೆಗಳು...
50ವರ್ಷ ಅಭಿಮಾನೋತ್ಸವ ಯಡಿಯೂರಪ್ಪ.ಸುಧೀರ್ ಸಾಗರ ಅವರು ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದ ಸಾಲುಗಳು ಇಲ್ಲಿ ಪೋಸ್ಟ್ ಮಾಡಲಾಗಿದೆ .