ದೇಶದ ಸಾಮಾನ್ಯ ಮತದಾರರ ಬೆನ್ನಿಗೆ ಚೂರಿ ಹಾಕಿ ಪ್ರಜಾಪ್ರಭುತ್ವದ ಕುತ್ತಿಗೆ ಹಿಸುಕಲು ಯತ್ನಿಸಿದ ಆರೋಪ ಹೊತ್ತಿರುವ ಸಿಇಸಿ ಜ್ಞಾನೇಶಕುಮಾರ್ ಮತ್ತು ಚುನಾವಣಾ ಆಯೋಗದ ಐಟಿ ವಿಭಾಗದ ಮಹಾ ನಿರ್ದೇಶಕಿ ಸೀಮಾ ಖನ್ನಾ ಅವರ ಪದಚ್ಯುತಿ ಆಗಲೇಬೇಕು. ಈ ಅಕ್ಷಮ್ಯ, ಘೋರ ಅಪರಾಧ ಎಸಗಿದ್ದಕ್ಕೆ ಇವರ ವಿರುದ್ಧ ಸೂಕ್ತ ತನಿಖೆ ನಡೆದು, ಇವರಿಗೆ ತಕ್ಕ ಶಿಕ್ಷೆ ಆಗುವಂತೆ ಖಚಿತಪಡಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ...!
ಆದರೆ, ಅಷ್ಟೇ ಸಾಲದು...
1) ಚುನಾವಣಾ ಆಯುಕ್ತರ ನೇಮಕಕ್ಕೆ ಇರುವ ಆಯ್ಕೆ ಸಮಿತಿಯಲ್ಲಿನ ಒಬ್ಬ ಮಂತ್ರಿಯನ್ನು ಕಿತ್ತೆಸೆದು ತಕ್ಷಣ ಆ ಜಾಗದಲ್ಲಿ ದೇಶದ ಮುಖ್ಯ ನ್ಯಾಯಾಧೀಶರನ್ನು ಸೇರಿಸಬೇಕು.
2) ಚುನಾವಣಾ ಆಯುಕ್ತರು ತಮ್ಮ ಅಧಿಕಾರಾವಧಿಯಲ್ಲಿ ಏನೇ ತಪ್ಪು ಮಾಡಿದರೂ ಅವರು ಸೇವೆಯಲ್ಲಿರುವಾಗ ಅಥವಾ ನಿವೃತ್ತಿ ಹೊಂದಿದ ನಂತರ ಅವರ ವಿರುದ್ಧ ಯಾವುದೇ ತನಿಖೆ ನಡೆಸದಂತೆ ಮೋದಿ ಸರ್ಕಾರ 2023ರಲ್ಲಿ ಜಾರಿಗೆ ತಂದಿರುವ Natural Justice ವಿರುದ್ಧವಾಗಿರುವ ಕರಾಳ ಕಾಯ್ದೆ ತಕ್ಷಣ ರದ್ದಾಗಬೇಕು.
3) ಜ್ಞಾನೇಶಕುಮಾರ್ ಸಿಇಸಿ ಆದ ನಂತರ ಆಯೋಗ ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನು ರದ್ದು ಮಾಡಬೇಕು. ಮಾಜಿ ಸಿಇಸಿ ರಾಜೀವಕುಮಾರ್ ಅವಧಿಯಲ್ಲಿನ ನಿರ್ಧಾರಗಳನ್ನೂ ಪುನರ್ ವಿಮರ್ಶೆ ಮಾಡಿ ಈ ಇಬ್ಬರ ವಿರುದ್ಧವೂ ತನಿಖೆ ಆರಂಭಿಸಬೇಕು.
4) ಹರಿಯಾಣ, ಮಹಾರಾಷ್ಟ್ರ, ಬಿಹಾರ ಹಾಗೂ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳಲ್ಲಿ ಆಯೋಗ ನಡೆಸಿರುವ ಅಕ್ರಮಗಳ ಪಾರದರ್ಶಕ ತನಿಖೆಗೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಆಯೋಗ ರಚನೆ ಆಗಬೇಕು.
5) ಭವಿಷ್ಯದಲ್ಲಿ ಎಲ್ಲಾ ಚುನಾವಣೆಗಳು ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ನಡೆಯುವಂತೆ ಕಾನೂನಾತ್ಮಕ ಬದಲಾವಣೆ ತರಬೇಕು.
ಪ್ರತಿಪಕ್ಷಗಳು ಸೇರಿದಂತೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಎಲ್ಲರೂ ಒಂದಾಗಿ ಈ ಬೇಡಿಕೆಗಳು ಈಡೇರುವವರೆಗೆ ನಿರಂತರವಾಗಿ ಬೀದಿಗಿಳಿದು ಹೋರಾಟ ನಡೆಸಬೇಕು... ಇದು ಈ ದಿನದ ತುರ್ತು ಅಗತ್ಯ...
-ಸುಭಾಷ್ ಹೂಗಾರ ಹಿರಿಯ ಪತ್ರಕರ್ತರು