ಜಗತ್ತಿನ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಅಂತರರಾಷ್ಟ್ರೀಯ ಚಲನಚಿತ್ರ ಹಬ್ಬವಾಗಿದೆ. ಇದನ್ನು 1946 ರಲ್ಲಿ ಫ್ರಾನ್ಸ್ನಲ್ಲಿ ಸ್ಥಾಪಿಸಲಾಯಿತು. ಪ್ರತಿ ವರ್ಷ ಜಗತ್ತಿನಾದ್ಯಂತ ಆಯ್ಕೆಯಾದ ಅತ್ಯುತ್ತಮ ಸಿನಿಮಾಗಳು, ಸಾಕ್ಷ್ಯಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಇಲ್ಲಿ ನೀಡಲಾಗುವ 'ಪಾಮ್ ಡಿ ಓರ್' (Palme d'Or) ಪ್ರಶಸ್ತಿಯನ್ನು 1946 ರಲ್ಲಿ ಫ್ರಾನ್ಸ್ನಲ್ಲಿ ಸ್ಥಾಪಿಸಲಾಯಿತು. ಪ್ರತಿ ವರ್ಷ ಜಗತ್ತಿನಾದ್ಯಂತ ಆಯ್ಕೆಯಾದ ಅತ್ಯುತ್ತಮ ಸಿನಿಮಾಗಳು, ಸಾಕ್ಷ್ಯಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಇಲ್ಲಿ ನೀಡಲಾಗುವ 'ಪಾಮ್ ಡಿ ಓರ್' (Palme d'Or) ಪ್ರಶಸ್ತಿಯನ್ನು ಸಿನಿಮಾ ರಂಗದ ಅತ್ಯುನ್ನತ ಗೌರವ ಎಂದು ಪರಿಗಣಿಸಲಾಗುತ್ತದೆ. ಚಲನಚಿತ್ರಗಳ ಪ್ರದರ್ಶನದ ಜೊತೆಗೆ, ಇಲ್ಲಿನ ರೆಡ್ ಕಾರ್ಪೆಟ್ ಫ್ಯಾಷನ್ ಪ್ರಪಂಚದ ಅತಿ ದೊಡ್ಡ ಆಕರ್ಷಣೆಯಾಗಿದೆ.
2026ರ ರ್ವಷದ ರೆಡ್ ಕಾರ್ಪೆಟ್ ಫ್ಯಾಷನ್ ಥೀಮ್ (Controlled Glamour) ಫ್ಯಾಷನ್ ಜಗತ್ತು 'ನಿಯಂತ್ರಿತ ಗ್ಲಾಮರ್' (Controlled Glamour) ಮತ್ತು 'ಸುಸ್ಥಿರತೆ' (Sustainability) ಯ ಕಡೆಗೆ ಮುಖ ಮಾಡಿದೆ. ಅತಿಯಾದ ತೋರ್ಪಡಿಕೆಯ ಬೋಲ್ಡ್ ಉಡುಪುಗಳ ಬದಲಾಗಿ ಸಾಂಪ್ರದಾಯಿಕ ಕಲೆ, ಪರಿಸರ ಪೂರಕ ಮರುಬಳಕೆಯ ಉಡುಪುಗಳು ಮತ್ತು ಶಿಸ್ತುಬದ್ಧ ವಿನ್ಯಾಸಗಳಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರ ಅನುಗುಣವಾಗಿ ನಮ್ಮ ಬೆಳ್ಳಿತೆರೆಯ ನಟಿ ದಿಶಾ ಮದನ್ ರವರು ಪ್ರಥಮ ಬಾರಿಗೆ ಕಾನ್ಸ್ 2026 ರೆಡ್ ಕಾರ್ಪೆಟ್ನಲ್ಲಿ ಅವರು ಮಿಂಚಿದು ಎಲ್ಲರ ಗಮನ ಸೆಳೆದಿದ್ದಾರೆ.
ಹಾಗಿದರೆ ದಿಶಾ ಅವರ ಮೊದಲನೇ ರೆಡ್ ಕಾರ್ಪೆಟ್ ಉಡುಪು ಹೇಗಿತ್ತು
ಮೊದಲೇ ಹೇಳಿದ ಹಾಗೆ ʼʼಸಾಂಪ್ರದಾಯಿಕ ಕಲೆ, ಪರಿಸರ ಪೂರಕ ಮರುಬಳಕೆಯʼʼ ಆದ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ದೀಶಾ ಮದನ್ ಅವರು ಕಾನ್ಸ್ 2026 ರ ರೆಡ್ ಕಾರ್ಪೆಟ್ ಮೇಲೆ 80 ವರ್ಷ ಹಳೆಯದಾದ ಎರಡು ಸಾಂಪ್ರದಾಯಿಕ ರೇಷ್ಮೆ ಸೀರೆಗಳನ್ನು ಮರುಬಳಕೆ (Upcycle) ಮಾಡಿ ವಿನ್ಯಾಸಗೊಳಿಸಲಾದ ಪಾಶ್ಚಾತ್ಯ ಶೈಲಿಯ ಕೌತುರ್ ಗೌನ್ ಧರಿಸಿದ್ದರು. ಇದರ ವಿನ್ಯಾಸಕರು ಈ ಸುಂದರ ಉಡುಪನ್ನು ಬೆಂಗಳೂರಿನ ಪ್ರಸಿದ್ಧ ಫ್ಯಾಷನ್ ಲೇಬಲ್ ಆದ ನಿಹಾರಿಕಾ ವಿವೇಕ್ ಅವರು ಸಿದ್ಧಪಡಿಸಿದ್ದರು. ತೆಗೆದುಕೊಂಡ ಸಮಯ: ಈ ಉಡುಪಿಗೆ ಬಂಜಾರ ಕಸೂತಿ ಮತ್ತು ಸುಂದರ ಕೈಕೆಲಸ ಮಾಡಲು ಮಹಿಳಾ ಕರಕುಶಲ ಕಲಾವಿದರು ಬರೋಬ್ಬರಿ 2500 ಕ್ಕೂ ಹೆಚ್ಚು ಗಂಟೆಗಳ ಕಾಲ ಶ್ರಮಿಸಿದ್ದಾರೆ. ಆಭರಣಗಳು ಇದಕ್ಕೆ ಪೂರಕವಾಗಿ ಅವರು 'ಗಜರಾಜ್ ಜ್ಯುವೆಲರ್ಸ್' ಸಂಸ್ಥೆಯ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯ ಚಿನ್ನದ ಆಭರಣಗಳು, ಕೆಂಪು ಬಿಂದಿ ಮತ್ತು ಜುಟ್ಟಿನ ಜಡೆ ವಿನ್ಯಾಸದೊಂದಿಗೆ ಮಿಂಚಿದರು.ಈ ಮೂಲಕ ಭಾರತೀಯ ನೇಕಾರಿಕೆ, ಸುಸ್ಥಿರತೆ (Sustainability) ಮತ್ತು ದಕ್ಷಿಣ ಭಾರತದ ಭವ್ಯ ದೇವಾಲಯಗಳ ವಾಸ್ತುಶಿಲ್ಪದ ಶ್ರೀಮಂತಿಕೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದರು.
ನಟಿ ದಿಶಾ ಮದನ್ ಅವರ ವೈಯಕ್ತಿಕ, ವೃತ್ತಿಜೀವನ ಮತ್ತು ನಟನೆ ಬಗ್ಗೆ ಕಿರು ಪರಿಚಯ ಇಲ್ಲಿದೆ..!
ದಿಶಾ ಮದನ್ ಅವರು ಮಾರ್ಚ್ 9, 1992 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ (Mount Carmel College) ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ಇವರ ಪತಿ ಶಶಾಂಕ್ ವಾಸುಕಿ ಗೋಪಾಲ್. ಈ ದಂಪತಿಗೆ ವಿಹಾನ್ (ಮಗ) ಮತ್ತು ಅವ್ನಿ (ಮಗಳು) ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ನೃತ್ಯದ ಹಿನ್ನೆಲೆ: ದಿಶಾ ಅವರು ವೃತ್ತಿಪರ ಭರತನಾಟ್ಯ ನೃತ್ಯಗಾರ್ತಿ. ಇವರು ತಮ್ಮ ತಂದೆ ಮದನ್ ಹರಿಣಿ ಅವರ ಮಾರ್ಗದರ್ಶನದಲ್ಲಿ ಚಿಕ್ಕ ವಯಸ್ಸಿನಲ್ಲೇ ನೃತ್ಯ ಕಲಿಯಲು ಆರಂಭಿಸಿದರು. ಬೆಂಗಳೂರಿನಲ್ಲಿ 'ಡ್ಯಾನ್ಸ್ 360' (Dance 360) ಎಂಬ ಸ್ವಂತ ನೃತ್ಯ ಶಾಲೆಯನ್ನು ಸಹ ನಡೆಸುತ್ತಿದ್ದಾರೆ. ಕಿರುತೆರೆಯಲ್ಲಿ (Television): ದಿಶಾ ಅವರು ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿಯ ಪ್ರಸಿದ್ಧ ಧಾರಾವಾಹಿ 'ಕುಲವಧು' ನಲ್ಲಿ 'ವಚನಾ' ಎಂಬ ನೆಗೆಟಿವ್ ಪಾತ್ರದ ಮೂಲಕ ನಟನೆಯನ್ನು ಆರಂಭಿಸಿ, ಮನೆಮಾತಾದರು. ಸಿನಿಮಾ ಮತ್ತು ವೆಬ್ ಸೀರೀಸ್:ದಿಕ್ಸೂಚಿ (Diks सूचि) ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದರು.ಡ್ಯಾನಿಶ್ ಸೇಠ್ ನಟನೆಯ ಹಿಟ್ ಸಿನಿಮಾ 'ಫ್ರೆಂಚ್ ಬಿರಿಯಾನಿ' (French Biriyani) ನಲ್ಲಿ ಮಲ್ಲಿಕಾ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಪ್ರಸಿದ್ಧ ವೆಬ್ ಸರಣಿ 'ಹಂಬಲ್ ಪೊಲಿಟಿಷಿಯನ್ ನಾಗ್ ರಾಜ್' ನಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್: ಭಾರತದಲ್ಲಿ ಟಿಕ್ಟಾಕ್ (TikTok) ಆ್ಯಪ್ ಇದ್ದಾಗ, ಕರ್ನಾಟಕದಿಂದ 1 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ ಮೊದಲ ಕ್ರಿಯೇಟರ್ ಇವರಾಗಿದ್ದರು.ಪ್ರಸ್ತುತ ಇನ್ಸ್ಟಾಗ್ರಾಮ್ನಲ್ಲಿ (Instagram) ಇವರಿಗೆ ಲಕ್ಷಾಂತರ ಫಾಲೋವರ್ಸ್ ಇದ್ದು, ತಮ್ಮ ನೃತ್ಯ, ಕಾಮಿಡಿ ರೀಲ್ಸ್ ಮತ್ತು ಕೌಟುಂಬಿಕ ವ್ಲಾಗ್ಗಳ ಮೂಲಕ ಸದಾ ಸಕ್ರಿಯರಾಗಿದ್ದಾರೆ.
ರೆಡ್ ಕಾರ್ಪೆಟ್ ಈವೆಂಟ್ಗೂ ಮುನ್ನ ದಿಶಾ ಮದನ್ ಅವರು ಅತ್ಯಂತ ಆಕರ್ಷಕವಾದ, ಮಾಡರ್ನ್ ವೆಸ್ಟರ್ನ್ ಶೈಲಿಯ ಕಪ್ಪು ಉಡುಪನ್ನು ಧರಿಸಿದ್ದರು. ಇದು ಗ್ಲಾಮರಸ್ ಆದ ಆಫ್-ಶೋಲ್ಡರ್ (Off-shoulder) ಮತ್ತು ಕತ್ತಿನ ಭಾಗದಲ್ಲಿ ರಫಲ್ಡ್ (Ruffled) ವಿನ್ಯಾಸವನ್ನು ಹೊಂದಿದ್ದ ಕೌತುರ್ ಗೌನ್ ಆಗಿತ್ತು. ಈ ಡ್ರೆಸ್ ಕೋಚ್ವೆಲ್ಲಾ (Coachella) ವೈಬ್ಸ್ ನೀಡುವಂತಹ ಬೋಲ್ಡ್ ಹಾಗೂ ಪಾರ್ಟಿ-ವೇರ್ ಶೈಲಿಯಲ್ಲಿ ಮೂಡಿಬಂದಿತ್ತು. ವಿನ್ಯಾಸಕರು ಈ ಬ್ಲ್ಯಾಕ್ ಬ್ಯೂಟಿ ಗೌನ್ ಅನ್ನು ಲಖಿನಾ ಕೌತುರ್ (Lakhina Couture) ಸಂಸ್ಥೆಯು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿತ್ತು.ಬಟ್ಟೆಯ ಮಟೀರಿಯಲ್ (Fabric) ಇದನ್ನು ಪ್ರೀಮಿಯಂ ಕ್ವಾಲಿಟಿಯ ಬನಾನಾ ಲೈಕ್ರಾ (Banana Lycra) ಬಟ್ಟೆಯನ್ನು ಬಳಸಿ ಹೊಲಿಯಲಾಗಿತ್ತು. ಇದು ದೇಹಕ್ಕೆ ಕಂಪ್ಲೀಟ್ ಫಿಟ್ಟಿಂಗ್ ನೀಡುವ ಎ-ಲೈನ್ (A-Line) ವಿನ್ಯಾಸ ಹಾಗೂ ಬದಿಯಲ್ಲಿ 20 ಇಂಚಿನ ಉದ್ದದ 'ಸ್ಲಿಟ್' (Slit) ಕಟ್ಅಪ್ ಹೊಂದಿತ್ತು.
ಆಭರಣಗಳು ಈ ಕಪ್ಪು ಉಡುಪಿಗೆ ವೆಸ್ಟರ್ನ್ ಮತ್ತು ಬೋಲ್ಡ್ ಲುಕ್ ನೀಡಲು ದಿಶಾ ಅವರು ಮಿನಿಮಲ್ ಹಾಗೂ ಮಾಡರ್ನ್ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕುತ್ತಿಗೆಗೆ ಯಾವುದೇ ದೊಡ್ಡ ನೆಕ್ಲೇಸ್ ಧರಿಸದೆ, ಕೇವಲ ಕಿವಿಗೆ ಒಪ್ಪುವಂತಹ ಆಕರ್ಷಕ ಸ್ಟೇಟ್ಮೆಂಟ್ ಇಯರ್ರಿಂಗ್ಸ್ (Statement Earrings) ಮತ್ತು ಕೈಗಳಿಗೆ ಸ್ಟೈಲಿಶ್ ಉಂಗುರಗಳನ್ನು ಮಾತ್ರ ಧರಿಸಿದ್ದರು.ಹೇರ್ಸ್ಟೈಲ್ ಮತ್ತು ಮೇಕಪ್: ಕೂದಲನ್ನು ಫ್ರೀ-ಹೇರ್ ಬಿಟ್ಟು ಸಾಫ್ಟ್ ಕರ್ಲ್ಸ್ ಮಾಡಲಾಗಿತ್ತು. ಮೇಕಪ್ ಅನ್ನು ಕಣ್ಣುಗಳಿಗೆ ಹೆಚ್ಚಿನ ಹೈಲೈಟ್ ಕೊಟ್ಟು (Smokey Eyes) ರೆಡ್ ಕಾರ್ಪೆಟ್ ಗ್ಲಾಮ್ ಲುಕ್ ನೀಡಲಾಗಿತ್ತು.
ಗ್ಲಾಮರಸ್ ಫೋಟೋಶೂಟ್ ಮತ್ತು ರೀಲ್ಸ್ ಅನ್ನು ಫ್ರಾನ್ಸ್ನ ಕಾನ್ಸ್ ನಗರದ ಸುಂದರವಾದ ಕೆಫೆಗಳು (Cafes in Cannes) ಮತ್ತು ಅಲ್ಲಿನ ಐತಿಹಾಸಿಕ ರಸ್ತೆಗಳಲ್ಲಿ ಮಾಡಲಾಗಿತ್ತು. ರೆಡ್ ಕಾರ್ಪೆಟ್ಗೆ ಹೋಗುವ ಮುನ್ನ ಸಿಕ್ಕ ಕೆಲವು ಗಂಟೆಗಳ ಬಿಡುವಿನ ಸಮಯದಲ್ಲಿ ದಿಶಾ ಮತ್ತು ಅವರ ತಂಡವು ಕಾನ್ಸ್ ನಗರದ ಬೀದಿಗಳಲ್ಲಿ 'ಕೆಫೆ ಹಾಪಿಂಗ್' (Cafes Hopping) ಮಾಡುತ್ತಾ ಈ ಫೋಟೋಶೂಟ್ ನಡೆಸಿದ್ದರು. ಈ ಫೋಟೋಶೂಟ್ನಲ್ಲಿ ಅವರು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್೨೬ ಆಲ್ಟ್ರಾ (Samsung Galaxy S26 Ultra) ಫೋನಿನ ಫೀಚರ್ಗಳನ್ನು ಸಹ ಪ್ರಮೋಟ್ ಮಾಡಿದ್ದರು
ದಿಶಾ ಮದನ್ ಅವರು ತಮ್ಮ ಎರಡನೇ ಉಡುಪಿನ ಬಗ್ಗೆ ಮಾತನಾಡುತ್ತಾ, "ನನಗೆ ಕಾನ್ಸ್ ವೇದಿಕೆ ಎಂದರೆ ಕೇವಲ ಫ್ಯಾಷನ್ ಅಲ್ಲ, ಅದು ನಮ್ಮ ಸಂಸ್ಕೃತಿಯ ಪ್ರಾತಿನಿಧ್ಯ. ದಕ್ಷಿಣ ಭಾರತದ ಕಲೆ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದ್ದು ನನಗೆ ಹೆಮ್ಮೆ ತಂದಿದೆ" ಎಂದು ಹಂಚಿಕೊಂಡಿದ್ದಾರೆ. ಎಲ್ಲರಿಂದ ಮತ್ತು ಎಲ್ಲಡೆ ಮೆಚ್ಚುಗೆ ವ್ಯಕ್ತಪಡಿಸಿದು ಕರ್ನಾಟಕ ಹಾಗೂ ಭಾರತದ ಜನತೆಗೆ ಹೆಮ್ಮೆಯ ಸಂಗತಿ...!