Search


ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮುಕ್ತಾಯ; ಡಿಕೆ ಮುಂದಿನ ಸಿಎಂ ಎಂದ ಸಿದ್ದು.. ಸಂತೋಷ್‌ ಲಾಡ್‌ ಕಣ್ಣೀರು..!

ಬೆಂಗಳೂರು : ಸಿಎಂ ಸಿದ್ದರಾಮಯ್ಯರ ನಿವಾಸದಲ್ಲಿ ಆಯೋಜಿಸಿದ್ದ ಔತಣ ಕೂಟ ಮುಕ್ತಾಯಗೊಂಡಿದ್ದು. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗೆ ಪುಲ್‌ ಸ್ಟಾಪ್‌ ಹಾಕಿದ್ದಾರೆ. ಸಭೆಯಲ್ಲಿ ಹಾಜರಾಗಿದ್ದ ಎಲ್ಲಾ ಸಚಿವರು, ಶಾಸಕರ ಮುಂದೆ ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಎಂದು ಸಿದ್ದರಾಮಯ್ಯನವರು ಘೋಷಿಸಿದ್ದಾರೆ.

ಸಿಎಂ ಸಿದ್ದು ನಿವಾಸದಲ್ಲಿ ಆಯೋಜನೆಯಾಗಿದ್ದ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಶಾಸಕರು ಮತ್ತು ಸಚಿವರ ಮುಂದೆ ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದು. ಡಿಕೆ ಶಿವಕುಮಾರ್‌ ಅವರನ್ನ ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ. 2028ರವರೆಗೆ ಡಿಕೆ ಸಿಎಂ ಆಗಿ ಮುಂದುವರಿಯುತ್ತಾರೆ. ಉಳಿದ ಎರಡು ವರ್ಷಗಳ ಕಾಲ ಎಲ್ಲರೂ ಸೇರಿ ಒಳ್ಳೆಯ ಕೆಲಸಗಳನ್ನ ಮಾಡಿ ಎಂದು ಕಿವಿ ಮಾತು ಹೇಳಿದ್ದಾರೆ. ಈ ವೇಳೆ ಭಾವುಕರಾದ ಸಿಎಂ, ತಮ್ಮ ಆಪ್ತರ ಮುಂದೆ ಕಣ್ಣಿರಾಕಿದ್ದಾರೆ. 

ಸಚಿವ ಸಂತೋಷ್‌ ಲಾಡ್‌ ಕಣ್ಣೀರು...!

ಇನ್ನು ಸಭೆ ಮುಗಿಸಿಕೊಂಡು ಸಿದ್ದು ನಿವಾಸದಿಂದ ಹೊರ ಬಂದ ನಾಯಕರು ಸಿದ್ದರಾಮಯ್ಯನವರು ಸಂಜೆ ವೇಳೆಗೆ ರಾಜೀನಾಮೆ ನೀಡುತ್ತಾರೆ ಎಂದು ಖಚಿತಪಡಿಸಿದ್ದು. ಸಿಎಂ ಸಿದ್ದರಾಮಯ್ಯರ ಆಪ್ತ ಸಚಿವ ಸಂತೋಷ್‌ ಲಾಡ್‌ ಮಾಧ್ಯಮಗಳ ಮುಂದೆ ಕಣ್ಣೀರಾಕಿದರು. ಇನ್ನು ಸಚಿವ ರಾಮಲಿಂಗ ರೆಡ್ಡಿಯವರು ಕೂಡ ಸಿಎಂ ಸಂಜೆ 3:30ಕ್ಕೆ ಲೋಕಭವನಕ್ಕೆ ತೆರಳಿ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸುತ್ತಾರೆ ಎಂದು ಹೇಳಿದರು.

By News Desk - 28-05-2026


Ads in Post