Search


ಬಿಗ್ ಬಾಸ್ ಕಾಟ ತಡೆದುಕೊಳ್ಳುತ್ತಿರುವ ಕನ್ನಡಿಗರಿಗೆ ಕಿಚ್ಚನ ವಾರದ ಚಪ್ಪಾಳೆ

ಕಳೆದ ಎರಡು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಆಟ, ವರ್ತನೆ ಹಾಗೂ ನಡವಳಿಕೆಗಳ ಬಗ್ಗೆ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಾರದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಆಟದ ವೈಖರಿಯನ್ನು ಪ್ರಶ್ನಿಸಿದ ಸುದೀಪ್, ಕೆಲವೊಂದು ವಿಚಾರಗಳಲ್ಲಿ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದೇ ವೇಳೆ, ಬಿಗ್ ಬಾಸ್ ಕಾರ್ಯಕ್ರಮವನ್ನು ಕಳೆದ ಹಲವು ವರ್ಷಗಳಿಂದ ಬೆಂಬಲಿಸುತ್ತಿರುವ ಕರ್ನಾಟಕದ ವೀಕ್ಷಕರಿಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ.

ವಿಶೇಷವಾಗಿ ‘ಅಗ್ನಿ ಗ್ಯಾಂಗ್’ನ ಆಟದ ವೈಖರಿ ಸುದೀಪ್ ಅವರ ಅಸಮಾಧಾನಕ್ಕೆ ಕಾರಣವಾಯಿತು. ಅಗ್ನಿ ಪರೀಕ್ಷೆಯಂತಹ ಆಯ್ಕೆ ಪ್ರಕ್ರಿಯೆ ಮೂಲಕ ಮನೆಗೆ ಪ್ರವೇಶ ಪಡೆದಿರುವ ಸ್ಪರ್ಧಿಗಳ ನಡವಳಿಕೆಯ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದರು. ಇಂತಹ ಆಯ್ಕೆ ಪ್ರಕ್ರಿಯೆಯನ್ನೇ ಮುಂದಿನ ದಿನಗಳಲ್ಲಿ ತೆಗೆದುಹಾಕುವಂತೆ ಬಿಗ್ ಬಾಸ್‌ಗೆ ಸಲಹೆ ನೀಡಿದ ಸುದೀಪ್, ಮನೆಗೆ ಬಂದಿರುವ ಸ್ಪರ್ಧಿಗಳು ಸರಿಯಾಗಿ ಆಟವಾಡಬೇಕು ಎಂದು ಕಿವಿಮಾತು ಹೇಳಿದರು.

ಇನ್ನು ಟಾಸ್ಕ್ ವೇಳೆ ಮಂಜನಿಗೆ ಹೊಡೆದ ಆರೋಪಕ್ಕೆ ಸಂಬಂಧಿಸಿದಂತೆ ಸೌಂದರ್ಯ ಶೆಟ್ಟಿ ಅವರನ್ನೂ ಸುದೀಪ್ ತರಾಟೆಗೆ ತೆಗೆದುಕೊಂಡರು. ಸ್ಪರ್ಧಿಗಳ ವರ್ತನೆ ಹಾಗೂ ಟಾಸ್ಕ್ ವೇಳೆ ನಡೆದುಕೊಂಡ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸೌಂದರ್ಯ ಅವರ ತಪ್ಪಿಗೆ ಜೈಲು ಶಿಕ್ಷೆ ವಿಧಿಸಿದರು.

ಇದೇ ಸಂದರ್ಭದಲ್ಲಿ ‘ಕಿಚ್ಚನ ಚಪ್ಪಾಳೆ’ ವಿಚಾರವನ್ನೂ ಸುದೀಪ್ ಪ್ರಸ್ತಾಪಿಸಿದರು. ಕಳೆದ ಎರಡು ವಾರಗಳ ಆಟವನ್ನು ಗಮನಿಸಿದರೆ ತಮ್ಮ ದೃಷ್ಟಿಯಲ್ಲಿ ಯಾವುದೇ ಸ್ಪರ್ಧಿಯೂ ಚಪ್ಪಾಳೆಗೆ ಅರ್ಹರಾಗಿಲ್ಲ ಎಂದು ಸ್ಪರ್ಧಿಗಳಿಗೆ ತಿಳಿಸಿದರು. ಆದರೆ, ಬಿಗ್ ಬಾಸ್‌ನ ಏರಿಳಿತಗಳ ನಡುವೆಯೂ ಕಾರ್ಯಕ್ರಮದ ಮೇಲೆ ನಂಬಿಕೆ ಇಟ್ಟು ವೀಕ್ಷಿಸುತ್ತಿರುವ ಕರುನಾಡಿನ ಜನತೆಗೆ ಅವರು ವಿಶೇಷವಾಗಿ ಚಪ್ಪಾಳೆ ನೀಡಿದರು.

“ಈ ಚಪ್ಪಾಳೆ ಕೊಡೋದಕ್ಕೆ ನಾನಿನ್ನೂ ಚಿಕ್ಕವನು. ಕಳೆದ ಎರಡು ವಾರಗಳಲ್ಲಿ ನಡೆದಿರುವ ಘಟನೆಗಳನ್ನೂ, ಹಿಂದಿನ ಎಪಿಸೋಡ್‌ಗಳನ್ನೂ ನೋಡಿ, ನಮ್ಮ ಮೇಲೆ ಇನ್ನೂ ಭರವಸೆ ಇಟ್ಟು ಬಿಗ್ ಬಾಸ್ ನೋಡುತ್ತಿರುವ ಕರುನಾಡಿನ ವೀಕ್ಷಕರಿಗೆ ನನ್ನ ಚಪ್ಪಾಳೆ” ಎಂದು ಸುದೀಪ್ ಹೇಳಿದರು. “ಕರುನಾಡಿನ ಜನರೇ, ಬಿಗ್ ಬಾಸ್ ವೀಕ್ಷಕರೇ, ಕಳೆದ ಎರಡು ವಾರಗಳಿಂದ ನೀವು ನಮ್ಮನ್ನು ಕ್ಷಮಿಸಿದ್ದೀರಿ. ಕಳೆದ ಸೀಸನ್‌ಗಳಿಂದಲೂ ನಮ್ಮೊಂದಿಗೆ ಇರುವ ವೀಕ್ಷಕರಿಗೆ ನಾನು ಭರವಸೆ ನೀಡುತ್ತೇನೆ. ಕೆಲವು ಘಟನೆಗಳು ಮತ್ತೆ ನಡೆಯಲು ನಾವು ಅವಕಾಶ ನೀಡುವುದಿಲ್ಲ” ಎಂದು ಸುದೀಪ್ ತಿಳಿಸಿpoದ್ದಾರೆ.

By Ravikumar - 20-09-2026


Ads in Post