ಬಿಗ್ಬಾಸ್ ಮೂಲಕ ಕನ್ನಡಿಗರ ಮನ-ಮನೆಯನ್ನು ತಲುಪಿದ್ದ ಮಲ್ಲಮ್ಮ ನೂತನ ಕಾರು ಖರೀದಿ ಮಾಡಿದ್ದಾರೆ. ಈ ಕುರಿತಾದ ವಿಡಿಯೋವೊಂದನ್ನ ಮಲ್ಲಮ್ಮ ತಮ್ಮ ಇನ್ಸ್ಟಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದ್ದು, ತಮ್ಮ ಸಂತೋಷವನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ಆಗಿರುವ ಮಲ್ಲಮ್ಮ, ಬಿಗ್ಬಾಸ್ ಸೀಸನ್ 12ರಲ್ಲಿ ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ತಮ್ಮ ಮುಗ್ದತೆಯ ಮೂಲಕ ಜನರ ಮನ ಗೆದ್ದಿದ್ದ ಮಲ್ಲಮ್ಮ, ಬಿಗ್ಬಾಸ್ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು. ಇದೀಗ ಮಲಮ್ಮ ಹೊಸ ಕಾರೊಂದನ್ನ ಖರೀದಿಸಿದ್ದು, ಈ ಸಂತಸದ ಕ್ಷಣವನ್ನು ಮಲ್ಲಮ್ಮ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅವರು ಖರೀದಿ ಮಾಡಿರುವ ಮಾರುತಿ ಸುಜುಕಿ ಡಿಸೈರ್ ಟೂರ್ ಕಾರಿನ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಲ್ಲಮ್ಮ ಅವರು ತಮ್ಮ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸೇರಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಕಾರನ್ನು ಖರೀದಿ ಮಾಡಿದ್ದಾರೆ. ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದು, ಇಂದು ಸ್ವಂತ ಪರಿಶ್ರಮದಿಂದ ಹೊಸ ಕಾರು ಖರೀದಿಸಿರುವ ಅವರ ಈ ಸಾಧನೆಗೆ ಅಭಿಮಾನಿಗಳಿಂದ ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ವ್ಯಾಪಕ ಪ್ರಶಂಸೆ ಮತ್ತು ಹಾರೈಕೆಗಳು ಹರಿದುಬರುತ್ತಿವೆ.
ಮಲ್ಲಮ್ಮ ಅವರ ಲೈಫ್ ಜರ್ನಿ ನಿಜಕ್ಕೂ ಅನೇಕರಿಗೆ ಪ್ರೇರಣೆಯಾಗಿದೆ. ಆರಂಭದಲ್ಲಿ ಇನ್ಸ್ಟಾಗ್ರಾಮ್, ಯೂಟ್ಯೂಬ್ನಂತಹ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ವಿಶಿಷ್ಟ ಕಂಟೆಂಟ್, ಹಳ್ಳಿ ಸೊಗಡಿನ ಮಾತುಗಳು ಹಾಗೂ ರೀಲ್ಸ್ಗಳ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದರು. ಇವರ ಜನಪ್ರಿಯತೆಯನ್ನು ಗುರುತಿಸಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬರುವ ದೊಡ್ಡ ಅವಕಾಶ ಸಿಕ್ಕಿತು. ಬಿಗ್ ಬಾಸ್ ಮನೆಯಲ್ಲಿ ತಮ್ಮ ನೈಜ ವ್ಯಕ್ತಿತ್ವ, ಮುಗ್ಧತೆ ಹಾಗೂ ಚುರುಕಾದ ಆಟದ ಮೂಲಕ ಕನ್ನಡಿಗರ ಮನ ಗೆದ್ದು ದೊಡ್ಡ ಮಟ್ಟದ ಹೆಸರು ಮಾಡಿದರು.