Search


ಮೋದಿ ಒಬ್ಬ ಮಹಾನ್‌ ವ್ಯಕ್ತಿ; ಪ್ರಧಾನಿ ಮೋದಿಯನ್ನ ಹಾಡಿ ಹೊಗಳಿದ ಟ್ರಂಪ್‌

ನವದೆಹಲಿ: ಭಾರತದ ಪ್ರಧಾನಿಯಾಗಿ ದೀರ್ಘ ಅವಧಿ ಸೇವೆ ಸಲ್ಲಿಸಿರುವ ನರೇಂದ್ರ ಮೋದಿ (Narendra Modi) ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾ ಟ್ರೂತ್‌ನಲ್ಲಿ ಟ್ರಂಪ್‌ ಪೋಸ್ಟ್‌ ಹಂಚಿಕೊಂಡಿದ್ದು. ಪ್ರಧಾನಿ ಮೋದಿ ನನ್ನ ಆತ್ಮೀಯ ಸ್ನೇಹಿತ. ಮಹಾನ್‌ ನಾಯಕ ಎಂದು ಬಣ್ಣಿಸಿದ್ದಾರೆ.

ನೆಹರು ದಾಖಲೆಯನ್ನ ಅಳಿಸಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಚುನಾಯಿತ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿರುವ ಪ್ರಧಾನಿ ಮೋದಿಗೆ ಟ್ರಂಪ್‌ ಶುಭ ಕೋರಿದ್ದಾರೆ "ಭಾರತದ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಅವರು ಒಬ್ಬ ಮಹಾನ್ ವ್ಯಕ್ತಿ ಎಂದು ಟ್ರಂಪ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಬಲಶಾಲಿ, ಆರೋಗ್ಯವಂತ ಮತ್ತು ಬುದ್ಧಿವಂತ ವ್ಯಕ್ತಿ. ಅವರಿಗೆ ಮುಂದಿನ ವರ್ಷಗಳಲ್ಲೂ ಶ್ರೇಷ್ಠತೆ ಮತ್ತು ಯಶಸ್ಸು ಸಿಗಲಿ ಎಂದು ಟ್ರಂಪ್‌ ಹಾರೈಸಿದ್ದಾರೆ.

ಟ್ರಂಪ್ ಅವರ ಶುಭಾಶಯಗಳಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಮುನ್ನಡೆಸಲು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ. ಟ್ರಂಪ್ ಜೊತೆಗೆ ಹಲವಾರು ವಿಶ್ವ ನಾಯಕರು ಪ್ರಧಾನಿ ಮೋದಿಗೆ ಶುಭಾಶಯ ತಿಳಿಸಿದ್ದಾರೆ.

By Ravikumar - 11-06-2026


Ads in Post