ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿರುವ ನಟಿ ಪವಿತ್ರಾ ಗೌಡಳ ಮಾಜಿ ಪತಿ ಸಂಜಯ್ ಸಿಂಗ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ, ಕೌಟುಂಬಿಕ ಕಾರಣಗಳಿಂದ ದೂರವಾಗಿದ್ದ ಪವಿತ್ರಾ ಮತ್ತು ಸಂಜಯ್ ಸಿಂಗ್, ಕೆಲ ವರ್ಷಗಳ ಹಿಂದೆ ವಿಚ್ಚೇದನ ಪಡೆದಿದ್ದರು. ಅಂದಿನಿಂದ ಪತ್ನಿಯ ನೆನಪಿನಲ್ಲೇ ಕುಡಿತದ ಚಟಕ್ಕೆ ದಾಸನಾಗಿದ್ದ ಸಂಜಯ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 7-8 ತಿಂಗಳ ಹಿಂದೆಯೇ ಸಂಜಯ್ ಸಿಂಗ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರೆ.
ವಿಚ್ಛೇದನದ ನಂತರ ಅವರು ಕುಡಿತಕ್ಕೆ ದಾಸನಾಗಿದ್ದರು. ಈ ಕುಡಿತವೇ ಅವರನ್ನು ಬಲಿ ತಗೆದುಕೊಂಡಿದೆ. ಪವಿತ್ರಾ ಗೌಡ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ ನಂತರ ರಾಜ್ಯಕ್ಕೆ ಆಗಮಿಸಿದ್ದ ಸಂಜಯ್ ಸಿಂಗ್ ಅವರು ಅನೇಕ ಮಾಧ್ಯಮಗಳ ಜೊತೆ ಮಾತನಾಡಿದ್ದರು, ಈ ವೇಳೆ ಪವಿತ್ರಾ ಮೇಲೆ ಅವರಿಗಿದ್ದ ಪ್ರೀತಿಯನ್ನ ವಿವರಿಸಿದ್ದರು. ಕಾಲೇಜಿಗೆ ಹೋಗುತ್ತಿದ್ದ ಪವಿತ್ರಾ ಜೊತೆಗಿನ ಪ್ರೀತಿ, ತದನಂತರ ಮನೆಯವರ ವಿರೋಧದ ನಡುವೆ ಮದುವೆ ಈ ರೀತಿ ಅನೇಕ ಕ್ಷಣಗಳನ್ನ ಹಂಚಿಕೊಂಡಿದ್ದರು.
2011 ರಲ್ಲೇ ಸಂಜಯ್ ಜೊತೆ ಅವರ ವಿಚ್ಛೇದನ ಪಡೆದಿದ್ದ ಪವಿತ್ರಾ ತದನಂತರ ದರ್ಶನ್ ಜೊತೆ ಸ್ನೇಹ ಬೆಳೆಸಿದ್ದರು, ಸಂಜಯ್ ಮತ್ತು ಪವಿತ್ರಾ ಪ್ರೀತಿಯ ಸಂಕೇತವಾಗಿ ಹೆಣ್ಣು ಮಗಳು ಜನಿಸಿದ್ದು. ಪವಿತ್ರಾ ಮಗಳನ್ನ ತಮ್ಮ ಬಳಿಯೆ ಇರಿಸಿಕೊಂಡಿದ್ದರು ಎಂಬ ಮಾಹಿತಿಯನ್ನ ಹಂಚಿಕೊಂಡಿದ್ದರು, ಆದರೆ ವಿಧಿಯಾಟವೆಂಬಂತೆ ಇದೀಗ ಪವಿತ್ರಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಅತ್ತ ಪತಿ ಪರಲೋಕ ಸೇರಿದ್ದಾರೆ.