ವಾಷಿಂಗ್ಟನ್: ಪೆಂಟಗನ್ನಲ್ಲಿ ಬಹಳ ಸಮಯದಿಂದ ನಡೆಯುತ್ತಿದ್ದ ಆಂತರಿಕ ಕಲಹದ ಬಳಿಕ ನೌಕಾಪಡೆಯ ಕಾರ್ಯದರ್ಶಿ ಜಾನ್ ಫೆಲನ್ ಅವರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ. ಪೆಂಟಗನ್ ನಾಯಕರೊಂದಿಗೆ ತಿಂಗಳುಗಳಿಂದ ನಡೆಯುತ್ತಿರುವ ಒಳಜಗಳ ಮತ್ತು ನೌಕಾಪಡೆಯ ಹಡಗು ನಿರ್ಮಾಣ ಕಾರ್ಯಕ್ರಮವನ್ನು ಹೇಗೆ ಪುನರುಚ್ಚೇತನಗೊಳಿಸಬೇಕು ಎಂಬುದರ ಕುರಿತಾದ ಭಿನ್ನಾಭಿಪ್ರಾಯಗಳ ನಂತರ ಬುಧವಾರ ಈ ಬೆಳವಣಿಗೆಯಾಗಿದೆ.
ಫೆಲನ್ ಅವರು ಪೆಂಟಗನ್ ಮತ್ತು ಟ್ರಂಪ್ ಆಡಳಿತವನ್ನು ತಕ್ಷಣವೇ ಜಾರಿಗೆ ಬರುವಂತೆ ತೊರೆಯುತ್ತಿದ್ದಾರೆ ಎಂದು ಪೆಂಟಗನ್ನ ಮುಖ್ಯ ವಕ್ತಾರ ಸೀನ್ ಪಾರ್ನೆಲ್ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೌಕಾಪಡೆಯನ್ನು ಮುನ್ನಡೆಸುತ್ತಿದ್ದ ಫೆಲನ್ ಟ್ರಂಪ್-ಅವರ ಉದ್ದೇಶಿತ ಅತ್ಯಾಧುನಿಕ ಯುದ್ಧನೌಕೆ ಸೇರಿದಂತೆ ಹೊಸ ಹಡಗುಗಳಲ್ಲಿ ಪ್ರಮುಖ ಹೂಡಿಕೆಯಾದ ಗೋಲ್ಡನ್ ಸ್ಟ್ರೀಟ್ ಅನ್ನು ಬೆಂಬಲಿಸಿದ್ದರು. ಆದರೆ, ಫೆಲನ್ ಅವರು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ರೆತ್ ಮತ್ತು ಉಪ ರಕ್ಷಣಾ ಕಾರ್ಯದರ್ಶಿ ಸ್ಟೀಫನ್ ಫೀನ್ಬರ್ಗ್ ಸೇರಿದಂತೆ ಪೆಂಟಗನ್ನ ಹಿರಿಯ ನಾಯಕರೊಂದಿಗೆ ಹೊಂದಿದ್ದ ಭಿನ್ನಾಭಿಪ್ರಾಯವು ಅವರಿಗಿದೆ ಮುಳುವಾಯಿತು ಎಂದು ವರದಿ ತಿಳಿಸಿದೆ.