ಬೆಂಗಳೂರು: ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ನಗರದಾದ್ಯಂತ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದರ ಬೆನ್ನಲ್ಲೇ ಹಬ್ಬದ ಪೂಜೆಗೆ ಅಗತ್ಯವಿರುವ ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದು, ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂವು ಮತ್ತು ಹಣ್ಣುಗಳ ಖರೀದಿ ಜೋರಾಗಿದೆ. ಬೆಲೆ ಏರಿಕೆಯಾಗಿದ್ದರೂ ಹಬ್ಬದ ಆಚರಣೆಗೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೂವಿನ ತೋರಣ ಹಾಗೂ ಪೂಜಾ ಸಾಮಗ್ರಿಗಳ ಬೆಲೆಯಲ್ಲೂ ಏರಿಕೆಯಾಗಿದೆ.
ಹೂವುಗಳ ಇಂದಿನ ದರ
- ಸೇವಂತಿಗೆ: ಕೆ.ಜಿಗೆ ₹350
- ತಾವರೆ ಹೂವು: ಜೋಡಿಗೆ ₹75
- ಗುಲಾಬಿ (ಬಟನ್): ಕೆ.ಜಿಗೆ ₹350
- ಕನಕಾಂಬರ: ಕೆ.ಜಿಗೆ ₹2,000
- ಮಲ್ಲಿಗೆ: ಕೆ.ಜಿಗೆ ₹1,000
- ತುಳಸಿ ತೋರಣ: ₹60
- ಮಾವಿನ ಎಲೆ: ಕಟ್ಟಿಗೆ ₹10ರಿಂದ ₹30
ಹಣ್ಣುಗಳ ದರ
- ಸೇಬು: ಕೆ.ಜಿಗೆ ₹200ರಿಂದ ₹300
- ದಾಳಿಂಬೆ: ಕೆ.ಜಿಗೆ ₹100ರಿಂದ ₹250
- ಸಪೋಟ: ಕೆ.ಜಿಗೆ ₹150ರಿಂದ ₹200
- ದ್ರಾಕ್ಷಿ: ಕೆ.ಜಿಗೆ ₹120ರಿಂದ ₹150
- ಮೂಸಂಬಿ ಹಾಗೂ ಕಿತ್ತಳೆ: ಕೆ.ಜಿಗೆ ₹80ರಿಂದ ₹100
ತರಕಾರಿಗಳ ಇಂದಿನ ದರ
- ಈರುಳ್ಳಿ: ಕೆ.ಜಿಗೆ ₹60ರಿಂದ ₹70
- ಹಸಿಮೆಣಸಿನಕಾಯಿ: ಕೆ.ಜಿಗೆ ₹40ರಿಂದ ₹60
- ಬೀಟ್ರೂಟ್: ಕೆ.ಜಿಗೆ ₹50ರಿಂದ ₹60
- ಬೆಳ್ಳುಳ್ಳಿ: ಕೆ.ಜಿಗೆ ₹200ರಿಂದ ₹250
- ನಿಂಬೆಹಣ್ಣು: ಒಂದಕ್ಕೆ ₹8ರಿಂದ ₹15
- ನುಗ್ಗೆಕಾಯಿ: ಒಂದಕ್ಕೆ ₹10ರಿಂದ ₹15
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಹೆಚ್ಚಾಗಿರುವುದರಿಂದ ಹೂವು, ಹಣ್ಣು ಮತ್ತು ತರಕಾರಿಗಳ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಗ್ರಾಹಕರು ಖರೀದಿಗೂ ಮುನ್ನ ವಿವಿಧ ಮಾರುಕಟ್ಟೆಗಳಲ್ಲಿ ದರ ಪರಿಶೀಲಿಸುವುದು ಉತ್ತಮ.