Search


ಬೆಲೆ ಏರಿಕೆ ಅಬ್ಬರದ ನಡುವೆ ಖಾಸಗಿ ಬಸ್‌ ಟಿಕೆಟ್‌ ದರ ಹೆಚ್ಚಳ..!

ಬೆಂಗಳೂರು : ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಪ್ರಯಾಣಿಕರಿಗೆ ಮತ್ತೊಂದು ಶಾಕ್‌ ಎದುರಾಗಿದ್ದು. ಖಾಸಗಿ ಬಸ್‌ ಟಿಕೆಟ್‌ ದರ ಇಂದು ಮಧ್ಯರಾತ್ರಿಯಿಂದ ಶೇ.20-30ರಷ್ಟು ಹೆಚ್ಚಾಗಲಿದೆ. ಡೀಸೆಲ್‌ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನರಿಗೆ ಮತ್ತೊಂದು ಆರ್ಥಿಕ ಹೊಡೆತ ಬಿದ್ದಿದ್ದು, ಇದು ಲಕ್ಷಾಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ.

ಮಧ್ಯಪ್ರಾಚ್ಯ ಯುದ್ದದಿಂದಾಗಿ ದೇಶದ ಆರ್ಥಿಕತೆ ಅಲುಗಾಡುತ್ತಿರುವ ನಡುವೆಯೇ, ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಲಾರಂಭಿಸಿದೆ. ಇಂಧನ, ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆಯಿಂದ ಕಂಗಲಾಗಿದ್ದ ಜನರಿಗೆ ಖಾಸಗಿ ಬಸ್‌ ಮಾಲೀಕರು ಮತ್ತೊಂದು ಶಾಕ್‌ ಕೊಟ್ಟಿದ್ದಾರೆ. ಇಂದು ತಡರಾತ್ರಿಯಿಂದ ಜಾರಿಗೆ ಬರುವಂತೆ ಬಸ್‌ ಟಿಕೆಟ್‌ ದರ ಹೆಚ್ಚಾಗುತ್ತಿದ್ದು. ಈಗಾಗಲೇ ಬೆಲೆ ಏರಿಕೆಯಿಂದ ಸೋತು ಸುಣ್ಣವಾಗಿರುವ ಜನರಿಗೆ ಇದು ಮತ್ತೊಂದು ಹೊರೆಯಾಗಲಿದೆ.

 ಸಿಎನ್‌ಜಿ ದರವೂ ಏರಿಕೆ...!

ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾದ ಬೆನ್ನಲ್ಲೇ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(CNG) ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿ ಸಿಎನ್‌ಜಿ ದರವನ್ನು 2 ರೂ. ಏರಿಸಲಾಗಿದೆ. ಪರಿಷ್ಕೃತ ದರ ಇಂದು ಬೆಳಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ 1 ಕೆಜಿ ಸಿಎನ್‌ಜಿ ದರ 93 ರೂ.ಗೆ ಏರಿಕೆಯಾಗಿದೆ.

ರವಿ ಕುಮಾರ್ ಎನ್ ನ್ಯೂಸ್ ಡೆಸ್ಕ್ 

By thebigbulletin.com - 15-05-2026


Ads in Post