Search


ತಲೆ ಕಡಿತೀವಿ ಪುನೀತ್‌ ಕೆರೆಹಳ್ಳಿ; ಈದ್‌ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ

ಬೆಂಗಳೂರು: ರಾಜ್ಯದೆಲ್ಲಡೆ ಈದ್‌ ಮಿಲಾದ್‌ ಹಬ್ಬವನ್ನ ವಿಜೃಂಭಣೆಯಿಂದ ಮುಸ್ಲಿಂ ಸಮುದಾಯ ಆಚರಿಸಿದ್ದು, ಬೆಂಗಳೂರಿನಲ್ಲಿ ಮಾತ್ರ ಈದ್‌ ಮೆರವಣಿಗೆ ವೇಳೆ ಮುಸ್ಲಿಂ ಪುಂಡರು ಅಟ್ಟಹಾಸ ಮೆರೆದಿದ್ದಾರೆ, ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್‌ ಕರೆಹಳ್ಳಿ ವಿರುದ್ಧ ಘೋಷಣೆ ಕೂಗಿರುವ ಕಿಡಿಗೇಡಿಗಳು, ರಾಷ್ಟ್ರರಕ್ಷಣಾ ಪಡೆಯ ಸದಸ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ,

ಬಸವನಗುಡಿ ಬಳಿ ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಂ ಗೂಂಡಾಗಳಿಂದ ಪುನೀತ್ ಕೆರೆಹಳ್ಳಿ ಕಚೇರಿ ಬಳಿ ಗೂಂಡಾ ವರ್ತನೆ ಮಾಡಿದ್ದಲ್ಲದೇ ಹಿಂದೂ ಕಾರ್ಯಕರ್ತ ಮುರುಳಿ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪುಂಡರು ಗೂಂಡಾಗಿರಿ ಮಾಡಿದ್ದು, ಪುನೀತ್‌ ಕರೆಹಳ್ಳಿಗೆ ʻಸರ್ ತಾನ್ ಸೆ ಜುದಾʻ (ತಲೆ ಕಡಿಯುತ್ತೇವೆ) ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು ಬಸವನಗುಡಿ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ವಿಕ್ಟೋರಿಯಾ ಆಸ್ಪತ್ರೆಗೆ ಪುನೀತ್ ಕೆರೆಹಳ್ಳಿ, ತೇಜಸ್ ಗೌಡ, ನಿತಿನ್ ಅರಸು ತೆರಳುವ ವೇಳೆ ಪೊಲೀಸ್ ವಾಹನವನ್ನು ಹಿಂಬಾಲಿಸಿ ಅಲ್ಲಾ ಅಕ್ಬರ್ ಘೋಷಣೆಗಳನ್ನು ಕೂಗಿದ್ದಾರೆ.

By Ravikumar - 26-08-2026


Ads in Post